ಕಾಲೇಜು ಆರಂಭದ ನಂತರ ಮತ್ತೆ ಕೊರೊನಾ ಕಳವಳ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.22- ರಾಜ್ಯದಲ್ಲಿ ಕಾಲೇಜು ಆರಂಭಿಸಿದ ನಂತರ ಮತ್ತೆ ಕೊರೊನಾ ಕಳವಳ ಶುರುವಾಗಿದೆ. ಕಾಲೇಜು ಆರಂಭ ಮಾಡಿ ಸರ್ಕಾರ ತಪ್ಪು ಮಾಡ್ತಾ? ಕೊರೊನಾ ಇರುವಾಗ ಕಾಲೇಜು ಆರಂಭ ಬೇಕಿತ್ತಾ? ಎಂಬ ಪ್ರಶ್ನೆಗಳು ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಪದವಿ – ಸ್ನಾತಕೋತ್ತರ ಪದವಿ ಕಾಲೇಜು ಆರಂಭವಾಗಿ ವಾರ ಕಳೆದಿದ್ದು, ಅಷ್ಟರಲ್ಲೇ 123 ಕಾಲೇಜು ವಿದ್ಯಾರ್ಥಿ, ಸಿಬ್ಬಂದಿಗಳಲ್ಲಿ ಕೊರೊನಾ ಕಾಣಿಸಿಕೊಂಡಿದೆ.

ಸರ್ಕಾರವೇನೋ ಕಾಲೇಜಿಗೆ ಬರೋದು ವಿದ್ಯಾರ್ಥಿಗಳಿಗೆ ಬಿಟ್ಟ ಆಯ್ಕೆ ಅಂತ ಅಡ್ಡಗೋಡೆ ಮೇಲೆ ದೀಪ ಇಟ್ಟು ನುಣುಚಿಕೊಳ್ಳುತ್ತಿದೆ. ಆದರೆ ಇತ್ತ ವಿದ್ಯಾರ್ಥಿಗಳ ಪಾಡು ಯಾರು ಕೇಳೋರಿಲ್ಲದಂತಾಗಿದ್ದು, ಭವಿಷ್ಯದ ದೃಷ್ಟಿಯಿಂದ ಕಾಲೇಜಿಗೆ ಬರಬೇಕೋ ಅಥವಾ ಆರೋಗ್ಯದ ಕಾರಣಕ್ಕೆ ಮನೆಯಲ್ಲೇ ಇರ ಬೇಕೋ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.

ಹೊರೆಗೆ ಬಂದರೆ ಕೊರೊನಾ, ಮನೆಯಲ್ಲೇ ಇರೋಣಾ ಅಂದರೆ ಆನïಲೈನ್ ಪಾಠಗಳಲ್ಲಿ ಗೊಂದಲ. ಪೋಷಕರ ಮನವೊಲಿಸಿ ಕಾಲೇಜಿಗೆ ಬಂದರೆ ಕೊರೊನಾ ಆತಂಕ ಅಂತ ದುಗುಡ ಶುರುವಾಗಿದೆ.ನ.16  ರಿಂದ ನ.19ರವರೆಗೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ಕಾಲೇಜು ಸಿಬ್ಬಂದಿ ಸೇರಿ ಸುಮಾರು 13,037 ಮಂದಿಗೆ ಕೋವಿಡ್ ಟೆ¸್ಟï ಮಾಡಿಸಿದ್ದು, ಇದರಲ್ಲಿ 89 ಜನರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಪಾಸಿಟಿವ್ ರೇಟ್ ಶೇ. 0.68 ರಷ್ಟು ಇದೆ.

ಬೆಂಗಳೂರಿನಲ್ಲಿ ಈ ರೀತಿಯಾದರೆ ಇತ್ತ ಬಳ್ಳಾರಿಯಲ್ಲಿ 7, ಹೊಸಪೇಟೆ 3, ಕೂಡ್ಲಿ 2, ಹಾಸನ 6 , ವಿಜಯಪುರದಲ್ಲಿ ಇಬ್ಬರಿಗೆ ಹಾಗೂ ಬಾಗಲಕೋಟೆಯಲ್ಲಿ 10 ಮಂದಿ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ ಕೋವಿಡ್ ವರದಿ ವಿಳಂಬ:ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರಲು ಇಚ್ಚಿಸಿದ್ದರೂ ಕೋವಿಡ್ ವರದಿ ಕೈ ಸೇರುವುದು ತಡವಾಗುತ್ತಿದೆ ಎಂಬ ಆರೋಪವಿದೆ.

ಕಾಲೇಜುಗಳಲ್ಲಿ ನಡೆಯುತ್ತಿರುವ ಕೋವಿಡ್ ಟೆ¸್ಟï ರಿಪೋರ್ಟ್ ಬರುವುದು ತಡವಾಗುತ್ತಿದೆ. ಹೀಗಾಗಿ, ಲ್ಯಾಬïನಿಂದಲ್ಲೇ ವರದಿ ನೇರ ಕಾಲೇಜಿಗೆ ತಲುಪಿಸುವ ಕೆಲಸ ಮಾಡಲಾಗುವುದು. ಅನ್ಯ ರಾಜ್ಯಗಳಲ್ಲಿ ಶಾಲಾ-ಕಾಲೇಜು ಆರಂಭಕ್ಕೆ ಬ್ರೇಕ್:ಈಗಾಗಲೇ ಹಲವು ರಾಜ್ಯ ಗಳಲ್ಲಿ ಶಾಲಾ-ಕಾಲೇಜು ಆರಂಭಿಸಲಾಗಿತ್ತು.

ಆದರೆ ಸೋಂಕು ಹೆಚ್ಚಾದ ಹಿನ್ನೆಲೆ ಮಹಾರಾಷ್ಟ್ರದಲ್ಲಿ ನ.23 ರಿಂದ ಆರಂಭವಾಗಬೇಕಿದ್ದ ಶಾಲಾ-ಕಾಲೇಜುಗಳಿಗೆ ಬ್ರೇಕ್ ಹಾಕಿದೆ. ಗುಜರಾತ್ ಸರ್ಕಾರ ಡಿ.31ರವರೆಗೆ ಶಾಲೆ ತೆರೆಯದಿರಲು ನಿರ್ಧಾರ ಮಾಡಲಾಗಿದೆ.

ಇತ್ತ ಹರಿಯಾಣದಲ್ಲೂ ಸೋಂಕಿತರ ಸಂಖ್ಯೆ ಏರುತ್ತಲಿದ್ದು, ಅಲ್ಲೂ ಸುಮಾರು 174 ವಿದ್ಯಾರ್ಥಿಗಳಿಗೆ , 107 ಶಿಕ್ಷಕರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ನ.30ರವರೆಗೆ ಶಾಲಾ-ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಒಟ್ಟಾರೆ ಕಾಲೇಜು ಆರಂಭವಾದರೂ ಕಷ್ಟ, ಆಗದೇ ಇದ್ದರೆ ನಷ್ಟ ಎಂಬ ಸ್ಥಿತಿ ವಿದ್ಯಾರ್ಥಿಗಳದ್ದಾಗಿದೆ.

Facebook Comments