ಕಲ್ಲಿದ್ದಲು ಹಗರಣದಲ್ಲಿ ಕೇಂದ್ರದ ಮಾಜಿ ಸಚಿವ ದಿಲೀಪ್‍ರಾಯ್‍ಗೆ 3 ವರ್ಷ ಜೈಲುಶಿಕ್ಷೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.26- ಕಲ್ಲಿದ್ದಲು ಹಗರಣದಲ್ಲಿ ಅಪರಾ ಎಂದು ಘೋಷಿಸಲ್ಪಟ್ಟಿದ್ದ ಕೇಂದ್ರದ ಮಾಜಿ ಸಚಿವ ದಿಲೀಪ್‍ರಾಯ್‍ಗೆ ವಿಶೇಷ ನ್ಯಾಯಾಲಯ 3 ವರ್ಷಗಳ ಜೈಲುಶಿಕ್ಷೆ ವಿಸಿದೆ.1996ರಲ್ಲಿ ಜಾರ್ಖಂಡ್ ರಾಜ್ಯದಲ್ಲಿ ಕಲ್ಲಿದ್ದಲು ಗಣಿಗಾರಿಕೆಗೆ ನಿಯಮಬಾಹಿರವಾಗಿ ಅನುಮತಿ ನೀಡಿ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟು ಮಾಡಿದ್ದರು.

ಈ ಪ್ರಕರಣ ದೇಶದಾದ್ಯಂತ ಸಂಚಲನ ಮೂಡಿಸಿತ್ತು. 20 ವರ್ಷಗಳ ನಂತರ ಈಗ ದಿಲೀಪ್‍ರೈ ಅಪರಾ ಎಂದು ಘೋಷಿಸಿದ ಸಿಸಿಬಿ ವಿಶೇಷ ನ್ಯಾಯಾಲಯ ಇಂದು ತೀರ್ಪು ನೀಡಿದ್ದು 3 ವರ್ಷಗಳ ಜೈಲುಶಿಕ್ಷೆಯನ್ನು ಆದೇಶಿಸಿದೆ.

ಇದಕ್ಕೆ ಸಹಕರಿಸಿದ ಮತ್ತಿಬ್ಬರಿಗೂ ಕೂಡ ಕಾರಾಗೃಹ ಶಿಕ್ಷೆ ವಿಸಲಾಗಿದೆ. ಅಟಲ್‍ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ದಿಲೀಪ್ ರೈ ಕಲ್ಲಿದ್ದಲು ಸಚಿವಾಲಯದ ರಾಜ್ಯ ಸಚಿವರಾಗಿದ್ದರು. ಕಳೆದ ಅಕ್ಟೋಬರ್ 14 ರಂದು ಈ ಬಗ್ಗೆ ಸಂಪೂರ್ಣ ವಿಚಾರಣೆಯನ್ನು ಸಿಬಿಐ ಕೋರ್ಟ್ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು.

Facebook Comments

Sri Raghav

Admin