ಭಾರೀ ಮಳೆ, ಗಾಳಿಗೆ ಕಟ್ಟಡ ಕುಸಿತ : ಇಬ್ಬರ ಸಾವು, 6 ಜನರರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ಕೊಯಮತ್ತೂರು, ಸೆ.7-ತಮಿಳುನಾಡಿನ ಕೊಯಮತ್ತೂರುಜಿಲ್ಲೆಯಲ್ಲಿ ನಿನ್ನರಾತ್ರಿ ಭಾರೀ ಮಳೆ ಮತ್ತು ಗಾಳಿಯಿಂದಾಗಿ ಕಟ್ಟಡವೊಂದು ಕುಸಿದು ಇಬ್ಬರು ಮೃತಪಟ್ಟು, ಕೆಲವರುಗಾಯಗೊಂಡಿದ್ದಾರೆ.

ಈ ದುರ್ಘಟನೆಯಲ್ಲಿಆರು ಮಂದಿಯನ್ನುರಕ್ಷಿಸಲಾಗಿದ್ದು, ಕುಸಿದು ಬಿದ್ದ ಕಟ್ಟಡಗಳ ಭಗ್ನಾವಶೇಷಗಳಲ್ಲಿ ಸಿಲುಕಿರುವ ಮೂವರ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿದೆ.

ಕೊಯಮತ್ತೂರಿನ ಚೆಟ್ರಿ ಸ್ಟ್ರೀಟ್‍ನಲ್ಲಿ ಮೂರು ಅಂತಸ್ತುಗಳ ಕಟ್ಟಡವೊಂದು ನಿನ್ನೆರಾತ್ರಿ ಬಾರೀ ಮಳೆ ಮತ್ತು ಬಿರುಗಾಳಿಗೆ ಕುಸಿದುಬಿತ್ತು. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ರಕ್ಷಣಾಕಾರ್ಯಕರ್ತರುಆರುಜನರನ್ನು ರಕ್ಷಿಸಿದರು. ಕಟ್ಟಡದ ಆವಶೇಷಗಳಿಂದ ಇಬ್ಬರ ಶವಗಳನ್ನು ಹೊರಕ್ಕೆತೆಗೆಯಲಾಗಿದೆ.

ಭಗ್ನಾವಶೇಷಗಳ ಅಡಿ ಸಿಲುಕಿರುವ ಇತರ ಮೂವರ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿದಿದ್ದು, ಕೊಯಮತ್ತೂರು ಜಿಲ್ಲಾ ಕಲೆಕ್ಟರ್ ಎಸ್. ರಾಜಮಣಿ ಉಸ್ತುವಾರಿ ವಹಿಸಿದ್ದಾರೆ.

Facebook Comments