ಕಾಂಗ್ರೆಸ್ ಪ್ರಣಾಳಿಕೆ ಯಥಾವತ್ ಕಾಪಿ ಮಾಡಿದ ಬಿಜೆಪಿ ಅಭ್ಯರ್ಥಿ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.22- ಕಾಂಗ್ರೆಸ್ ಅಭ್ಯರ್ಥಿಯ ಪ್ರಣಾಳಿಕೆಯನ್ನು ಬಿಜೆಪಿ ಅಭ್ಯರ್ಥಿ ಯಥಾವತ್ ಕಾಪಿ ಮಾಡಿದ್ದಾರೆ ಎಂದು ಕೆಪಿಸಿಸಿ ಅಸಮಾಧಾನ ವ್ಯಕ್ತಪಡಿಸಿದೆ. ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾದ ಎಂ.ಶಿವರಾಜ್ ಅವರು ಸಿದ್ಧಗೊಳಿಸಿದ ಪ್ರಣಾಳಿಕೆಯ ಮಾದರಿಯನ್ನೇ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಪ್ರಣಾಳಿಕೆಯೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಎರಡೂ ಪ್ರಣಾಳಿಕೆಯ ಮುಖಪುಟದಲ್ಲಿ ನಾಯಕರ ಫೋಟೋಗಳು, ಅಭ್ಯರ್ಥಿಯ ಫೋಟೋ, ಪಕ್ಷದ ಚಿಹ್ನೆ ಹೊರತುಪಡಿಸಿ ಉಳಿದೆಲ್ಲ ಅಂಶಗಳು ಯಥಾವತ್ ಇದೆ. ಪುಟವಿನ್ಯಾಸ ಕೂಡ ಒಂದೇ ರೀತಿಯಾಗಿದ್ದಾಗಿದೆ.

ಈ ಎರಡೂ ಫೋಸ್ಟರ್‍ಗಳನ್ನು ಟ್ವೀಟರ್‍ನಲ್ಲಿ ಫೋಸ್ಟ್ ಮಾಡಿರುವ ಕಾಂಗ್ರೆಸ್ ಪಕ್ಷ, ಬಿಜೆಪಿಯವರನ್ನು ಸುಳ್ಳುಗಾರರು, ಅನರ್ಹರು, ನಕಲಿ ನಾಯಕರು ತುಂಬಿರುವ ಪಕ್ಷ ಎಂದು ಟೀಕಿಸಿರುವುದಲ್ಲದೆ, ರಾಜ್ಯ ಬಿಜೆಪಿಯಲ್ಲಿ ವಿಚಾರಕರು ಇಲ್ಲ.

ಕಾಂಗ್ರೆಸ್ ಅಭ್ಯರ್ಥಿಯ ಪ್ರಣಾಳಿಕೆಯನ್ನು ಯಥಾವತ್ ಬಳಸಿಕೊಳ್ಳಲಾಗಿದೆ. ಕನಿಷ್ಠ ಅದರಲ್ಲಿ ಕರ್ನಾಟಕ ಕಾಂಗ್ರೆಸ್‍ನ ಕೃಪೆ ಎಂದಾದರೂ ಹಾಕಬೇಕಿತ್ತು ಎಂದು ಕೆಪಿಸಿಸಿ ಲೇವಡಿ ಮಾಡಿದೆ.

Facebook Comments