ಲಾಕ್‍ಡೌನ್ ಸಂದರ್ಭದಲ್ಲಿ ಹೃದಯಾಘಾತದಿಂದ ಶೇ.4ರಷ್ಟು ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.9- ಲಾಕ್‍ಡೌನ್ ಸಂದರ್ಭದಲ್ಲಿ ಅಂದರೆ ಏಪ್ರಿಲ್‍ನಿಂದ ಸೆಪ್ಟೆಂಬರ್‍ವರೆಗೆ ನಗರದಲ್ಲಿ ಹೃದಯಾಘಾತದಿಂದ ಮೃತಪಟ್ಟರ ಸಂಖ್ಯೆ ಶೇ.4 ರಷ್ಟು ಹೆಚ್ಚಳವಾಗಿದೆ ಎಂದು ಜಯದೇವ ಹೃದ್ರೋಗ ವಿvನ ಮತ್ತು ಸಂಶೋ ಧನಾ ಸಂಸ್ಥೆಯ ನಿರ್ದೇಶಕರಾದ ಡಾ.ಸಿ.ಎನ್. ಮಂಜುನಾಥ್ ಮಾಹಿತಿ ನೀಡಿದ್ದಾರೆ. ಏಪ್ರಿಲ್‍ನಿಂದ ಸಪ್ಟೆಂಬರ್‍ವರೆಗೂ ಅತಿ ಹೆಚ್ಚು ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಲಾಕ್‍ಡೌನ್ ವೇಳೆ ಸೂಕ್ತ ಚಿಕಿತ್ಸೆ ಪಡೆಯದ ಹೃದ್ರೋಗಿಗಳು ಸಾವನ್ನಪ್ಪಿದ್ದಾರೆ ಎಂದಿದ್ದಾರೆ.

ಕೊರೊನಾಗೆ ಹೆದರಿ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಹೋಗದ ಕಾರಣ. ನಿರ್ಲಕ್ಷ್ಯ ತೋರಿಸಿ ಹೃದಯ ಸಂಬಂಧಿಸಿದ ಖಾಯಿಲೆಗೆ ಒಳಗಾದವರು ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕೆಲ ಆಸ್ಪತ್ರೆಗಳು ಕೋವಿಡ್ ಡ್ಯೂಟಿಯಲ್ಲಿರು ವಾಗ ಬೇರೆ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿಲ್ಲ. ಹೃದಯ ಸಮಸ್ಯೆ ಇರೋ ರೋಗಿಗಳಿಗೆ ಸೋಂಕು ಕಾಣಿಸಿಕೊಂಡ ಕಾರಣ ರಕ್ತನಾಳಗಳು ಬ್ಲಾಕ್ ಆದ್ದರಿಂದ ಹಾರ್ಟ್ ಅಟ್ಯಾಕ್‍ಗಳಿಂದ ಸಾವನ್ನಪ್ಪಿದವರ ಸಂಖ್ಯೆ ಶೇ.4ರಷ್ಟು ಹೆಚ್ಚಳವಾಗಿದೆ ಎಂದು ಡಾ.ಮಂಜುನಾಥ್ ತಿಳಿಸಿದ್ದಾರೆ.

Facebook Comments