ಕೊರೊನಾಗೆ ಔಷಧಿ ಕಂಡು ಹಿಡಿಯಲು ಜಾಗತಿಕ ಮಟ್ಟದಲ್ಲಿ ಭಾರಿ ಪೈಪೋಟಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.15- ವಿಶ್ವವನ್ನೇ ಕಂಗೆಡಿಸಿರುವ ಮಹಾಮಾರಿ ಕೊರೊನಾಗೆ ಔಷಧಿ ಕಂಡು ಹಿಡಿದು ಈಗಾಗಲೇ ಪ್ರಯೋಗಾತ್ಮಕ ಪರೀಕ್ಷೆ ನಡೆಯುತ್ತಿದ್ದು, ಅದನ್ನು ಬಿಡುಗಡೆ ಮಾಡಲು ಜಾಗತಿಕ ಪೈಪೋಟಿ ಆರಂಭವಾಗಿದೆ.

ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಇಂದು ಹೇಳಿಕೆ ನೀಡಿದ್ದು, ದಾಖಲಾರ್ಹ ಸಮಯದಲ್ಲಿ ಅಮೆರಿಕಾ ಕೊರೊನಾಗೆ ಔಷಧಿಯನ್ನು ಬಿಡುಗಡೆ ಮಾಡಲಿದೆ ಎಂದು ಘೋಷಿಸಿದ್ದಾರೆ.

ರಷ್ಯಾ ಈಗಾಗಲೇ ತಾನು ಔಷಧಿ ಕಂಡು ಹಿಡಿದಿದ್ದು, ಮಾನವ ಪ್ರಯೋಗ ಮಾಡಿ ಯಶಸ್ವಿಯಾಗಿರುವುದಾಗಿ ಹೇಳಿಕೊಂಡಿತ್ತು. ಆಗಸ್ಟ್ ಮಧ್ಯ ಭಾಗದಲ್ಲಿ ಔಷಧಿಯನ್ನು ಬಿಡುಗಡೆ ಮಾಡುವ ಮುನ್ಸೂಚನೆಯನ್ನು ರಷ್ಯ ನೀಡಿತ್ತು.

ಈ ಹೇಳಿಕೆ ಹೊರ ಬೀಳುತ್ತಿದ್ದಂತೆ ಅಮೆರಿಕಾ ಪೈಪೋಟಿಗೆ ಬಿದ್ದಿದೆ. ಬ್ರೆಕಿಂಗ್ ಟೈಮ್‍ನಲ್ಲಿ ಅಮೆರಿಕಾ ಔಷಧಿ ಬಿಡುಗಡೆ ಮಾಡಲಿದ್ದೇವೆ. ಪ್ರಯೋಗಗಳು ತುರ್ತಾಗಿ ನಡೆಯುತ್ತಿದೆ. ಎಲ್ಲವೂ ಯಶಸ್ವಿ ಹಾದಿಯಲ್ಲಿದೆ ಎಂದು ಟ್ರಂಪ್ ಘೋಷಣೆ ಮಾಡಿದ್ದಾರೆ.

ಆದರೆ ಕೊರೊನಾಗೆ ಔಷಧಿ ಕಂಡು ಹಿಡಿಯುವ ನಿಟ್ಟಿನಲ್ಲಿ ಅಮೆರಿಕಾ, ರಷ್ಯ, ಭಾರತ ದೇಶಗಳ ನಡುವೆ ಪೈಪೆÇೀಟಿ ಜೋರಾಗಿದೆ.ಭಾರತ ಭಾರತ್ ಬಯೋಟೆಕ್ ಸಂಸ್ಥೆ ಐಸಿಎಂಆರ್ ಸಂಸ್ಥೆಗಳು ಜಂಟಿಯಾಗಿ ಸಂಶೋಧನೆ ನಡೆಸುತ್ತಿದ್ದು, ಕೋವಾಕ್ಸಿನ್ ಎಂಬ ಮದ್ದನ್ನು ಪ್ರಯೋಗಾತ್ಮಕವಾಗಿ ಬಳಸಲಾಗುತ್ತಿದೆ.

ಪಾಟ್ನಾದ ಎಐಎಂಎಸ್ ಸಂಸ್ಥೆ ಈಗಾಗಲೇ ಮಾನವ ಪ್ರಯೋಗ ನಡೆಸಿದ್ದೇವೆ. ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯ ಸಹಯೋಗದಲ್ಲಿ ಪ್ರಯೋಗ ಉತ್ತಮ ಫಲಿತಾಂಶ ಕಾಣುತ್ತಿದೆ ಎಂದು ಭಾರತ ಹೇಳಿಕೊಂಡಿದೆ.

ವಿಶ್ವಾದ್ಯಂತ ನೂರಾರು ಕಂಪೆನಿಗಳು ಮತ್ತು ಸಂಸ್ಥೆಗಳು ಔಷಧಿ ಕಂಡು ಹಿಡಿಯುವ ರೆಸ್‍ನಲ್ಲಿವೆ. ಅದರಲ್ಲಿ 155ಕ್ಕೂ ಸಂಸ್ಥೆಗಳನ್ನು ಸಮರ್ಥವೆಂದು ಗುರುತಿಸಲಾಗಿದೆ.

ಈವರೆಗಿನ ಸಂಶೋಧನೆಯಲ್ಲಿ 23 ಔಷಧಿಗಳು ಬಳಕೆಗೆ ಅರ್ಹವಾದವು ಎಂದು ಪರಿಗಣಿಸಲಾಗಿದೆ. ಆದರೆ ಅಂತಿಮ ಫಲಿತಾಂಶ ಮಾತ್ರ ಇನ್ನೂ ಬರಬೇಕಿದೆ. ಎಲ್ಲವೂ ಪ್ರಯೋಗಾತ್ಮಕ ಹಂತದಲ್ಲಿದೆ. ಅಮೆರಿಕಾ, ಭಾರತ, ಚೀನಾ, ಆಸ್ಟ್ರೇಲಿಯಾ, ರಷ್ಯಾ ಸೇರಿ ಪ್ರಮುಖ ದೇಶಗಳು ಮಹಾಮಾರಿ ಹಿಮ್ಮೆಟ್ಟಿಸುವ ಮದ್ದಿನ ಹಿಂದೆ ಬಿದ್ದಿವೆ.

ಕಳೆದ ತಿಂಗಳಿನಿಂದಲೂ ಕೆಲವು ಔಷಧಿಗಳನ್ನು ಮಾನವ ಪ್ರಯೋಗಕ್ಕೆ ಒಳಪಡಿಸಲಾಗಿದೆ. ಅಮೆರಿಕಾ ಜುಲೈ 27ರಂದು ಅಂತಿಮ ಪರೀಕ್ಷೆ ನಡೆಸಲಿದೆ. ಈಗಾಗಲೇ 87 ಬಾರಿ ಪ್ರಯೋಗ ನಡೆಸಲಾಗಿದೆ.

ಅಮೆರಿಕಾ ಸರ್ಕಾರದ ಆರ್ಥಿಕ ನೆರವಿನಲ್ಲಿ ಮೇರಿಲ್ಯಾಂಡ್ ಮೂಲಕ ನೋವಾವ್ಯಾಕ್ಸ್ ಕಂಪೆನಿ ಔಷಧಿ ಅನ್ವೇಷಣೆ ಮಾಡಿದೆ ಎಂದು ಹೇಳಿಕೊಂಡಿದೆ.

ಭಾರತದಲ್ಲಿ ಐಸಿಎಂಆರ್ ನೇತೃತ್ವದಲ್ಲಿ ಕೋವಾಕ್ಸಿನ್ ಒಂದು ಸಾವಿರ ಮಂದಿಯ ಮೇಲೆ ಪ್ರಯೋಗ ನಡೆಸುತ್ತಿದೆ. ಕ್ಲಿನಿಕಲ್ ಟ್ರಯಲ್ ಮೊದಲ ಹಂತ ಈಗಾಗಲೇ ಜಾರಿಯಲ್ಲಿದೆ ಎಂದು ಭಾರತ ಹೇಳಿಕೊಂಡಿದೆ.

ರಷ್ಯಾ ವಿಶ್ವದಲ್ಲೇ ಮೊಟ್ಟ ಮೊದಲನೆಯದಾಗಿ ನಾವು ಕೊರೊನಾ ಔಷಧಿ ಬಿಡುಗಡೆ ಮಾಡುತ್ತೇವೆ ಎಂದು ಘೋಷಿಸಿಕೊಂಡಿದೆ.

Facebook Comments

Sri Raghav

Admin