ಇದು ವಿಶ್ವದ ಅತ್ಯಂತ ದೊಡ್ಡ ಕಾಫಿ ಕಪ್..!

ಈ ಸುದ್ದಿಯನ್ನು ಶೇರ್ ಮಾಡಿ

ಚೀನ್‍ಚೀನಾ (ಕೊಲಂಬಿಯಾ), ಜು.15(ಪಿಟಿಐ)- ಕೊಲಂಬಿಯಾದಲ್ಲಿ ಎರಡು ಹೊಸ ವಿಶ್ವ ದಾಖಲೆಗಳು ನಿರ್ಮಾಣವಾಗಿವೆ. ಒಂದು ಪ್ರಪಂಚದ ಅತ್ಯಂತ ದೊಡ್ಡ ಕಾಫಿ ಕಪ್ ನಿರ್ಮಾಣವಾಗಿರುವುದು ಒಂದು ದಾಖಲೆಯಾದರೆ, ಒಂದೇ ಸ್ಥಳದಲ್ಲಿ ಸಾವಿರಾರು ಮಂದಿ ಕಾಫಿ ರುಚಿ ನೋಡಿದ್ದು ಮತ್ತೊಂದು ಸಾಧನೆ.

ಕೊಲಂಬಿಯಾದ ಚೀನ್‍ಚೀನಾ ನಗರಿ ಎರಡು ವಿಶ್ವ ಗಿನ್ನಿಸ್ ದಾಖಲೆಗಳಿಗೆ ಸಾಕ್ಷಿಯಾಯಿತು. ಚೀನ್‍ಚೀನಾ- ರಾಷ್ಟ್ರದ ಕಾಫಿ ಬೆಳೆಯುವ ಪರ್ವತಮಯ ಪ್ರದೇಶ. ಕೊಲಂಬಿಯಾದ ಹೃದಯ ಭಾಗದಲ್ಲಿರುವ ಈ ಸುಂದರ ನಗರಿಯಲ್ಲಿ ವಿಶ್ವದ ಅತಿದೊಡ್ಡ ಕಾಫಿ ಕಪ್ ನಿರ್ಮಿಸಲಾಗಿದೆ.

ಇದು 20 ಟನ್ ಕಾಫಿ ಸಾಮಥ್ರ್ಯ ಹೊಂದಿದೆ. ವಲ್ರ್ಡ್ ಬಿಗ್ಗೆಸ್ಟ್ ಕಾಫಿ ಕಪ್ ಜೊತೆಗೆ ಒಂದೇ ಸ್ಥಳದಲ್ಲಿ ಅತಿ ಹೆಚ್ಚು ಜನರು ಕಾಫಿ ಹೀರಿದ ಮತ್ತೊಂದು ದಾಖಲೆಯೂ ಸೃಷ್ಟಿಯಾಗಿದೆ.

ಸ್ಥಳೀಯ ಕಾಫಿ ಸಂಸ್ಕøತಿ ಹಾಗೂ ಕಾಫಿ ಬೆಳೆಗಾರರ ಪ್ರಾಮುಖ್ಯತೆ ಮೇಲೆ ಬೆಳಕು ಚೆಲ್ಲಲು ಈ ವಿಶ್ವದಾಖಲೆ ಅಭಿಯಾನಗಳು ನಡೆದವು ಎಂದು ಕಾರ್ಯಕ್ರಮ ಸಂಘಟಕರು ಹೇಳುತ್ತಾರೆ.

Facebook Comments