ಶೇ.40ರಷ್ಟು ಕಮಿಷನ್ ವಿಚಾರ : ಬೊಮ್ಮಯಿ ತೀರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ,ಡಿ.23-ಗುತ್ತಿಗೆ ಕಾಮಗಾರಿಗಳ ಮೊತ್ತದ ಶೇಕಡ 40ರಷ್ಟು ಕಮಿಷನ್ ವಿಚಾರ ಸಂಬಂಧ ಪ್ರತಿಪಕ್ಷಕ್ಕೆ ಸೂಕ್ತ ಉತ್ತರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ತೀರುಗೇಟು ನೀಡಿದರು.

ಗುರುವಾರ ಪರಿಷತ್ತು ಪ್ರಶ್ನೋತ್ತರ ಕಲಾಪ ವೇಳೆ ಸದಸ್ಯ ಸಿಎಂ ಇಬ್ರಾಹಿಂ ಅವರು, ರಾಜ್ಯದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಕಾಮಗಾರಿಗಳ ಮೊತ್ತದ ಶೇಕಡ 40 ರಷ್ಟು ಮೊತ್ತದ ಲಂಚ ಪ್ರಶ್ನೆ ಇದೆ. ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಬೊಮ್ಮಯಿ ಅವರನ್ನು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ಅವರು, ನಾವೂ ಎಲ್ಲಿಗೆ ಹೋಗಲ್ಲ. ನಿಮ್ಮ 40 ರಷ್ಟು ಪ್ರಶ್ನೆಗೆ ಸೂಕ್ತ ರೀತಿಯಲ್ಲೇ ಉತ್ತರ ಕೊಡುತ್ತೇವೆ. ಸ್ವಲ್ಪ ಕಾಯಿರಿ ಎಂದು ನುಡಿದರು.

Facebook Comments