ಮುಂಬೈನಲ್ಲಿ ಕೊಕೈನ್ ವಶ : ವಿದೇಶಿ ವ್ಯಕ್ತಿ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಜ.2- ನಗರದ ಸಾಂತಾಕ್ರೂಸ್‍ನಲ್ಲಿ 44 ವರ್ಷದ ಐವರಿ ಕೋಸ್ಟ್‍ನ ಪ್ರಜೆಯನ್ನು ಬಂಧಿಸಿ 204 ಗ್ರಾಮ್ ಕೊಕೈನ್ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಮಾದಕ ವಸ್ತುಗಳ ಮಾರುಕಟ್ಟೆಯಲ್ಲಿ ಇದರ ಮೌಲ್ಯ 51 ಲಕ್ಷ ರೂ.ಗಳಾಗಲಿದ್ದು, ಐವರಿಕೋಸ್ಟ್‍ನ ಹೊನೊರ್ ಇಗ್ವೆ ಗಹಿ ಎಂಬ ವ್ಯಕ್ತಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಎಂದು ಮಾದಕ ವಸ್ತು ವಿರೋಧಿ ಕೋಶ (ಎಎನ್‍ಸಿ) ವರದಿ ಮಾಡಿದೆ.

ಈ ಐವರ ಕೋಸ್ಟ್ ಪ್ರಜೆಯ ಕಾರನ್ನು ಎಎನ್‍ಸಿ ಬಾಂದ್ರಾ ಘಟಕವು ಅನುಮಾನದ ಮೇಲೆ ವಕೋಲಾದಲ್ಲಿ ತಡೆದು ಶೋಧ ನಡೆಸಿದಾಗ ಮಾದಕ ವಸ್ತು ಇರುವುದು ಪತ್ತೆಯಾಗಿದೆ. ಈತ ನವಿ ಮುಂಬಯಿಯ ತುರ್ಬೆಯಲ್ಲಿ ವಾಸಿಸುತ್ತಿದ್ದ ಎಂದು ತಿಳಿದುಬಂದಿದೆ.  ಮಾದಕ ಜಾಲದ ಪತ್ತೆಗಾಗಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಎಎನ್‍ಸಿ ತಿಳಿಸಿದೆ.

Facebook Comments