ಪೊಲೀಸ್ ಇಲಾಖೆ ಅಧಃಪತನಕ್ಕೆ ಕಾಂಗ್ರೆಸ್ ಖಂಡನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.13- ಒಬ್ಬ ಇನ್‍ಸ್ಪೆಕ್ಟರ್ ತಲೆಮರೆಸಿಕೊಳ್ಳುತ್ತಾನೆ, ಮತ್ತೊಬ್ಬ ಓಡಿ ಕಾಲು ಮುರಿದುಕೊಳ್ಳುತ್ತಾನೆ. ಇದೇನು? ನಿಮ್ಮ ಇಲಾಖೆಯ ಅಧಃಪತನ ಎಂದು ಕಾಂಗ್ರೆಸ್, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಪ್ರಶ್ನಿಸಿದೆ.  ಲಂಚಾವತಾರಕ್ಕೆ ಸಿಲುಕಿ ಚಿಕ್ಕಜಾಲದ ಇನ್‍ಸ್ಪೆಕ್ಟರ್ ಯಶವಂತ್ ತಲೆಮರೆಸಿಕೊಂಡಿದ್ದು ಬೈಯಪ್ಪನಹಳ್ಳಿ ಠಾಣೆಯ ಕಾನ್‍ಸ್ಟೆಬಲ್‍ವೊಬ್ಬರು ಎಸಿಬಿ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಲುಹೋಗಿ ಕಾಲು ಮುರಿದುಕೊಂಡಿದ್ದಾರೆ.

ಈ ಪ್ರಕರಣಗಳನ್ನು ಉಲ್ಲೇಖಿಸಿ ಟೀಕಾ ಪ್ರಹಾರ ನಡೆಸಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರದ ಆಡಳಿತದಲ್ಲಿ ಪೊಲೀಸರು ಕಳ್ಳರಂತೆ, ಕಳ್ಳರು ಪೊಲೀಸರಂತಾಗಿದ್ದಾರೆ ಎಂದು ಟೀಕಿಸಿದೆ.ರಾಜ್ಯದಲ್ಲಿ ವಿಎಸ್‍ಟಿ ಕಾರಣಕ್ಕಾಗಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಅದಕ್ಕೆ ಉದಾಹರಣೆ ಇನ್‍ಸ್ಪೆಕ್ಟರ್ ತಲೆ ಮರೆಸಿಕೊಂಡಿರು ವುದು, ಕಾನ್‍ಸ್ಟೆಬಲ್ ಕಾಲು ಮುರಿದುಕೊಂಡಿರುವುದು. ಮಾತಿನ ಶೂರ, ಬಿಲ್ಡಪ್ ಬಸವರಾಜ್ ಅವರೇ ಇದೇನು ನಿಮ್ಮ ಇಲಾಖೆಯ ಅಧಃಪತನ ಎಂದು ಪ್ರಶ್ನಿಸಲಾಗಿದೆ.

ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಿ ಎಂದು ಮಹಾತ್ಮಗಾಂಧಿ ಹೇಳಿದ್ದರು. ಅದೇ ಗಾಂಧೀಜಿಯ ಹೆಸರು ಬಳಸಿಕೊಂಡು ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಮಾಡಿರುವ ಟೀಕೆಗೆ ಕಿಡಿಕಾರಿರುವ ಕಾಂಗ್ರೆಸ್, ಇತಿಹಾಸದಲ್ಲಿ ಸಣ್ಣ ಪಾತ್ರ ವೂ ಇಲ್ಲದೇ ಇದ್ದರೂ ಇತಿಹಾಸವನ್ನು ತಿರುಚಿ ತಮ್ಮ ಮಾನ ಉಳಿಸುಕೊಳ್ಳುವುದು ಬಿಜೆಪಿ ಕುಕೃತ್ಯ.

ಗಾಂಧೀಜಿಯವರು ಕಾಂಗ್ರೆಸ್ ಜನಸೇವೆಯತ್ತ ಗಮನಹರಿಸಬೇಕು ಎಂದಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪಿಸಿ ಆ ಮೂಲಕ ಸಾಮಾಜಿಕ ನ್ಯಾಯದ ತಳಹದಿಯಲ್ಲಿ ಜನಪರ ಕೆಲಸ ಮಾಡಬೇಕೆಂಬ ಗಾಂಧೀಜಿಯವರ ಕನಸನ್ನು ಕಾಂಗ್ರೆಸ್ ಗೌರವಿಸುತ್ತದೆ ಎಂದು ಕಾಂಗ್ರೆಸ್ ಟ್ವೀಟರ್‍ನಲ್ಲಿ ಹೇಳಿದೆ.

Facebook Comments