ಡಿಸಿಎಂ ಹುದ್ದೆ ಸೃಷ್ಟಿ ಪಕ್ಕಾ, ಖಚಿತಪಡಿಸಿದ ಸಿಎಂ..! ಎಷ್ಟು ,ಯಾರು ಎಂಬುದೇ ಸದ್ಯದ ಸಸ್ಪೆನ್ಸ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ. ಆ. 25 : ರಾಷ್ಟೀಯ ನಾಯಕರ ಸೂಚನೆಯಂತೆ ಉಪಮುಖ್ಯಮಂತ್ರಿ ಹುದ್ದೆಯನ್ನು ಕೆಲವರಿಗೆ ನೀಡಲಾಗುವುದು.ಅದು ಎಷ್ಟು ಎಂಬುದು ನಾಳೆ ( ಸೋಮವಾರ ) ಗೊತ್ತಾಗಲಿದೆ ಎಂಬುದರ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚನೆಯಂತೆ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಲಾಗುವುದು. ಇದು ಒಂದೋ ,ಎರಡೋ ಎಂಬುದಕ್ಕೆ ಸೋಮವಾರದವರೆಗೂ ಕಾಯಬೇಕಾಗುತ್ತದೆ ಎಂದು ಸೂಚ್ಯವಾಗಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ನಾಯಕರ ಆದೇಶವನ್ನು ನಾವು ಪಾಲಿಸಲೇಬೇಕು.ಹೀಗಾಗಿ ಡಿ.ಸಿ.ಎಂ ಸ್ಥಾನ ಸೃಷ್ಟಿಯಾಗಲಿದೆ ಎಂದರು. ನೂತನ ಸಚಿವರಿಗೆ ಇಂದು ಸೋಮವಾರಖಾತೆಗಳನ್ನು ಹಂಚಿಕೆ ಮಾಡಲಾಗುವುದು.ಬೆಳಗ್ಗೆ 10 ಗಂಟೆಯೊಳಗೆ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.

ನೂತನ ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆ ನಾಳೆ ಪೂರ್ಣ ವಾಗಲಿದೆ. ನಾಳೆ ರಾಜ್ಯ ಸಚಿವ ಸಂಪುಟ ಸಭೆಯಿದೆ. ಸಚಿವರು ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಭೇಟಿ ನೀಡಿ ಅಧಿಕಾರಿಗಳ ಜೊತೆ ಸಮೀಕ್ಷೆ ನಡೆಸಿದ್ದಾರೆ.

ಇದರ ಬಗ್ಗೆಯೂ ಚರ್ಚೆ ಮಾಡುವುದಾಗಿ ನುಡಿದರು. ಲಕ್ಷ್ಮಣ್ ಸವದಿಗೆ ಸಚಿವ ಸ್ಥಾನ ನೀಡಿರುವುದಕ್ಕೆ ಕೆಲವರಿಗೆ ವಿರೋಧ ಇರುವುದು ಸತ್ಯ. ಎಲ್ಲವನ್ನೂ ಸರಿಪಡಿಸಿಕೊಂಡು ಸರ್ಕಾರ ಮುನ್ನಡೆಸುವುದಾಗಿ ಹೇಳಿದರು.

ಬೆಳಗಾವಿ ಜಿಲ್ಲೆಗೆ ಸಂಪುಟದಲ್ಲಿ ಮತ್ತೊಂದು ಮಂತ್ರಿ ಸ್ಥಾನ ನೀಡಲಾಗುವುದು.ಸಣ್ಣ – ಪುಟ್ಟ ಸಮಸ್ಯೆಗಳಿದ್ದರೂ ಎಲ್ಲಾವನ್ನು ನಿಬಾಯಿಸುತ್ತೇನೆ ಎಂದರು. ಸಂಪುಟ ರಚನೆಯಾದ ಬಳಿಕ ಸಚಿವ ಸ್ಥಾನ ವಂಚಿತ ಕೆಲವರು ಅಸಮಾಧಾನಗೊಂಡಿದ್ದಾರೆ. ಯಾರಿಗೆ ಮಂತ್ರಿ ಸ್ಥಾನ ಸಿಗದವರಿಗೆ ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ನೀಡುವ ಆಶ್ವಾಸನೆ ನೀಡಿದರು.

ನಮ್ಮ ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ.  ಕಾಂಗ್ರೆಸ್ – ಜೆಡಿಎಸ್ ಆಂತರಿಕ ಕಚ್ಚಾಟ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗಲಿದೆ ಎಂದು ಭವಿಷ್ಯ ನುಡಿದರು.

ವಿಶ್ವ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಬಂಗಾರದ ‌ಪದಕ ಗೆದ್ದ ಪಿ.ವಿ.ಸಿಂಧೂ ಗೆ ರಾಜ್ಯ ಸರ್ಕಾರ ಐದು ಲಕ್ಷ ರೂ ಬಹುಮಾನ ನೀಡಲಿದೆ ಎಂದು ಘೋಷಿಸಿದರು.

ಕಳೆದ ತಿಂಗಳ 26ರಂದು ಮುಖ್ಯಮಂತ್ರಿಯಾಗಿ ಬಿಎಸ್‌ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ದರು. 25 ದಿನಗಳ ನಂತರ ಸಂಪುಟ ರಚನೆ ಮಾಡಿದ್ದರು. 17 ಸಚಿವರು ಇದೇ 20ರಂದು ಪ್ರಮಾಣ ವಚನ ಸ್ವೀಕರಿಸಿದ್ದರು.

Facebook Comments

Sri Raghav

Admin