“ಬಿಜೆಪಿಯವರು ಉತ್ತರ ಕುಮಾರರು” : ಕಾಂಗ್ರೆಸ್ ಟೀಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.21-ನೆರೆ ಸಂತ್ರಸ್ತರ ವಿಷಯದಲ್ಲಿ ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆಗಳನ್ನು ಕಾಂಗ್ರೆಸ್ ಖಂಡಿಸಿದ್ದು , ಬಿಜೆಪಿ ನಾಯಕರನ್ನು ಉತ್ತರ ಕುಮಾರರು ಎಂದು ಟೀಕಿಸಿದೆ. ಸಿಎಂ ಯಡಿಯೂರಪ್ಪ ನೆರೆ ಸಂತ್ರಸ್ತ ರಿಗೆ ಪರಿಹಾರ ನೀಡಲು ನೋಟ್ ಪ್ರಿಂಟ್ ಮಾಡುವ ಮಷಿನ್ ಇಲ್ಲ ಎಂದಿದ್ದಾರೆ. ಸಚಿವ ಈಶ್ವರಪ್ಪ ಅವರು ನೆರೆ ಸಂತ್ರಸ್ತರಿಗೆ 10 ಸಾವಿರ ಕೊಟ್ಟಿದ್ದೇ ಹೆಚ್ಚಾಯಿತು ಎಂದಿದ್ದಾರೆ.

ಸಚಿವ ಅಶೋಕ್ ಅವರು ಶಾಲಾ ಮಕ್ಕಳು ದೇಣಿಗೆ ಸಂಗ್ರಹಿಸಿ ನೆರೆ ಸಂತ್ರಸ್ತರಿಗೆ ಕೊಡಬೇಕು ಎಂದಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಅವರು ಪುನರ್ವಸತಿ ಕಾರ್ಯಕ್ಕಾಗಿ ಕೇಂದ್ರ ಸರ್ಕಾರದ ಮೊರೆ ಹೋಗುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ. ನೆರೆ ಪರಿಹಾರ ವಿಷಯದಲ್ಲಿ ಇಂತಹ ಯೋಗ್ಯತೆ, ಸಮರ್ಥತೆ, ಸಂವೇದನೆಯನ್ನು ತೋರಿ ಸುವ ಇವರು ಕರ್ನಾಟಕದ ಉತ್ತರ ಕುಮಾರರು ಎಂದು ಕಾಂಗ್ರೆಸ್ ಹರಿಹಾಯ್ದಿದೆ.

ಟ್ವಿಟರ್‍ನಲ್ಲಿ ನೆರೆ ಸಂತ್ರಸ್ತರ ವಿಷಯ ವಾಗಿ ನಿರಂತರವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ಇಂದು ಎಲ್ಲಾ ನಾಯಕರ ಹೇಳಿಕೆಗಳನ್ನು ಮುಂದಿಟ್ಟುಕೊಂಡು ಕಿಡಿಕಾರಿದೆ.

Facebook Comments