ಈ ಬಾಬು ಓದಿರುವುದು ಕೇವಲ 5ನೇ ತರಗತಿ, ಸಂಪಾದಿಸಿದ್ದು1741 ಕೋಟಿ. ರೂ ಅಸ್ತಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.25- ಡಿಸೆಂಬರ್ 10ರಂದು 25 ವಿಧಾನ ಪರಿಷತ್ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ 121 ಅಭ್ಯರ್ಥಿಗಳು ಸ್ರ್ಪಧಿಸುತ್ತಿದ್ದು, ಸ್ಪರ್ಧಿಗಳು ಈಗಾಗಲೇ ತಮ್ಮ ಆಸ್ತಿ ಸಂಪತ್ತುಗಳನ್ನು ಘೋಷಣೆ ಮಾಡಿದ್ದಾರೆ. ಅದರಲ್ಲಿ ಹಲವರು ಕೋಟ್ಯಪತಿಗಳಾಗಿದ್ದಾರೆ. ಶಾಸಕರು, ಸಚಿವರುಗಳಿಂದಲೂ ಸಂಪತ್ತಿನಲ್ಲಿ ಮುಂದಿದ್ದಾರೆ.

ಬೆಂಗಳೂರು ನಗರದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಯೂಸಫ್ ಶರೀಫ್ ಬಾಬು ಆಯ್ಕೆಯಾಗಿ ಬಂದರೆ ರಾಜ್ಯದಲ್ಲಿರುವ ಅತಿ ಶ್ರೀಮಂತ ಶಾಸಕ ಎನಿಸಿಕೊಳ್ಳಲಿದ್ದಾರೆ. ಅವರು ಘೋಷಿಸಿಕೊಂಡಂತೆ ಆಸ್ತಿ ಮೌಲ್ಯ ಸಾವಿರದ 700 ಕೋಟಿ ರೂಪಾಯಿಗೂ ಅಧಿಕವಿದ್ದು ಈ ಹಿಂದೆ ಸಚಿವ ಎಂಟಿಬಿ ನಾಗರಾಜ್ ಅವರು ಘೋಷಿಸಿಕೊಂಡಿದ್ದ ಸಾವಿರದ 200 ಕೋಟಿ ರೂ.ಗಿಂತಲೂ ಅಧಿಕವಾಗಿದೆ.

ಈ ಬಾರಿ ವಿಧಾನ ಪರಿಷತ್ ಗೆ ಸ್ರ್ಪಧಿಸುತ್ತಿರುವ ಬಹುತೇಕ ಸ್ರ್ಪಧಿಗಳು ಕೃಷಿ ಹಿನ್ನೆಲೆಯವರೋ, ಸ್ವಂತ ಫ್ಯಾಕ್ಟರಿ, ಉದ್ದಿಮೆ ಹೊಂದಿರುವವರು, ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ.ಹಲವು ಹೆಕ್ಟೇರ್ ಕೃಷಿ ಭೂಮಿ, ಹಲವು ಮನೆಗಳು, ಅಪಾರ್ಟ್ ಮೆಂಟ್‍ಗಳು, ಕಾರುಗಳನ್ನು ಹೊಂದಿದ್ದಾರೆ. ಕೆಲವರು ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವರಾಗಿದ್ದಾರೆ.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಸೋದರ ಪ್ರದೀಪ್ ಶೆಟ್ಟರ್ ಬಿಜೆಪಿಯಿಂದ ಸ್ರ್ಪಧಿಸುತ್ತಿದ್ದು ಅವರ ಘೋಷಿತ ಆಸ್ತಿ 88.91 ಕೋಟಿ ರೂಪಾಯಿಯಾಗಿದೆ. ಇನ್ನು ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರ ಮಗ ಡಾ.ಸೂರಜ್ ರೇವಣ್ಣ ಅವರ ಘೋಷಿತ ಆಸ್ತಿ 61.6 ಕೋಟಿ ರೂ.ಗಳಾಗಿವೆ.ಸಮಾಜ ಕಲ್ಯಾಣ ಸಚಿವ ಹಾಗೂ ಈಗಿನ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರ ಘೋಷಿತ ಆಸ್ತಿ ಮೌಲ್ಯ 1.4 ಕೋಟಿ ರೂಪಾಯಿಯಾಗಿದೆ. ಎಲ್ಲರಿಗಿಂತ ಕಡಿಮೆ ಆಸ್ತಿ ಸಂಪತ್ತು ಹೊಂದಿದವರಾಗಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಯೂಸಫ್ ಶರೀಫ್ ಓದಿರುವುದು ಕೇವಲ 5ನೇ ತರಗತಿ ಮಾತ್ರ ಆದರೆ ಅವರಲ್ಲಿ 4.5 ಕೆಜಿ ಚಿನ್ನ ಸೇರಿದಂತೆ ಸಾವಿರದ 741 ಕೋಟಿ ರೂ. ಸಂಪತ್ತುಗಳಿದೆ. ಒಂದು ಕಾಲದಲ್ಲಿ ಸ್ಕ್ರ್ಯಾಪ್ ಡೀಲರ್ ಆಗಿದ್ದ ಯೂಸಫ್ ಶರೀಫ್ ಬಾಬು ಇಂದು ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದಾರೆ. ಅವರಲ್ಲಿ ಹಲವು ಐಷಾರಾಮಿ ಕಾರುಗಳಿವೆ. ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರನ್ನು ಹೊಂದಿದ್ದು ಅದನ್ನು ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರಿಂದ ಖರೀದಿಸಿ ಈ ಹಿಂದೆ ಸುದ್ದಿಯಾಗಿದ್ದರು.

ಐಟಿ ಇಲಾಖೆ ಅಧಿಕಾರಿಗಳು ನನ್ನ ಮನೆಗೆ ಬಂದು ತಪಾಸಣೆ ಮಾಡಿದ್ದರು, 13.43 ಕೋಟಿ ರೂ. ತೆರಿಗೆ ಬಾಕಿ ಇದೆ ಎಂದು ಮೌಲ್ಯಮಾಪನ ಮಾಡಿ ಹೋಗಿದ್ದರು.ಐಟಿ ಇಲಾಖೆ ಅಧಿಕಾರಿಗಳು ನಮ್ಮ ಮನೆಗೆ ಬಂದು ಶೋಧಿಸಿ ಒಟ್ಟು 13.43 ಕೋಟಿ ರೂ. ಐಟಿ ಬಾಕಿ ಇದೆ ಎಂದು ಮೌಲ್ಯಮಾಪನ ಮಾಡಿದ್ದರು. ನಾನು ಐಟಿ ಆಯುಕ್ತರ ಮುಂದೆ ಮೇಲ್ಮನವಿ ಸಲ್ಲಿಸಿದ್ದು ಇನ್ನೂ ವಿಚಾರಣೆಗೆ ಬಂದಿಲ್ಲ ಎಂದು ಶರೀಫ್ ತಮ್ಮ ಅಫಿಡವಿಟ್‍ನಲ್ಲಿ ಘೋಷಿಸಿದ್ದಾರೆ.

ಮೈಸೂರಿನ ಜೆಡಿಎಸ್ ಅಭ್ಯರ್ಥಿ ಮಂಜೇಗೌಡ ಅವರು ಬಿಎಂಡಬ್ಲ್ಯು, ಆಡಿ, ಟೊಯೊಟಾ ಫಾರ್ಚುನರ್ ಸೇರಿದಂತೆ ಎಂಟು ಅತ್ಯಾಧುನಿಕ ಕಾರುಗಳನ್ನು ಹೊಂದಿದ್ದಾರೆ. ಮಂಡ್ಯದ ಬಿಜೆಪಿ ಅಭ್ಯರ್ಥಿ ಬಿ ಸಿ ಮಂಜು ಅವರು ಕಾರು, ಲಾರಿ, ಜೀಪು, ದ್ವಿಚಕ್ರ ವಾಹನ ಸೇರಿದಂತೆ 50 ವಾಹನಗಳನ್ನು ಹೊಂದಿದ್ದಾರೆ.

# ಯಾರ್ಯಾರ ಬಳಿ ಎಷ್ಟೆಷ್ಟು ಆಸ್ತಿ ಮೌಲ್ಯ?:
* ಯೂಸುಫ್ ಶರೀಫ್ ಕಾಂಗ್ರೆಸ್ (ಬೆಂಗಳೂರು) 1741 ಕೋಟಿ
*ಬಿ ಸೋಮಶೇಖರ್ ಕಾಂಗ್ರೆಸ್ (ಚಿತ್ರದುರ್ಗ) 116.1 ಕೋಟಿ
*ಪ್ರದೀಪ ಶೆಟ್ಟರ್ ಬಿಜೆಪಿ (ಧಾರವಾಡ) 88.91 ಕೋಟಿ

* ಸೂರಜ್ ರೇವಣ್ಣ ಜೆಡಿಎಸ್ (ಹಾಸನ) 61.6 ಕೋಟಿ
* ಡಾ.ಬಿ.ಜಿ.ಪಾಟೀಲ ಬಿಜೆಪಿ (ಕಲಬುರಗಿ) 51.6 ಕೋಟಿ
* ಎನ್ ಅಪ್ಪಾಜಿಗೌಡ ಜೆಡಿಎಸ್ (ಮಂಡ್ಯ) 37.45 ಕೋಟಿ

Facebook Comments