ಅಮೆರಿಕ ಸುಪ್ರೀಂ ನ್ಯಾಯಾಧೀಶೆಯಾಗಿ ಆಮಿ ಬರೆಟ್ ಪ್ರಮಾಣ ವಚನ ಸ್ವೀಕಾರ

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಅ.27-ಅಮೆರಿಕ ಸುಪ್ರೀಂಕೋರ್ಟ್‍ನ 115ನೇ ನ್ಯಾಯಾಧೀಶೆಯಾಗಿ ನ್ಯಾಯಮೂರ್ತಿ ಆಮಿ ಕೋನಿ ಬ್ಯಾರೆಟ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.  ನವೆಂಬರ್ 3ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮುನ್ನವೇ ತರಾತುರಿಯಲ್ಲಿ ಸರ್ವೋನ್ನತ ನ್ಯಾಯಾಲಯದ ನ್ಯಾಯಮೂರ್ತಿಯ ಆಯ್ಕೆ ನಡೆದಿದೆ.

ಆಮಿ ಆಯ್ಕೆಗಾಗಿ ನಡದ ಮತದಾನದಲ್ಲಿ ಆಡಳಿತಾರೂಢ ರಿಪಬ್ಲಿಕನ್ ಪಕ್ಷವು ನ್ಯಾಯಾಧೀಶೆ ಪರ 52 ಮತಗಳನ್ನು ಚಲಾಯಿಸಿದವು. ಆಮಿ ವಿರುದ್ಧ ವಿರೋಧಪಕ್ಷ ಡೆಮೊಕ್ರಾಟಿಕ್ ಸದಸ್ಯರು 48 ಮತಗಳನ್ನು ಹಾಕಿದರು.

ಶ್ವೇತಭವನದ ಸೌತ್ ಲಾನ್‍ನಲ್ಲಿ ನಡೆದ ಪ್ರಮಾಣ ವಚನ ಸಮಾರಂಭದಲ್ಲಿ ಹಿರಿಯ ನ್ಯಾಯಮೂರ್ತಿ ಕ್ಲಾರೆನ್ಸ್ ಥಾಮಸ್ ಪ್ರಮಾಣ ಬೋಧಿಸಿದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮಾರಂಭದಲ್ಲಿ ಪಾಲ್ಗೊಂಡರು.

Facebook Comments