ಎಸ್‍ಡಿಪಿಐ ನಿಷೇಧದ ವಿಚಾರದಲ್ಲಿ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ..!

ಈ ಸುದ್ದಿಯನ್ನು ಶೇರ್ ಮಾಡಿ

– ರವೀಂದ್ರ.ವೈ.ಎಸ್
ಬೆಂಗಳೂರು,ಆ.17- ಕಾಡುಗೊಂಡನಹಳ್ಳಿ ಹಾಗೂ ದೇವರ ಜೀವನಹಳ್ಳಿಯ ಗಲಭೆಗೆ ಕಾರಣ ಎಂದು ಹೇಳಲಾಗುತ್ತಿರುವ ಎಸ್‍ಡಿಪಿಐ ಸಂಘಟನೆಯನ್ನು ನಿಷೇಸುವ ಸಂಬಂಧ ರಾಜಕೀಯ ವಲಯದಲ್ಲಿ ಈಗ ಲಾಭನಷ್ಟದ ಲೆಕ್ಕಾಚಾರ ಶುರುವಾಗಿದೆ.

ಆಡಳಿತಾರೂಢ ಬಿಜೆಪಿ ನಾಯಕರು, ಎಸ್‍ಡಿಪಿಐ ಸಂಘಟನೆಯನ್ನು ನಿಷೇಸುವಂತೆ ಅಬ್ಬರಿಸುತ್ತಿದ್ದಾರೆ. ಇತ್ತ ಕಾಂಗ್ರೆಸ್ ಕೂಡ ಕೇಂದ್ರ ಮತ್ತು ರಾಜ್ಯದಲ್ಲಿ ಎರಡು ಕಡೆ ನಿಮ್ಮ ಪಕ್ಷವೇ ಅಕಾರದಲ್ಲಿದೆ. ಮೊದಲು ಎಸ್‍ಡಿಪಿಐ ಸಂಘಟನೆಯನ್ನು ನಿಷೇಧ ಮಾಡಲಿ ಎಂದು ನೇರ ಸವಾಲು ಹಾಕುತ್ತಿದೆ.

ವಾಸ್ತವವಾಗಿ ಈ ಸಂಘಟನೆಯ ಚಟುವಟಿಕೆಗಳಿಗೆ ಕಡಿವಾಣ ಇಲ್ಲವೇ ನಿಷೇಸಲು ಎರಡೂ ರಾಜಕೀಯ ಪಕ್ಷಗಳಿಗೆ ಸುತಾರಾಂ ಇಷ್ಟವಿಲ್ಲ. ಏಕೆಂದರೆ, ಎಸ್ ಡಿಪಿಐ ಎಷ್ಟು ಸಕ್ರಿಯವಾಗಿರುತ್ತದೆಯೋ ಅಷ್ಟರ ಮಟ್ಟಿಗೆ ಅದರ ಲಾಭ ನಮಗೆ ಎಂಬ ವಾಸ್ತವ ಸತ್ಯ ಬಿಜೆಪಿಯದ್ದು.

ಏಕೆಂದರೆ 2013 ಮತ್ತು 2014ರ ವಿಧಾನಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಮಡಿಕೇರಿ, ಮೈಸೂರು, ಬೆಂಗಳೂರು, ಕಲಬುರಗಿ ಸೇರಿದಂತೆ ಮತ್ತಿತರ ಕಡೆ ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿದ್ದು ಎಸ್‍ಡಿಪಿಐ.

ಸುಮಾರು 20ರಿಂದ 25 ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್‍ಡಿಪಿಐ ಅಭ್ಯರ್ಥಿಗಳು 10ರಿಂದ 15 ಸಾವಿರ ಮುಸ್ಲಿಂ ಮತಗಳನ್ನು ಸೆಳೆದಿದ್ದರು. ಇದು ಪರೋಕ್ಷವಾಗಿ ಬಿಜೆಪಿ ಗೆಲುವಿಗೆ ಕಾರಣವಾಗಿ ಕಾಂಗ್ರೆಸ್‍ಗೆ ಹಿನ್ನಡೆಯಾಗಿತ್ತು.
ಬಿಬಿಎಂಪಿ ಚುನಾವಣೆಯಲ್ಲೂ ಅನೇಕ ಕಡೆ ಅಭ್ಯರ್ಥಿಗಳು ಸ್ಪರ್ಧೆ ಮಾಡಿ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಸೋಲಿನ ರುಚಿ ತೋರಿಸಿದ್ದರು. ಅಷ್ಟರಮಟ್ಟಿಗೆ ಎಸ್‍ಡಿಪಿಐ ಬಿಜೆಪಿಗೆ ಗೆಲವಿನ ಧಾರೆ ಎರೆಯುತ್ತಿದೆ.

ಇನ್ನು ಹೇಳಿಕೇಳಿ ಎಸ್‍ಡಿಪಿಐನಲ್ಲಿ ಬಹುತೇಕ ಗುರುತಿಸಿಕೊಂಡವರು, ಮುಸ್ಲಿಂ ಸಮುದಾಯದವರು. ಎಸ್‍ಡಿಪಿಐ ವಿರುದ್ಧ ಮಾತನಾಡಿದರೆ ಈ ಸಮುಯದಾಯದ ಮತ ಬ್ಯಾಂಕ್ ಎಲ್ಲಿ ಕೈ ಕೊಟ್ಟು ಬಿಡುತ್ತದೆಯೋ ಎಂಬ ಆತಂಕ ಕಾಂಗ್ರೆಸ್‍ಗೆ ಒಳಗೊಳಗೆ ಕಾಡುತ್ತಿದೆ.

ಈಗ ಬಿಜೆಪಿಯ ಒಂದು ಬಣ ಎಸ್‍ಡಿಪಿಐ ನಿಷೇಸಬೇಕೆಂದು ಒತ್ತಡ ಹಾಕುತ್ತಿದೆ. ಆದರೆ ವಾಸ್ತವ ಅರಿತಿರುವ ಆರ್‍ಎಸ್‍ಎಸ್ ನಾಯಕರು ಇದರ ಬಗ್ಗೆ ತುಟಿಕ್‍ಪಿಟಿಕ್ ಎನ್ನುತ್ತಿಲ್ಲ.

ಹೀಗಾಗಿ ಎರಡು ರಾಷ್ಟ್ರೀಯ ಪಕ್ಷಗಳು ಕೇವಲ ಮೇಲ್ನೋಟಕ್ಕೆ ಮಾತ್ರ ನಿಷೇಧ ಎಂಬ ಅಸ್ತ್ರ ದ ಬಳಕೆ ಮಾಡುತ್ತಿದ್ದಾರೆ ವಿನಃ ವಾಸ್ತವವಾಗಿ ಯಾರಿಗೂ ಇದು ಬೇಕಾಗಿಲ್ಲ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ.

# ಲಾಭ ನಷ್ಟದ ಲೆಕ್ಕಾಚಾರ ಏನು..?:
ಕಾಂಗ್ರೆಸ್ ಮತ ಬ್ಯಾಂಕ್‍ನ್ನು ಗಣನೀಯವಾಗಿ ಒಡೆಯುತ್ತಿರುವ ಎಸ್‍ಡಿಪಿಐ ಪರೋಕ್ಷವಾಗಿ ಬಿಜೆಪಿ ಗೆಲುವಿಗೆ ಕಾರಣವಾಗುತ್ತಿದೆ. ಈ ಹಿನ್ನೆಲೆ ಕಾಂಗ್ರೆಸ್‍ಗೆ ಎಸ್‍ಡಿಪಿಐ ನಿಷೇಸಿದರೆ ರಾಜಕೀಯವಾಗಿ ಲಾಭವಾಗಲಿದೆ. ಬಿಜೆಪಿಗೆ ನಷ್ಟವಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.

ಇದೇ ಹಿನ್ನೆಲೆ ಎಸ್‍ಡಿಪಿಐ ನಿಷೇಧಕ್ಕೆ ಬಿಜೆಪಿ ಮೀನಾಮೇಷ ನೋಡುತ್ತಿದ್ದು, ಕಾಂಗ್ರೆಸ್ ನಾಯಕರು ಎಸ್‍ಡಿಪಿಐ ಸಂಘಟನೆಯ ನಿಷೇಧಕ್ಕೆ ಪರೋಕ್ಷ ಒತ್ತಡ ಹೇರುತ್ತಿದೆ.

ಒಂದೆಡೆ ಬಿಜೆಪಿ ಎಸ್‍ಡಿಪಿಐ ಸಂಘಟನೆ ಡಿ.ಜೆ.ಹಳ್ಳಿ ಗಲಭೆಗೆ ಮೂಲ ಕಾರಣವಾಗಿದ್ದು, ಈ ಬಾರಿ ನಿಷೇಧ ಖಚಿತ ಎಂದು ಹೇಳುತ್ತಿದ್ದರೆ, ಇತ್ತ ಕಾಂಗ್ರೆಸ್ ಪಕ್ಷ, ರಾಜಕೀಯ ಉದ್ದೇಶಕ್ಕಾಗಿ ಎಸ್‍ಡಿಪಿಐ ಸಂಘಟನೆಗೆ ಬಿಜೆಪಿ ನಿಷೇಧ ಹೇರುವುದಿಲ್ಲ ಎಂದು ಆರೋಪಿಸುತ್ತಿದೆ.

ಎಸ್‍ಡಿಪಿಐ ಸಂಘಟನೆ ಕಾಂಗ್ರೆಸ್ ಪಕ್ಷಕ್ಕೆ ಮಗ್ಗುಲ ಮುಳ್ಳಾಗಿದ್ದು, ಶೇ.13 ಮುಸ್ಲಿಂ ಜನಸಂಖ್ಯೆಹೊಂದಿರುವ ಕರ್ನಾಟಕದಲ್ಲಿ, ಕಾಂಗ್ರೆಸ್‍ಗೆ ಎಸ್‍ಡಿಪಿಐ ಸಂಘಟನೆ ಚುನಾವಣಾ ಕಣದಲ್ಲಿ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ.

ಮುಸ್ಲಿಂ ಮತಗಳನ್ನೇ ಗುರಿಯಾಗಿಸಿರುವ ಎಸ್‍ಡಿಪಿಐ, ಕಾಂಗ್ರೆಸ್ ಮುಸ್ಲಿಂ ಮತಬ್ಯಾಂಕ್‍ಗೆ ಕತ್ತರಿ ಹಾಕುತ್ತಿದೆ. ಎಸ್‍ಡಿಪಿಐ 2009ರಿಂದ ಅಸ್ತಿತ್ವಕ್ಕೆ ಬಂದಾಗಿನಿಂದ ಚುನಾವಣಾ ಕಣದಲ್ಲಿ ಬಲವರ್ಧನೆಯಾಗುತ್ತಿದ್ದು, ಕೈ ನಾಯಕರ ನಿದ್ದೆ ಗೆಡಿಸಿರುವುದು ಸಾಬೀತಾಗಿದೆ.

ರಾಜ್ಯದಲ್ಲಿ ಶೇ.30ಕ್ಕೂ ಅಕ ಮುಸ್ಲಿಂ ಮತಗಳಿರುವ ಒಟ್ಟು 19 ಕ್ಷೇತ್ರಗಳಿವೆ. ಈ ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳನ್ನು ವಿಭಜಿಸುವ ಮೂಲಕ ಕಾಂಗ್ರೆಸ್‍ಗೆ ಮಗ್ಗುಲ ಮುಳ್ಳಾಗಿ ಪರಿಣಮಿಸಿದೆ.

2013 ವಿಧಾನಸಭೆ ಚುನಾವಣೆಯಲ್ಲಿ ಎಸ್‍ಡಿಪಿಐ ಒಟ್ಟು 23 ಅಭ್ಯರ್ಥಿಗಳನ್ನು ಪ್ರಮುಖವಾಗಿ ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲೇ ಕಣಕ್ಕಿಳಿಸಿತ್ತು. ಯಾವ ಅಭ್ಯರ್ಥಿಗಳು ಗೆಲವು ಸಾಸದಿದ್ದರೂ ಮುಸ್ಲಿಮರ ಮತ ಒಡೆಯುವಲ್ಲಿ ಸಫಲವಾಗಿದೆ. 2013ರ ಚುನಾವಣೆಯಲ್ಲಿ ಒಟ್ಟು ಮತ ಚಲಾವಣೆಯಲ್ಲಿ ಎಸ್‍ಡಿಪಿಐ ಸುಮಾರು ಶೇ.3.27 ಮತ ಗಳಿಸಲು ಯಶಸ್ಸು ಕಂಡಿದೆ.

ಆ ವೇಳೆ ಕಾಂಗ್ರೆಸ್ ಶೇ.36.76, ಬಿಜೆಪಿ ಶೇ.20.07, ಜೆಡಿಎಸ್ ಶೇ20.45 ಮತ ಗಳಿಸಿತ್ತು. ಅದೇ 2018ರ ಚುನಾವಣೆ ವೇಳೆ ತನ್ನ ಬಲವನ್ನು ಇನ್ನಷ್ಟು ರ್ವಸಿದೆ. ಒಟ್ಟು 25 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಎಸ್‍ಡಿಪಿಐ, ಕೊನೆಗೆ ಕೇವಲ ಮೂರು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣದಲ್ಲಿ ಉಳಿಸಿತು.

ಈ ಚುನಾವಣೆಯಲ್ಲೂ ಸೋಲು ಕಂಡ ಎಸ್‍ಡಿಪಿಐ ತನ್ನ ಮತ ಹಂಚಿಕೆಯನ್ನು ಹೆಚ್ಚಿಸಿತ್ತು. ಸುಮಾರು ಶೇ.10.50 ಮತವನ್ನು ಎಸ್‍ಡಿಪಿಐ ತನ್ನತ್ತ ಸೆಳೆದಿತ್ತು. ಈ ವೇಳೆ ಬಿಜೆಪಿ ಶೇ.36.43, ಕಾಂಗ್ರೆಸ್ ಶೇ.38.61 ಮತ್ತು ಜೆಡಿಎಸ್ ಶೇ.20.61 ಮತಗಳಿಸಿತ್ತು.2014ರ ಲೋಕಸಭೆ ಚುನಾವಣೆಯಲ್ಲಿ ಎಸ್‍ಡಿಪಿಐ ಸ್ರ್ಪಸಿದ್ದ ಏಕೈಕ ಸ್ಥಾನವಾದ ದಕ್ಷಿಣ ಕನ್ನಡದಲ್ಲಿ ತನ್ನ ಮತ ಪ್ರಮಾಣವನ್ನು ಹೆಚ್ಚಿಸಿತ್ತು.

2014ರ ಲೋಕಸಭೆ ಚುನಾವಣೆಯಲ್ಲಿ ದ.ಕನ್ನಡ ಕ್ಷೇತ್ರದಲ್ಲಿ ಶೇ.2.26 ಮತಗಳಿಸಿದ್ದ ಎಸ್‍ಡಿಪಿಐ, 2019ರ ಚುನಾವಣೆಯಲ್ಲಿ ತನ್ನ ಮತಗಳಿಕೆಯನ್ನು ಶೇ3.48ಗೆ ಹೆಚ್ಚಿಸಿಕೊಂಡಿತ್ತು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಸ್‍ಡಿಪಿಐ ಉತ್ತಮ ಪ್ರದರ್ಶನ ತೋರುತ್ತಿದೆ.

ಇನ್ನು ಬೆಂಗಳೂರಲ್ಲಿ ಎಸ್‍ಡಿಪಿಐ ತನ್ನ ಬಲರ್ವಸುತ್ತಿದ್ದು, ಶಿವಾಜಿನಗರ, ಸರ್ವಜ್ಞನಗರ, ಪುಲಕೇಶಿನಗರ ಕ್ಷೇತ್ರಗಳಲ್ಲಿ ತನ್ನ ಬಲವರ್ಧನೆ ಮಾಡುತ್ತಿದೆ. ಬಿಬಿಎಂಪಿ ಚುನಾವಣೆಯಲ್ಲೂ ತನ್ನ ಪ್ರಾಬಲ್ಯವನ್ನು ಹೆಚ್ಚಿಸುತ್ತಿದೆ.

# ಲಾಭ ನಷ್ಟದ ಲೆಕ್ಕಾಚಾರ ಏನು..?:
ಎಸ್‍ಡಿಪಿಐ ಪ್ರಮುಖವಾಗಿ ಕಾಂಗ್ರೆಸ್‍ಗೆ ಮಗ್ಗುಲ ಮುಳ್ಳಾಗಿದ್ದರೆ, ಬಿಜೆಪಿಗೆ ರಾಜಕೀಯವಾಗಿ ಲಾಭವನ್ನೇ ತರುತ್ತಿದೆ ಎಂಬುದು ತಜ್ಞರ ಅಭಿಪ್ರಾಯ.ಕಾಂಗ್ರೆಸ್ ಮತ ಬ್ಯಾಂಕ್‍ನ್ನು ಗಣನೀಯವಾಗಿ ಒಡೆಯುತ್ತಿರುವ ಎಸ್‍ಡಿಪಿಐ ಪರೋಕ್ಷವಾಗಿ ಬಿಜೆಪಿ ಗೆಲುವಿಗೆ ಕಾರಣವಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‍ಗೆ ಎಸ್‍ಡಿಪಿಐ ನಿಷೇಸಿದರೆ ರಾಜಕೀಯವಾಗಿ ಲಾಭವಾಗಲಿ ಬಿಜೆಪಿಗೆ ನಷ್ಟವಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಇದೇ ಹಿನ್ನೆಲೆ ಎಸ್‍ಡಿಪಿಐ ನಿಷೇಧಕ್ಕೆ ಬಿಜೆಪಿ ಮೀನಾಮೇಷ ನೋಡುತ್ತಿದ್ದು, ಕಾಂಗ್ರೆಸ್ ನಾಯಕರು ಎಸ್‍ಡಿಪಿಐ ಸಂಘಟನೆಯ ನಿಷೇಧಕ್ಕೆ ಪರೋಕ್ಷ ಒತ್ತಡ ಹೇರುತ್ತಿದೆ.

ಒಂದೆಡೆ ಬಿಜೆಪಿ ಎಸ್‍ಡಿಪಿಐ ಸಂಘಟನೆ ಡಿ.ಜೆ.ಹಳ್ಳಿ ಗಲಭೆಗೆ ಮೂಲ ಕಾರಣವಾಗಿದ್ದು, ಈ ಬಾರಿ ನಿಷೇಧ ಖಚಿತ ಎಂದು ಹೇಳುತ್ತಿದ್ದರೆ, ಇತ್ತ ಕಾಂಗ್ರೆಸ್ ಪಕ್ಷ, ರಾಜಕೀಯ ಉದ್ದೇಶಕ್ಕಾಗಿ ಎಸ್‍ಡಿಪಿಐ ಸಂಘಟನೆಗೆ ಬಿಜೆಪಿ ನಿಷೇಧ ಹೇರುವುದಿಲ್ಲ ಎಂದು ಆರೋಪಿಸುತ್ತಿದೆ.

ದಿನೇ ದಿನೆ ರಾಜ್ಯದ ಚುನಾವಣಾ ಕಣದಲ್ಲಿ ಬಲರ್ವ ಸುತ್ತಿರುವ ಎಸ್‍ಡಿಪಿಐ ಸಂಘಟನೆ ಪರೋಕ್ಷವಾಗಿ ಎರಡೂ ರಾಷ್ಟ್ರೀಯ ಪಕ್ಷಗಳ ಚುನಾವಣಾ ಲಾಭ ನಷ್ಟಕ್ಕೆ ಕಾರಣವಾಗಿದೆ.

Facebook Comments

Sri Raghav

Admin