ಆಪ್ತಮಿತ್ರ ಅನಂತ್‍ಕುಮಾರ್ ಅವರನ್ನು ನೆನೆದ ಸಿಎಂ ಯಡಿಯೂರಪ್ಪ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.22- ಇಂದು ಮಾಜಿ ಕೇಂದ್ರ ಸಚಿವ ದಿವಂಗತ ಅನಂತ್‍ಕುಮಾರ್ ಅವರ ಜನ್ಮದಿನವಾಗಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಸ್ಮರಿಸಿದ್ದಾರೆ.

ಟ್ವೀಟ್ ಮಾಡುವ ಮೂಲಕ ಸ್ಮರಣೆ ಮಾಡಿದ ಸಿಎಂ, ಇಂದು ನನ್ನ ಆತ್ಮೀಯ ಮಿತ್ರ, ದಶಕಗಳ ರಾಜಕೀಯ ಜೀವನದ ಒಡನಾಡಿ, ಸಾರ್ವಜನಿಕ ಜೀವನದಲ್ಲಿ ಅಚ್ಚಳಿಯದ ನೆನಪು, ಸಾಧನೆ, ಸಾರ್ಥಕತೆಗಳನ್ನು ಬಿಟ್ಟುಹೋಗಿರುವ ಹಿರಿಯ ನಾಯಕ ಅನಂತಕುಮಾರ್ ಅವರ ಜನ್ಮದಿನ.

ಲಕ್ಷಾಂತರ ಕಾರ್ಯಕರ್ತರ ಪಾಲಿಗೆ ಸದಾ ಸ್ಫೂರ್ತಿಯಾಗಿರುವ ಅನಂತಕುಮಾರ್, ರಾಜ್ಯದಲ್ಲಿ ಪಕ್ಷದ ಬೆಳವಣಿಗೆ ಮತ್ತು ಸಂಘಟನೆಗೆ ನೀಡಿದ ಕೊಡುಗೆ ಅನನ್ಯ ಎಂದು ಬರೆದುಕೊಂಡಿದ್ದಾರೆ.

ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್ ಅವರು 2018ರ ನವೆಂಬರ್ 12 ರಂದು ನಸುಕಿನ ಜಾವ 2 ಗಂಟೆ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ಅನಂತ್ ಕುಮಾರ್ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿದಿತ್ತು, ರಾಷ್ಟ್ರ ಹಾಗೂ ರಾಜ್ಯದ ಹಿರಿಯ ನಾಯಕರು ಅವರ ಆತ್ಮಕ್ಕೆ ಶಾಂತಿ ಕೋರಿದ್ದರು.

Facebook Comments

Sri Raghav

Admin