ತಿಂಡಿ-ಹಣದ ಆಮಿಷವೊಡ್ಡಿ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಧಾರವಾಡ, ಸೆ.25- ತಿಂಡಿ, ಹಣದ ಆಮಿಷವೊಡ್ಡಿ ದಡ್ಡಿ ಕಮಲಾಪುರದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯನ್ನು ಉಪನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದ ಶರಣಪ್ಪ ಫಕ್ಕೀರಪ್ಪ ತಳವಾರ (25) ಬಂತ ಆರೋಪಿ.

ಈತ ಬಾಲಕಿಗೆ ಎಗ್‍ರೈಸ್, ಗೋಬಿ ಮಂಚೂರಿಯಂತಹ ತಿಂಡಿ ಹಾಗೂ ಹಣದ ಆಸೆ ತೋರಿಸಿ, ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಇದಲ್ಲದೇ ಬಿಕ್ಷಾಟನೆ ತೊಡಗಿದ್ದ ಬಾಲಕಿಯ ಮೇಲೂ ದೌರ್ಜನ್ಯ ಎಸಗಿ ಸಿಕ್ಕು ಬಿದ್ದಾಗ ಧರ್ಮದೇಟು ಬಿದ್ದಿತ್ತು.

ಈ ಮಾಹಿತಿ ಆಧರಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಬಾಲಕಿಯನ್ನು ಪತ್ತೆ ಹಚ್ಚಿ ಆಪ್ತ ಸಮಾಲೋಚನೆ ಕೈಗೊಂಡಾಗ, ಬಾಲಕಿಯ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಆಗಿದ್ದು ಬೆಳಕಿಗೆ ಬಂದಿದೆ. ಈ ಕುರಿತಂತೆ ಜಿಲ್ಲಾ ಮಕ್ಕಳ ರಕ್ಷಣಾಧಿ ಕಾರಿ ಡಾ.ಕಮಲಾ ಬಲೂರ ಉಪನಗರ ಠಾಣೆಗೆ ದೂರು ನೀಡಿದ್ದರು.

ಈ ದೂರಿನ ಅನ್ವಯ ಉಪನಗರ ಠಾಣೆ ಪೋಲೀಸರು, ಮಾಹಿತಿ ಕಲೆ ಹಾಕಿ ಯುವಕ ಶರಣಪ್ಪನನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ದ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಂಡು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Facebook Comments