ಪೂರ್ವ ಯೋಜನೆಗಳಿಲ್ಲದೆ ಲಾಕ್‌ಡೌನ್ ಸಡಿಲಿಸಿದ್ದು ಮೋದಿಯ ಧೃತರಾಷ್ಟ್ರ ನಿರ್ಧಾರ ಎಂದ ಕಾಂಗ್ರೆಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 24- ದೇಶವನ್ನು ರಕ್ಷಿಸುತ್ತಿರುವುದು ಕಾಂಗ್ರೆಸ್ ಸರ್ಕಾರಗಳು ಕೊಟ್ಟ ಆಹಾರ ಭದ್ರತಾ ಕಾಯ್ದೆ, ಆರೋಗ್ಯ ಯೋಜನೆಗಳು ಮತ್ತು ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಗಳೇ ಹೊರತು ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ಹೊಡೆಯುವ ಪ್ರಹಸನವಲ್ಲ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

ರಾಹುಲ್ ಗಾಂಧಿ ಅವರು ವಲಸೆ ಕಾರ್ಮಿಕರ ಜೊತೆ ಕುಳಿತು ಮಾತನಾಡಿದ ಬೆಳವಣಿಗೆಗೆ ವ್ಯಂಗ್ಯವಾಗಿದೆ ಕರ್ನಾಕರ ಬಿಜೆಪಿ ಈ ಹಿಂದೆ ಪ್ರಧಾನಿಯಾಗಿದ್ದ ಜವರ್ಹಾ ಲಾಲ್ ನೆಹರು, ಇಂದಿರಾಗಾಂ, ರಾಜೀವ್ ಗಾಂ, ಯುಪಿಎ ಸರ್ಕಾರದಲ್ಲಿ ಸೂರ್ಪ ಪಿಎಂರಂತೆ ಕೆಲಸ ಮಾಡಿದ ಸೋನಿಯಾ ಗಾಂ ಅವರು ತಮ್ಮ ಕುಟುಂಬ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುವ ಬದಲಿಗೆ ಕಾರ್ಮಿಕರ ಒಳಿತಿಗಾಗಿ ಕೆಲಸ ಮಾಡಿದ್ದರೆ.

ಇಂದು ವಲಸೆ ಕಾರ್ಮಿಕರ ಜೊತೆ ಕುಳಿತು ಮಾತನಾಡುವ ಸಂದರ್ಭ ಬರುತ್ತಿರಲಿಲ್ಲ ಎಂದು ಲೇವಡಿ ಮಾಡಿತ್ತು. ಅದಕ್ಕೆ ತಿರುಗೇಟು ನೀಡಿರುವ ಕರ್ನಾಟಕ ಕಾಂಗ್ರೆಸï, ದೃಷ್ಟಿಹೀನ ಸರ್ಕಾರದ ಆಡಳಿತವಿದ್ದರೂ ಇಂದು ಕಾಂಗ್ರೆಸ್ ಸರ್ಕಾರದ ಯೋಜನೆಗಳೇ ಕೊರೊನಾ ಸಂತ್ರಸ್ಥ ಜನರಿಗೆ ನೆರವಾಗುತ್ತಿರುವುದು ಎಂದು ತಿರುಗೇಟು ನೀಡಿದೆ.

ಏಸಿ ರೂಮುಗಳಲ್ಲಿ ಕುಳಿತು ಅಕಾರದ ಮದವೇರಿಸಿಕೊಂಡು ಸದಾ ಪ್ರಚಾರ, ಪ್ರವಾಸ, ಚುನಾವಣೆಗಳಲ್ಲಿ ಮಗ್ನರಾಗಿರುವ ಬಿಜೆಪಿಯ ನಾಯಕರೇ ಬವಣೆಯಲ್ಲಿ ಬಳಲಿರುವ ಬಡವರ, ರೈತರ, ಕಾರ್ಮಿಕರ ಸಂಕಷ್ಟಕ್ಕೆ ರಸ್ತೆಗಿಳಿದು ಸ್ಪಂದಿಸಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪರೋಕ್ಷವಾಗಿ ಸವಾಲು ಹಾಕಿದೆ.

ಪೂರ್ವ ಯೋಜನೆಗಳನ್ನು ರೂಪಿಸದೆ ಲಾಕ್ ಡೌನ್ ಸಡಿಲ ಮಾಡಿದ್ದು ಧೃತರಾಷ್ಟ್ರ ನಿರ್ಧಾರ ಎಂದು ಕಾಂಗ್ರೆಸ್ ಕಿಡಿಕಾರಿದೆ. ಬಿಜೆಪಿಗರೆ, ಹೊಣೆಗಾರಿಕೆಯನ್ನು ಪ್ರದರ್ಶಿಸಿ ಜನತೆಗಾಗಿ ಕೆಲಸ ಮಾಡಿ ಎಂದು ವಾಗ್ದಾಳಿ ನಡೆಸಿದೆ.

ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ತನ್ನ ಉಳುಕುಗಳನ್ನು ಮುಚ್ಚಿಕೊಳ್ಳಲು ಗಮನ ಬೇರೆ ಸೆಳೆಯುವ ಪ್ರಯತ್ನ ನಡೆಸುತ್ತಿದೆ. ಪಿಎಂ ಕೇರ್ ಗೆ ಸಂದಾಯವಾದ ಹಣದ ಲೆಕ್ಕ ಇಲ್ಲ. ರಾಜ್ಯ ಸರ್ಕಾರಕ್ಕೂ ಕೇಂದ್ರದಿಂದ ಈವರೆಗೆ ನೆರವಿ ಸಿಕ್ಕಿಲ್ಲ.

ಕರ್ನಾಟಕದ ಜನತೆ 25 ಮಂದಿ ಸಂಸದರನ್ನು ಗೆಲ್ಲಿಸಿಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಏನು ಮಾಡಿದೆ ಎಂದು ಮೊದಲು ವಿವರಿಸಿ ಎಂದು ಸವಾಲು ಹಾಕಲಾಗಿದೆ.

Facebook Comments

Sri Raghav

Admin