‘ಕಣ್ಣಿಗೆ ನೋಡಲಾಗದಂತಹ ವಿಡಿಯೋಗಳಿವೆ’ ಎಂದು ಯತ್ನಾಳ್ ಮಾಡಿರುವ ಆರೋಪ ನಿಜವೇ?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮಾ.31- ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ಸುಳ್ಳೋ, ನಿಜವೋ ಸ್ಪಷ್ಟಪಡಿಸಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಾಂಗ್ರೆಸ್ ಆಗ್ರಹಿಸಿದೆ. ರಮೇಶ್ ಜಾರಿಕಿಹೊಳಿ ವಿರುದ್ಧ ಅನಗತ್ಯ ಆರೋಪ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನೀಡಿರುವ ಹೇಳಿಕೆಗೆ ಟ್ವಿಟರ್‍ನಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಈ ಹಿಂದೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕಣ್ಣಿಗೆ ನೋಡಲಾಗದಂತಹ ವಿಡಿಯೋಗಳು ಇವೆ ಎಂದು ಆರೋಪ ಮಾಡಿದ್ದರು.

ಅವರು ಮಾಡಿದ್ದ ಆರೋಪಗಳು ನಿಜವೇ ಎಂದು ಪ್ರಶ್ನಿಸಲಾಗಿದ್ದು, ಒಂದು ವೇಳೆ ಅದು ನಿಜವೆ ಆಗಿದ್ದರೆ ನೀವೇಕೆ ರಾಜೀನಾಮೆ ನೀಡಿಲ್ಲ ಎಂದು ಪ್ರಶ್ನಿಸಿದೆ. ಒಂದು ವೇಳೆ ಆರೋಪ ಸುಳ್ಳೇ ಆಗಿದ್ದರೆ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಇನ್ನು ಏಕೆ ಪಕ್ಷದಿಂದ ಉಚ್ಚಾಟಿಸಿಲ್ಲ ಎಂದು ಕಾಂಗ್ರೆಸ್ ಕೇಳಿದೆ.

Facebook Comments