ಮಂಗಳೂರು ಗಲಭೆ ಪ್ರಕರಣ : ಕಾಂಗ್ರೆಸ್ ಸದಸ್ಯರಲ್ಲೇ ಒಡಕಿನ ಧ್ವನಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.19- ಮಂಗಳೂರು ಗಲಭೆ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ನೀಡುವಾಗ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿದೆ ಎಂಬ ಹೇಳಿಕೆ ಕಾಂಗ್ರೆಸ್ ಸದಸ್ಯರಲ್ಲೇ ಒಡಕಿನ ದ್ವನಿಯನ್ನು ಸೃಷ್ಟಿಸಿತು.

ಜಾಮೀನು ನೀಡುವಾಗ ಹೈಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಉಲ್ಲೇಖಿಸಿ ಮಾತನಾಡಿದ ದಿನೇಶ್‍ಗುಂಡೂರಾವ್, ನ್ಯಾಯಾಧೀಶರು ಸರ್ಕಾರಕ್ಕೆ ಛೀಮಾರಿ ಹಾಕಿದ್ದಾರೆ. ಪೆÇಲೀಸರು ತಪ್ಪು ಮಾಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದರ ಹೊಣೆ ಹೊತ್ತು ಗೃಹ ಸಚಿವ ಬಸವರಾಜ ಬೊಬ್ಬಾಯಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ನ್ಯಾಯಾಲಯ ಸರ್ಕಾರಕ್ಕೆ ಛೀಮಾರಿ ಹಾಕಿದೆ ಎಂಬ ಪದ ಪ್ರಯೋಗವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಆಕ್ಷೇಪಿಸಿದರು.ಚರ್ಚೆಯಲ್ಲಿ ಭಾಗವಹಿದ ಕಾಂಗ್ರೆಸ್ ಸದಸ್ಯ ರಮೇಶ್‍ಕುಮಾರ್, ಛೀಮಾರಿ ಎಂಬ ಪದವನ್ನು ಯಾರಾದರು ಬಳಿಸಿದರೆ ಅದು ತಪ್ಪು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಇದರ ಬೆನ್ನ ಹಿಂದೆಯೇ ಮಾತನಾಡಿದ ಎಚ್.ಕೆ.ಪಾಟೀಲ್, ಛೀಮಾರಿ ಹಾಕಿದೆ ಎಂಬ ಪದವನ್ನು ಹೊತ್ತಿ ಹೇಳಿದರು.

ಛೀಮಾರಿ ಎಂಬ ಪದ ಅದನ್ನು ಕೇಳಿಸಿ ಕೊಳ್ಳುವವರ ಸೂಕ್ಷ್ಮತೆಯ ಮೇಲೆ ನಿರ್ಧಾರ ವಾಗುತ್ತದೆ. ಹೈಕೋರ್ಟ್‍ನ ಅಭಿಪ್ರಾಯಗಳು ಛೀಮಾರಿ ಅಲ್ಲದೆ ಮತ್ತೇನೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸದಸ್ಯರ ನಡುವೆಯೇ ಕೆಲ ವಿಷಯಗಳಲ್ಲಿ ಗೊಂದಲ ಇರುವುದು ಇದರಿಂದ ಸ್ಪಷ್ಟವಾಯಿತು.

Facebook Comments

Sri Raghav

Admin