ಮಕಾಡೆ ಮಲಗಿದ ಘಟಾನುಘಟಿಗಳು, ಮೈತ್ರಿಗೆ ಮುಖಭಂಗ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮೇ 23- ಲೋಕಸಭಾ ಚುನಾವಣೆಯಲ್ಲಿ ಅತಿರಥ-ಮಹಾರಥರನ್ನೆಲ್ಲಾ ಮತದಾರರು ಮಕಾಡೆ ಮಲಗಿಸಿದ್ದಾರೆ.  ಕೋಲಾರದಲ್ಲಿ ಸತತ 7 ಬಾರಿ ಗೆಲುವು ಸಾಧಿಸಿ ಎಂಟೆದೆ ಭಂಟನಾಗಲು ಹೊರಟಿದ್ದ ಕಾಂಗ್ರೆಸ್‍ನ ಕೆ.ಎಚ್.ಮುನಿಯಪ್ಪನವರಿಗೆ ಬಿಜೆಪಿಯ ಪಾಲಿಕೆ ಸದಸ್ಯ ಮುನಿಸ್ವಾಮಿ ಬ್ರೇಕ್ ಹಾಕಿದ್ದಾರೆ.

1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಕೆ.ಎಚ್.ಮುನಿಯಪ್ಪ ಅವರ ಸತತ ಗೆಲುಗೆ ತಡೆಯೊಡ್ಡಿದ್ದಾರೆ. ಇತ್ತ ಕಲಬುರಗಿಯಲ್ಲೂ ಸೋಲಿಲ್ಲದ ಸರದಾರ ಮಲಿಕಾರ್ಜುನ ಖರ್ಗೆ ಅವರಿಗೆ ಅವರ ಶಿಷ್ಯ ಉಮೇಶ್ ಜಾಧವ್ ಸೋಲಿನ ರುಚಿ ಉಣಿಸಿದ್ದಾರೆ.

ಕಾಂಗ್ರೆಸ್‍ನಿಂದ ಬಿಜೆಪಿ ಸೇರಿ ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಖರ್ಗೆ ರುದ್ಧ ಕಣಕ್ಕಿಳಿದಿದ್ದ ಉಮೇಶ್ ಜಾಧವ್ ಅವರು, ಖರ್ಗೆಯನ್ನು ಸೋಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ತ ಚಿಕ್ಕಬಳ್ಳಾಪುರದಲ್ಲಿ ಗೆಲುನ ಹ್ಯಾಟ್ರಿಕ್ ಕನಸು ಕಾಣುತ್ತಿದ್ದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಯವರಿಗೆ ಬಿಜೆಪಿಯ ಬಿ.ಎನ್.ಬಚ್ಚೇಗೌಡ ಅವರು, ಸೋಲಿನ ರುಚಿ ತೋರಿಸಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿಯಾಗಿ, ಕೇಂದ್ರದ ಸಚಿವರಾಗಿ, ಎರಡು ಬಾರಿ ಸಂಸದರಾಗಿದ್ದ ವೀರಪ್ಪ ಮೊಯ್ಲಿ ಯವರಿಗೆ ಈ ಸೋಲಿನಿಂದ ತೀವ್ರ ಮುಖಭಂಗವಾಗಿದೆ. ಎಐಸಿಸಿ ಪ್ರಧಾನಕಾರ್ಯದರ್ಶಿ, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರಿಗೆ, ಬೆಂಗಳೂರು ದಕ್ಷಿಣದಲ್ಲಿ ಹೀನಾಯ ಸೋಲುಂಟಾಗಿದೆ. [ LOKSABHA ELECTIONS 2019 RESULT – Live Updates]

ಬಿಜೆಪಿ ಯುವ ಮೋರ್ಚಾ ಮುಖಂಡ ತೇಜಸ್ವಿ ಸೂರ್ಯ ಅವರ ರುದ್ಧ ಹೀನಾಯವಾಗಿ ಸೋತಿದ್ದಾರೆ. ಭೀಮಣ್ಣಖಂಡ್ರೆ ಅವರ ಪುತ್ರ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಬಿಜೆಪಿಯ ಭಗವಾನ್ ಖೂಬಾ ರುದ್ಧ ತೀವ್ರ ನ್ನಡೆ ಅನುಭಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin