ಕುದುರೆ ವ್ಯಾಪಾರದಆತಂಕ : ಶಿವಸೇನೆ-ಎನ್‍ಸಿಪಿ-ಕಾಂಗ್ರೆಸ್ ಶಾಸಕರು ಹೊಟೇಲ್‍ಗಳಿಗೆ ಶಿಫ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ನ.24- ಮಹಾರಾಷ್ಟ್ರದ ಕ್ಷಿಪ್ರ ರಾಜಕೀಯ ಬೆಳವಣಿಗೆ ಮತ್ತು ಶಾಸಕರ ಖರೀದಿ ಆತಂಕದಿಂದ ಶಿವಸೇನೆ, ಎನ್‍ಸಿಪಿ ಮತ್ತು ಕಾಂಗ್ರೆಸ್ ಶಾಸಕರುಗಳನ್ನು ಮುಂಬೈನ ಐಷಾರಾಮಿ ಹೊಟೇಲ್‍ಗಳಿಗೆ ಶಿಫ್ಟ್ ಮಾಡಲಾಗಿದ್ದು, ಯಾರ ಸಂಪರ್ಕಕ್ಕೂ ಸಿಗದಂತೆ ಪ್ರತ್ಯೇಕವಾಗಿರಿಸಲಾಗಿದೆ.

ಕಾಂಗ್ರೆಸ್ ಶಾಸಕರು ಮುಂಬೈನ ಜುಹು ಪ್ರದೇಶದಲ್ಲಿರುವ ಜೆಡಬ್ಲ್ಯೂ ಮಾರಿಯಟ್ ಸ್ಟಾರ್ ಹೊಟೇಲ್‍ನಲ್ಲಿದ್ದಾರೆ. ಎನ್‍ಸಿಪಿ ಶಾಸಕರು ಪೋವೈನಲ್ಲಿರುವ ದಿ ರಸನೈನ್ಸ್ ಹೊಟೇಲ್‍ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಲಲಿತ್ ಹೊಟೇಲ್‍ನಲ್ಲಿ ಶಿವಸೇನೆ ಶಾಸಕರನ್ನು ಇರಿಸಲಾಗಿದೆ. ಈ ಮೂರೂ ಪಕ್ಷಗಳ ಶಾಸಕರು ಅಗ್ರ ನಾಯಕರನ್ನು ಹೊರತುಪಡಿಸಿ ಬೇರೆ ಯಾರ ಸಂಪರ್ಕಕ್ಕೂ ಸಿಗದಂತೆ ವ್ಯವಸ್ಥೆ ಮಾಡಲಾಗಿದೆ.

ಈ ಮೊದಲು ಕಾಂಗ್ರೆಸ್ ಶಾಸಕರನ್ನು ರಾಜಸ್ಥಾನದ ಜೈಪುರ್‍ನ ರೆಸಾರ್ಟ್‍ನಲ್ಲಿರಿಸಲು ಉದ್ದೇಶಿಸಲಾಗಿತ್ತು. ಆದರೆ, ಹಠಾತ್ ಬೆಳವಣಿಗೆ ಸಂಭವಿಸಿದಲ್ಲಿ ಶಾಸಕರು ಹತ್ತಿರದಲ್ಲಿರಬೇಕು ಎಂಬ ಕಾರಣದಿಂದಾಗಿ ಅವರನ್ನು ಮುಂಬೈನಲ್ಲೇ ಇರಿಸಲಾಗಿದೆ.

Facebook Comments

Sri Raghav

Admin