ತೆಂಗಿನ ಕಾಯಿ ಕಳ್ಳರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಸೆ.17- ಹಲವಾರು ವರ್ಷಗಳಿಂದ ತೋಟಗಳಲ್ಲಿ ತೆಂಗಿನ ಕಾಯಿ ಕದಿಯುತ್ತಿದ್ದ 7 ಮಂದಿಯನ್ನು ಸಾಲಿಗ್ರಾಮ ಪೊಲೀಸರು ಬಂಧಿಸಿದ್ದಾರೆ. ಕೆ.ಆರ್. ನಗರದ ಪ್ರದೀಪ್, ಸೋಮಶೇಖರ್, ರಾಜು, ಪ್ರಜ್ವಲ್, ಮಹದೇವ, ಯೋಗೀಶ ಹಾಗೂ ಅಭಿ ಬಂಧಿತ ಆರೋಪಿಗಳು. ಬಂಧಿತರಿಂದ ಪೊಲೀಸರು 60 ಸಾವಿರ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.

ಮಿರ್ಲೆ ಗ್ರಾಮದ ನಾಗೇಶ್ ಮತ್ತು ವಿದ್ಯಾಶ್ರೀ, ಸಾಲಿಗ್ರಾಮದ ನರಸಿಂಹೇಗೌಡ, ಓಲ್ಡ್ ಮಿರ್ಲೆಯ ಗಣೇಶ ಹಾಗೂ ಭೇರ್ಯ ರಾಜಯ್ಯ ಎಂಬುವರ ಜಮೀನುಗಳಲ್ಲಿನ ಮರಗಳಿಂದ ತೆಂಗಿನಕಾಯಿ ಕದಿಯುತ್ತಿದ್ದರು.

ಕದ್ದ ತೆಂಗಿನಕಾಯಿ ಸಾಗಿಸಲು ಬಳಸುತ್ತಿದ್ದು 2 ಸರಕು ಸಾಗಣೆ ಆಟೋಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಿಪಿಐ ರಾಜು ಎಎಸ್‍ಐ ಗಳಾದ ಆರತಿ, ಚೇತನ್, ಹೇಮಂತ್, ಸೋಮಣ್ಣ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾನೆ.

Facebook Comments