ಬಿಜೆಪಿ ಅಧಿಕಾರಕ್ಕೆ ಬಂದಾಗಲೇಲ್ಲಾ ರಾಜ್ಯದ ಮಾನ ಹರಾಜು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.15- ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ರಾಜ್ಯದ ಮಾನ ಹರಾಜಾಗುತ್ತಿದೆ. ಬಿಜೆಪಿಯವರೇ ಅವರ ಪಕ್ಷದ ಬಂಡವಾಳವನ್ನು ಬಯಲು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿರುವ ಕಾಂಗ್ರೆಸ್, ಬಿಜೆಪಿ ಆಪರೇಷನ್ ಕಮಲದ ಸರ್ಕಾರ. ಬ್ಲಾಕ್‍ಮೇಲ್ ಮಂತ್ರಿಗಳು. ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್ ಎನ್ನುವ ಭ್ರಷ್ಟಾಚಾರ. ಆರ್ಡಿನರಿ ಶಾಸಕರು. ಇಂತವರಿಂದ ರಾಜ್ಯದ ಉದ್ದಾರ ಸಾಧ್ಯವೇ ? ಎಂದು ಪ್ರಶ್ನಿಸಿದೆ.

ಬ್ಲಾಕ್‍ಮೇಲ್ ಜನತಾ ಪಾರ್ಟಿ ಎಂಬ ಹ್ಯಾಸ್‍ಟ್ಯಾಕ್ ಜೊತೆ ಬಿಜೆಪಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತ ಪಡಿಸಿರುವ ಕಾಂಗ್ರೆಸ್ ಈ ಮೊದಲು ಬಿಜೆಪಿ ಅಧಿಕಾರ ಹಿಡಿದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೂ ರಾಜ್ಯದ ಮರ್ಯಾದೆ ಹರಾಜಾಗಿತ್ತು. ಈಗ ಮತ್ತೆ ಅದೇ ರೀತಿಯ ವಾತಾವರಣ ಕಂಡು ಬರುತ್ತಿದೆ. ಒಂದೊಂದೆ ಹಗರಣಗಳು ಬಯಲಾಗುತ್ತಿವೆ. ಈ ಮೂಲಕ ರಾಜ್ಯದ ಮಾನ ಹರಾಜಾಗುತ್ತಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

Facebook Comments