ಇತ್ತೀಚೆಗೆ ನಿಧನರಾದ 13 ಮಂದಿ ಗಣ್ಯರಿಗೆ ವಿಧಾನಸಭೆಯಲ್ಲಿ ಸಂತಾಪ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.12-ಪೌರಾಡಳಿತ ಸಚಿವರಾಗಿದ್ದ ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ, ಕೇಂದ್ರದ ಮಾಜಿ ಸಚಿವ ವಿ.ಧನಂಜಯಕುಮಾರ್, ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಸೇರಿದಂತೆ ಇತ್ತೀಚೆಗೆ ನಿಧನರಾದ 13 ಮಂದಿ ಗಣ್ಯರಿಗೆ ವಿಧಾನಸಭೆಯಲ್ಲಿಂದು ಭಾವಪೂರ್ಣ ಸಂತಾಪ ಸೂಚಿಸಲಾಯಿತು.

ಇಂದು ಮಧ್ಯಾಹ್ನ ವಂದೇ ಮಾತರಂ ಗೀತೆಯೊಂದಿಗೆ ವಿಧಾನಸಭೆ ಪ್ರಾರಂಭವಾದಾಗ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಸಂತಾಪ ಸೂಚಕ ನಿರ್ಣಯವನ್ನು ಕೈಗೆತ್ತಿಕೊಂಡರು.

ಇತ್ತೀಚೆಗೆ ನಿಧನರಾದ ಪೌರಾಡಳಿತ ಸಚಿವರಾಗಿ ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ, ಕೇಂದ್ರ ಮಾಜಿ ಸಚಿವ ವಿ.ಧನಂಜಯಕುಮಾರ್, ವಿಧಾನಸಭೆಯ ಮಾಜಿ ಸದಸ್ಯರಾದ ಕೆ.ಎಲ್.ಶಿವಲಿಂಗೇಗೌಡ, ಎಸ್.ಎಸ್.ಅರಕೇರಿ, ಧಮಯಂತಿ ಭೋರೇಗೌಡ, ಚನ್ನವೀರಯ್ಯ ಶಾಂತಯ್ಯ ಮುತ್ತಿನ ಪೆಂಡಿಮಠ, ಡಾ.ವಿಜಯಕುಮಾರ್ ಖಂಡ್ರೆ, ಭೂಪಾಲ್ ಬಂಡಾರಿ .ಎಚ್, ಶಾರದವ್ವ ಎಂ.ಪಟ್ಟಣ, ಡಾ.ಎನ್.ಬಿ.ನಂಜಪ್ಪ , ಎಂ.ಸತ್ಯನಾರಾಯಣ, ಶಾಂಭಾಜಿ ಲಕ್ಷ್ಮಣ ಪಾಟೀಲ್ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಖಾತ್ಯ ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಅವರು ನಿಧನ ಹೊಂದಿರುವುದನ್ನು ಸದನದ ಗಮನಕ್ಕೆ ತಂದರು.

ಸಿ.ಎಸ್.ಶಿವಳ್ಳಿ ಅವರು 1962ರ ಮೇ 6ರಂದು ನವಲಗುಂದ ತಾಲ್ಲೂಕಿನ ಶಲವಡಿ ಗ್ರಾಮದಲ್ಲಿ ಜನಿಸಿದ್ದು, ಬಿಎ ಪಧವಿದರರಾಗಿ, ವೃತ್ತಿಯಲ್ಲಿ ಕೃಷಿಕರಾಗಿದ್ದರು. ರೈತಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಇವರು ಕಳಸಾ ಬಂಡೂರಿ ಜಾರಿಗಾಗಿ ಕುಂದಗೋಳದಿಂದ ಧಾರವಾಡದವರೆಗೆ ಪಾದಯಾತ್ರೆ ಮಾಡಿದ್ದಲ್ಲದೆ ದೆಹಲಿ ಜಂತರ್‍ಮಂತರ್‍ನಲ್ಲಿ ಧರಣಿ ನಡೆಸಿದ್ದರು.

ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅವರು ನಾಲ್ಕು ಭಾರಿ ಆಯ್ಕೆಯಾಗಿದ್ದರು. ಸರಳ ಸಜ್ಜನ ವ್ಯಕ್ತಿಯಾಗಿದ್ದ ಇವರು ಮಾ.22ರಂದು ನಿಧನರಾಗಿದ್ದಾರೆ ಎಂದು ಸಭಾಧ್ಯಕ್ಷರು ತಿಳಿಸಿದರು.

ಕೇಂದ್ರದ ಮಾಜಿ ಸಚಿವ ವಿ.ಧನಂಜಯ್ಯ ಕುಮಾರ್ ಅವರು ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿ ಜೈಲು ಸೇರಿದ್ದರು. ಆನಂತರ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡು ಮಂಗಳೂರು ಕ್ಷೇತ್ರದಿಂದ ವಿಧಾನಸಭೆಗೆ ಹಾಗೂ ಮಂಗಳೂರು ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

ಕೇಂದ್ರ ಸರ್ಕಾರದಲ್ಲಿ ನಾಗರಿಕ ವಿಮಾನಯಾನ, ಪ್ರವಾಸೋದ್ಯಮ, ಜವಳಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು . ಅವರು ಕಳೆದ ಮಾ.4ರಂದು ನಿಧನ ಹೊಂದಿದ್ದರು ಎಂದು ವಿಷಾದಿಸಿದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಸಾಹಿತಿ ಡಾ.ಗಿರೀಶ್ ಕಾರ್ನಾಡ್ ಅವರು ಮಹಾರಾಷ್ಟ್ರದ ಮಥೇರ್‍ನಲ್ಲಿ ಜನಿಸಿದ್ದರು. ಆಕ್ಸ್‍ಫರ್ಡ್ ವಿವಿಯಲ್ಲಿ ಎಂಎ ಪದವಿ ಪಡೆದಿದ್ದ ಅವರು ಕರ್ನಾಟಕ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದಿದ್ದರು.

ವೈಚಾರಿಕ ನೆಲೆಗಟ್ಟಿನ ಮೇಲೆ ಸಾಹಿತ್ಯ ರಚಿಸಿರುವ ಅವರು 1998ರಲ್ಲಿ ಜ್ಞಾನಪೀಠ ಪ್ರಶಸ್ತಿಗೆ ಪುರಸ್ಕøತರಾಗಿದ್ದರು. ನಾಟಕ, ಸಿನಿಮಾ ರಂಗದಲ್ಲಿ ತಮ್ಮದೇ ವಿಶೇಷ ಛಾಪು ಮೂಡಿಸಿದ್ದ ಅವರು, ಪದ್ಮಶ್ರೀ, ಪದ್ಮಭೂಷಣ, ಕಾಳಿದಾಸ ಸಮ್ಮಾನ್ , ಕರ್ನಾಟಕ ರಾಜ್ಯೋತ್ಸವ ಗುಬ್ಬಿ ವೀರಣ್ಣ ಪ್ರಶಸ್ತಿಗಳು ಭಾಜನರಾಗಿದ್ದರು.

ಪುರಾಣ, ಇತಿಹಾಸ, ಜನಪದಗಳಿಗೆ ಸಮಕಾಲೀನ ರಂಗ ವ್ಯಾಖ್ಯಾನ ನೀಡಿದ ಕಾರ್ನಾಡ್ ಅವರು ವಿವಿಧ ಅಕಾಡೆಮಿ ಪ್ರಶಸ್ತಿಗಳನ್ನು ಪಡೆದಿದ್ದರು.ಪ್ರಗತಿಪರ ಚಿಂತಕರಾಗಿದ್ದ ಅವರು ಜೂ.10ರಲ್ಲಿ ನಿಧನರಾದರು ಎಂದು ಸ್ಮರಿಸಿದರು.

ಇತ್ತೀಚೆಗೆ ನಿಧನರಾದ ಶಿವಲಿಂಗೇಗೌಡ, ಎಸ್.ಎಸ್.ಅರಕೇರಿ, ಧಮಯಂತಿ ಬೋರೇಗೌಡ, ಚನ್ನವೀರಯ್ಯ ಶಾಂತಯ್ಯ ಮುತ್ತಿನ ಪೆಂಡಿಮಠ, ಡಾ.ವಿಜಯಕುಮಾರ್ ಖಂಡ್ರೆ, ಭೂಪಾಲ್ ಬಂಡಾರಿ .ಎಚ್, ಶಾರದವ್ವ ಎಂ.ಪಟ್ಟಣ, ಡಾ.ಎನ್.ಬಿ.ನಂಜಪ್ಪ , ಎಂ.ಸತ್ಯನಾರಾಯಣ, ಶಾಂಭಾಜಿ ಲಕ್ಷ್ಮಣ ಪಾಟೀಲ್ ನಿಧನವನ್ನು ಪ್ರಸ್ತಾಪಿಸಿದ ಸಭಾಧ್ಯಕ್ಷರು ಮೃತರ ಗುಣಗಾನ ಮಾಡಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin