ಇದು ಪದತ್ಯಾಗ ಅಲ್ಲ, ಪದಚ್ಯುತಿ : ಕಾಂಗ್ರೆಸ್ ತಿರುಗೇಟು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.26- ಇದು ಪದತ್ಯಾಗ ಅಲ್ಲ, ಪದಚ್ಯುತಿ ಎಂಬುದನ್ನು ಯಡಿಯೂರಪ್ಪ ಅವರ ಕಣ್ಣೀರು ಸ್ಪಷ್ಟಪಡಿಸಿದೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ. ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ ವೇಳೆ ಕಣ್ಣೀರು ಹಾಕಿದ್ದನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್, ಆಡಳಿತಾರೂಢ ಬಿಜೆಪಿಗೆ ತಾಕತ್ತು ಮತ್ತು ನೈತಿಕತೆ ಇದ್ದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಬರಲಿ ಎಂದು ಸವಾಲು ಹಾಕಿದೆ.

ಬಿಜೆಪಿಯ ದುರಾಡಳಿತದಿಂದ ಬೇಸತ್ತು ರಾಜ್ಯದ ಜನತೆ ನಾಯಕತ್ವ ಬದಲಾವಣೆಯಲ್ಲ ಸರ್ಕಾರದ ಬದಲಾವಣೆ ಕೇಳುತ್ತಿದ್ದಾರೆ. ಮುಂದೆ ರಾಜ್ಯವನ್ನು ಯಾರು ಆಳಬೇಕು ಎಂಬುದನ್ನು ಜನರು ನಿರ್ಧರಿಸಲಿ. ಮಧ್ಯಂತರ ಚುನಾವಣೆಗೆ ಬನ್ನಿ ಎಂದು ಕಾಂಗ್ರೆಸ್ ಪಂಥಾಹ್ವಾನ ನೀಡಿದೆ.

ಯಡಿಯೂರಪ್ಪ ಅವರು ರಾಜೀನಾಮೆ ಘೋಷಣೆ ಮಾಡುವ ಮೂಲಕ ತಮ್ಮ ವಿಫಲ ಸರ್ಕಾರ, ವಿಫಲ ಆಡಳಿತ, ವಿಫಲ ನಾಯಕತ್ವ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಸಮರ್ಥ ಆಡಳಿತವೇ ಆಗಿದ್ದರೆ ಈ ಪದಚ್ಯುತಿ ಏಕೆ ಬೇಕಿತ್ತು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Facebook Comments