ನಂಗೂ ಸ್ವಲ್ಪ ಟೈಮ್ ಕೊಡಿ ಪ್ಲೀಸ್ : ಅಮಿತ್ ಷಾ ಬಿಎಸ್ವೈ ಮತ್ತೊಮ್ಮೆ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.14 – ಕಡೆಪಕ್ಷ ತಮಗೆ 16ರಂದು ನವದೆಹಲಿಗೆ ಬರಲು ಸಮಯವನ್ನು ನಿಗದಿಪಡಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರಿಗೆ ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ. ಇಂದು ಬಿಎಸ್‍ವೈ ನವದೆಹಲಿಯಲ್ಲಿ ಅಮಿತ್ ಷಾ ಅವರನ್ನು ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಬಿಡುವುದಿಲ್ಲ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಕಾರಣ ಉಭಯ ನಾಯಕರ ಭೇಟಿ ಸಾಧ್ಯವಾಗಿರಲಿಲ್ಲ.

ಇದೀಗ ಪುನಃ ಮತ್ತೊಮ್ಮೆ ಅಮಿತ್ ಷಾ ಅವರ ಭೇಟಿಗೆ ಸಮಯವನ್ನು ಗೊತ್ತುಪಡಿಸುವಂತೆ ಸಿಎಂ ಕೋರಿದ್ದಾರೆ. ಇಂದು ಮತ್ತು ನಾಳೆ ಅಧಿಕೃತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು 16ರಂದು(ಗುರುವಾರ) ನೀವು ಬಯಸಿದರೆ ನವದೆಹಲಿಗೆ ಬಂದು ಭೇಟಿಯಾಗುವೆ ಎಂದು ಮನವಿ ಮಾಡಿದ್ದಾರೆ.ಈಗಲೂ ಸಹ ದೆಹಲಿ ವರಿಷ್ಠರಿಂದ ಯಾವುದೇ ಆಶ್ವಾಸನೆ ಬಂದಿಲ್ಲ. ಹೀಗಾಗಿ ಅವರ ದೆಹಲಿ ಭೇಟಿ ಇನ್ನು ತೂಗುಯ್ಯಾಲೆಯಲ್ಲೇ ಇದೆ.

# ನಾಯಕರ ಭೇಟಿ:  ಇದರ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ.ಗೋಪಾಲಯ್ಯ ಹಾಗೂ ಮಾಜಿ ಸಚಿವ ಉಮೇಶ್ ಕತ್ತಿ ಡಾಲರ್ಸ್ ಕಾಲೋನಿಯ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು.

ಬೆಳ್ಳಂಬೆಳಗ್ಗೆಯೇ ಸಿಎಂ ಅವರ ನಿವಾಸಕ್ಕೆ ಆಗಮಿಸಿದ ಉಮೇಶ್ ಉ ಕತ್ತಿ ಅವರು ಕೆಲ ನಿಮಿಷ ಗೌಪ್ಯವಾಗಿ ಮಾತುಕತೆ ನಡೆಸಿದರು. ಇದರ ಬೆನ್ನಲ್ಲೇ ಗೋಪಾಲಯ್ಯ ಕೂಡ ಆಗಮಿಸಿ ಸಂಪುಟ ವಿಸ್ತರಣೆ ಸಂಬಂಧ ಚರ್ಚೆ ಮಾಡಿದ್ದಾರೆ.

ಒಂದೆಡೆ ದೆಹಲಿ ವರಿಷ್ಠರು ಬಿಎಸ್‍ವೈಗೆ ಸಂಪುಟ ವಿಸ್ತರಣೆ ಬಗ್ಗೆ ಅನುಮತಿ ನೀಡದಿರುವುದು ಮತ್ತೊಂದೆಡೆ ಆಕಾಂಕ್ಷಿಗಳು ಮುಖ್ಯಮಂತ್ರಿಗಳ ನಿವಾಸದತ್ತ ದಿನಂಪ್ರತಿ ದಾಂಗುಡಿ ಇಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಬಿಎಸ್‍ವೈ ಅವರು ಅಮಿತ್ ಶಾ ಅವರ ಭೇಟಿಗೆ ಸಮಯ ನಿಗದಿ ಮಾಡುವಂತೆ ಕೋರಿದ್ದಾರೆ.

Facebook Comments

Sri Raghav

Admin