ಶಾಲಾ ಕಟ್ಟಡದ ಮೇಲೆ ಬಿದ್ದ ತೆಂಗಿನ ಮರ

ಈ ಸುದ್ದಿಯನ್ನು ಶೇರ್ ಮಾಡಿ

School--01
ಬೇಲೂರು, ಜೂ.14- ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತೆಂಗಿನ ಮರವೊಂದು ಶಾಲಾ ಕಟ್ಟಡದ ಮೇಲೆ ಉರುಳಿ ಬಿದ್ದಿರುವ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೆ ಅಪಾಯ ಸಂಭವಿಸಿಲ್ಲ. ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗುತಿದ್ದು, ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬ್ರಿಟೀಷರ ಕಾಲದಲ್ಲಿ ನಿರ್ಮಿಸಿದ್ದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿದ್ದ ತೆಂಗಿನ ಮರವೊಂದು ಗಾಳಿ, ಮಳೆಗೆ ಸಿಲುಕಿ ಕಟ್ಟಡದ ಮೇಲೆ ಉರುಳಿ ಬಿದ್ದಿದೆ.

ಕಟ್ಟಡದ ಮೇಲೆ ತೆಂಗಿನ ಮರ ಉರುಳಿ ಬಿದ್ದ ರಭಸಕ್ಕೆ ಹಳೆಯದಾದ ಕಟ್ಟಡ ಸಾಕಷ್ಟು ಜಖಂಗೊಂಡಿದ್ದು, ಕಟ್ಟಡದ ಮೇಲ್ಬಾಗದ ಮೇಲ್ಚಾವಣಿಯಲ್ಲಿನ ಹೆಂಚುಗಳೆಲ್ಲ ಪುಡಿಪುಡಿಯಾಗಿವೆ. ಆಕಸ್ಮಾತ್ ಶಾಲೆ ನಡೆಯುತ್ತಿದ್ದ ಸಂದರ್ಭದಲ್ಲಿ ತೆಂಗಿನ ಮರ ಶಾಲಾ ಕಟ್ಟಡದ ಮೇಲೆ ಉರುಳಿ ಬಿದ್ದಿದ್ದರೆ ದೊಡ್ಡದಾದ ಅವಘಡ ಸಂಭವಿಸುವ ಸಾಧ್ಯತೆ ಇತ್ತು. ಅದೃಷ್ಟವಶಾತ್ ರಾತ್ರಿ ಸಮಯದಲ್ಲಿ ತೆಂಗಿನ ಮರ ಕಟ್ಟಡದ ಮೇಲೆ ಬಿದ್ದಿದ್ದರಿಂದ ಯಾವುದೆ ಅಪಾಯ ಸಂಭವಿಸಿಲ್ಲ.

Facebook Comments

Sri Raghav

Admin