ತೈಲಬೆಲೆ ಏರಿಕೆ ಖಂಡಿಸಿ ಪೆಟ್ರೋಲ್ ಬಂಕ್‍ಗಳ ಕಾಂಗ್ರೆಸ್ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜೂ.11-ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಮುಖಂಡರು ಇಂದು ರಾಷ್ಟ್ರ ರಾಜಧಾನಿಯ ಹಲವಾರು ಪೆಟ್ರೋಲ್ ಬಂಕ್‍ಗಳ ಸಮೀಪ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಮುಖಂಡರಾದ ಕೆ.ಸಿ.ವೇಣುಗೋಪಾಲ್, ಶಕ್ತಿಸಿಂಗ್ ಗೋಹಿಲ್ ಮತ್ತಿತರರು ಫೀರೋಜ್ ಷಾ ಕ್ರೀಡಾಂಗಣ ಸಮೀಪದ ಬಂಕ್‍ಗೆ ಜಟಕಾ ಬಂಡಿಯಲ್ಲಿ ತೆರಳಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವೇಣುಗೋಪಾಲ್ ಅವರು, ಯುಪಿಎ ಸರ್ಕಾರದ ಅವಧಿಯಲ್ಲಿಲ ಇಂಧನದ ಮೇಲಿನ ತೆರಿಗೆ 9.20 ರೂ. ಇತ್ತು. ಇದೀಗ ತೆರಿಗೆ 32 ರೂ.ಗೆ ಏರಿಕೆಯಾಗಿದೆ ಎಂದು ಆರೋಪಿಸಿದರು.

ಪೆಟ್ರೋಲ್ ಮತ್ತು ಡೀಸಲ್‍ಗಳು ಸರಕು ಮತ್ತು ಸೇವೆ ವ್ಯಾಪ್ತಿಗೆ ಬರುವುದರಿಂದ ಇಂಧನಕ್ಕೆ ವಿಧಿಸುತ್ತಿರುವ ಅಬಕಾರಿ ತೆರಿಗೆಯನ್ನು ರದ್ದುಪಡಿಸಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಜನಪಥ್ ರಸ್ತೆಯ ರಾಜಿಂದರ್‍ನಗರದ ಬಂಕ್ ಸಮೀಪ ಅಜಯ್ ಮೆಕಾನ್ ಪ್ರತಿಭಟನೆ ನಡೆಸಿದರು.

ಅದೇ ರೀತಿ ರಾಜಧಾನಿಯ ಹಲವಾರು ಬಂಕ್‍ಗಳ ಸಮೀಪ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಈ ಕೂಡಲೆ ಕೇಂದ್ರ ಸರ್ಕಾರ ತೈಲ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

Facebook Comments

Sri Raghav

Admin