ತೆಂಗಿನ ಮರದಿಂದ ಬಿದ್ದು ರೈತ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

coconut treeಪಿರಿಯಾಪಟ್ಟಣ, ಜ.9- ಸ್ವಂತ ಜಮೀನಿನಲ್ಲಿ ಇದ್ದ ತೆಂಗಿನ ಮರ ಏರಲು ಹೋಗಿ ರೈತನೋರ್ವ ಸಾವನಪ್ಪಿರುವ ಘಟನೆ ನಡೆದಿದೆ. ಪಟ್ಟಣದ ಉಪ್ಪಾರಗೇರಿ ನಿವಾಸಿ ರಂಗಸ್ವಾಮಿ (45) ಮೃತಪಟ್ಟಿರುವ ರೈತ.

ಸರ್ವೆ ನಂಬರ್ 353ರಲ್ಲಿ 28 ಕುಂಟೆ ಜಮೀನಿದ್ದು ಇರದಲ್ಲಿ ಇದ್ದ ತೆಂಗಿನ ಮರದಲ್ಲಿ ಕಾಯಿಗಳನ್ನು ಕೀಳಲು ಮರವೇರಿದ್ದಾಗ ಆಯತಪ್ಪಿಬಿದ್ದು ಗಂಭೀರವಾಗಿ ಗಾಯಗೊಂಡಿದರು. ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ಕರೆತಂದ ವೇಳೆ ರಂಗಸ್ವಾಮಿ ಮೃತಪಟ್ಟಿದ್ದಾರೆ. ಈ ಸಂಬಂಧ ಪಿರಿಯಾಪಟ್ಟಣ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Facebook Comments