ಆಫ್ರಿಕಾ ಪ್ರಜೆಗಳಿಗೆ ಪ್ರಚೋದನೆ ನೀಡಿದ್ದ ಮಹಿಳೆಗಾಗಿ ತೀವ್ರ ಶೋಧ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಆ.4- ಜೆ.ಸಿ.ನಗರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಆಫ್ರಿಕಾ ಖಂಡದ ಪ್ರಜೆಗಳಿಗೆ ಪ್ರಚೋದನೆ ನೀಡಿ ಪರಾರಿಯಾಗಿರುವ ಸ್ಥಳೀಯ ಮಹಿಳೆಗಾಗಿ ಉತ್ತರ ವಿಭಾಗದ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈ ಮಹಿಳೆ ಹಿಂದೆ ಜೆ.ಸಿ.ನಗರದಲ್ಲಿ ವಾಸವಾಗಿದ್ದು, ಈಗ ಬಾಬು ಸಾಬ್ ಪಾಳ್ಯದಲ್ಲಿ ವಾಸವಾಗಿದ್ದಾಳೆ ಎಂದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ.

ಪ್ರತಿಭಟನಾಕಾರರಿಗೆ ಈ ಮಹಿಳೆ ಏಕೆ ಪ್ರಚೋದನೆ ನೀಡಿದರು. ಆಫ್ರಿಕಾ ಖಂಡದ ಪ್ರಜೆಗಳಿಗೂ ಈ ಮಹಿಳೆಗೂ ಸ್ನೇಹ ಅಥವಾ ಪರಿಚಯ ಇದೆಯೇ ? ಎಂಬ ಇತ್ಯಾದಿ ಅಂಶಗಳ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರತಿಭಟನೆ ವೇಳೆ ಅನುಚಿತವಾಗಿ ವರ್ತಿಸಿಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿರುವ ಆಫ್ರಿಕಾ ಖಂಡದ ಪ್ರಜೆಗಳ ಬಂಧನಕ್ಕಾಗಿ ಮೂರು ವಿಶೇಷ ತಂಡಗಳು ನಿರಂತರವಾಗಿ ಶೋಧ ನಡೆಸುತ್ತಿವೆ. ಘಟನೆಯ ಸಂಬಂಧ ಈಗಾಗಲೇ ಬಂಧಿಸಿರುವ ಐವರು ಆರೋಪಿಗಳಲ್ಲಿ ಒಬ್ಬ ಮಾದಕ ದ್ರವ್ಯ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ.

Facebook Comments