ಪೊಲೀಸ್ ವಸತಿ ಗೃಹದಲ್ಲೇ ಪತ್ನಿ, ಮಗನ ಕೊಂದು ಪೊಲೀಸ್ ಸಹಾಯಕ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ಪ್ರಯಾಗ್‍ರಾಜ್ : ಪೊಲೀಸ್ ವಸತಿ ಗೃಹದಲ್ಲೇ ಹೆಂಡತಿ ಹಾಗೂ ಮಗನನ್ನು ಕೊಂದು ಪೊಲೀಸ್ ಸಹಾಯಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಿಸರ್ವ್ ಪೊಲೀಸ್ ವಸತಿ ಗೃಹದಲ್ಲಿ ಸಂಭವಿಸಿದೆ.

ಬಾಲ್ ಗೋವಿಂದ್ (50) ತಮ್ಮ ಪತ್ನಿ ಚಂದ್ರಾವತಿ (45) ಹಾಗೂ ಮಗ ಸುನೀಲ್(28) ನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಸಹಾಯಕ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸ್ ವರಿಷ್ಠಾಧಿಕಾರಿ ಸತ್ಯಾರ್ಥ ಅನಿರುದ್ಧ್ ಪಂಚಾಬ್ ಅವರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಸ್ಥಳೀಯರ ಮಾಹಿತಿ ಪ್ರಕಾರ ಬಾಲ್‍ಗೋವಿಂದ್‍ರ ಕಿರಿಯ ಪುತ್ರ ಭರತ್ ಮಾನಸಿಕ ಅಸ್ವಸ್ಥನಾಗಿದ್ದು ಹಲವೆಡೆ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದಿದ್ದರಿಂದ ಮನನೊಂದು ಈ ರೀತಿಯ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ಪ್ರಕರಣ ದಾಖಲಿಸಿ ಕೊಂಡಿರುವ ಪ್ರಯಾಗ್‍ರಾಜ್ ಠಾಣೆ ಪೊಲೀಸರು ಮುಂದಿನ ಕ್ರಮಕೈಗೊಂಡಿ ದ್ದಾರೆ.

Facebook Comments