ಬಂದ್‍ಗೆ ಬೆಂಬಲಿಸಿ ಕಾಂಗ್ರೆಸ್ ಪಾದಯಾತ್ರೆ, ರಾಜ್ಯಪಾಲರಿಗೆ ದೂರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.28- ಒಪ್ಪಂದ ಆಧಾರಿತ ಕೃಷಿಯ ಮೂಲಕ ರೈತರ ಬದುಕನ್ನು ನಾಶ ಮಾಡಲು ಸರ್ಕಾರ ಅವಕಾಶ ಮಾಡಿಕೊಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.

ರಾಜ್ಯ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಎಪಿಎಂಸಿ, ಭೂ ಸುಧಾರಣೆ ಮತ್ತು ಕಾರ್ಮಿಕ ವಿರೋ ಕಾನೂನುಗಳನ್ನು ವಿರೋ ನಡೆಯುತ್ತಿರುವ ಕರ್ನಾಟಕ ಬಂದ್ ಬೆಂಬಲಿಸಿ ಕಾಂಗ್ರೆಸ್ ಭವನದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ರೈತನ ಬದುಕು ಸೂರ್ಯ, ಭೂಮಿ, ನೀರನ್ನು ಮಾತ್ರ ಅವಲಂಬಿಸಿದೆ. ರೈತರಿಗೆ ಸರ್ಕಾರಿ ನೌಕರರಿಗೆ ಸಿಗುವಂತೆ ವೇತನವಾಗಲಿ, ಬೋನಸ್ ಆಗಲಿ, ಪಿಂಚಣೆಯಾಗಲಿ, ಕನಿಷ್ಟ ಲಂಚವೂ ಸಿಗುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ರೈತರಿಗೆ ಭೂಮಿ ಕೊಡುವ ಕೆಲಸ ಮಾಡಿದೆ, ಬಿಜೆಪಿ ಸರ್ಕಾರ ಭೂಮಿ ಕಸಿಯುವ ಕೆಲಸ ಮಾಡುತ್ತಿದೆ. ಬಡವರಿಗೆ ನಿವೇಶನ, ಭೂಮಿ ಕೊಡುವುದು, ನ್ಯಾಯಾಕರಣ ರಚನೆ ಮಾಡುವುದು ಕಾಂಗ್ರೆಸ್‍ನ ಇತಿಹಾಸವಾದರೆ, ಬಿಜೆಪಿಯದು ಕಿತ್ತುಕೊಳ್ಳುವ ಇತಿಹಾಸ.

ಕೋವಿಡ್ ಸೋಂಕಿನ ಸಂದರ್ಭದಲ್ಲಿ ಸರ್ಕಾರ ರೈತರಿಗೆ ನೆರವಾಗಲಿಲ್ಲ. ನಮ್ಮ ಕಾಂಗ್ರೆಸ್ ಪಕ್ಷ ಹಣ್ಣು-ತರಕಾರಿಗಳನ್ನು ಖರೀದಿ ಮಾಡಿ ಸಂತ್ರಸ್ತರಿಗೆ ನೀಡುವಲ್ಲಿ ನೆರವಾಗಿತ್ತು. ಸಂಪೂರ್ಣ ನಷ್ಟ ಅನುಭವಿಸಿದ್ದ ರೈತರಿಗೆ ಕಾಂಗ್ರೆಸ್ ಮಧ್ಯ ಪ್ರವೇಶದಿಂದ ಒಂದಿಷ್ಟು ಅನುಕೂಲವಾಯಿತು.

ಬಿಜೆಪಿಯಿಂದ ರೈತರಿಗೆ ಏನು ಲಾಭವಾಗಲಿಲ್ಲ ಎಂದು ಕಿಡಿಕಾರಿದರು.
ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಬಿಜೆಪಿಯವರು ಬಂಡವಾಳಶಾಹಿಗಳು, ವ್ಯಾಪಾರಿಗಳು ಮತ್ತು ನಗರ ಪ್ರದೇಶಕ್ಕೆ ಸೀಮಿತವಾಗಿರುವವರು. ಅವರಿಗೆ ರೈತರ ಕಷ್ಟಗಳು ಅರ್ಥವಾಗುವುದಿಲ್ಲ.

ಹಾಗಾಗಿ ರೈತ ವಿರೋ ಮಸೂದೆಗಳನ್ನು ತಂದಿದ್ದಾರೆ. ರೈತರಿಗೆ ಸುಲಭವಾಗಿ ಭೂಮಿ ಸಿಕ್ಕಿಲ್ಲ. ಭೂ ಸುಧಾರಣಾ ಕಾಯ್ದೆ ಹಿಂದೆ ಸುದೀರ್ಘ ಹೋರಾಟವಿದೆ. ಕಷ್ಟ ಪಟ್ಟು ಗಳಿಸಿದ ಭೂಮಿಯನ್ನು ಬಂಡವಾಳ ಶಾಹಿಗೆ ಮಾರಾಟ ಮಾಡಲು ಅನುಕೂಲವಾಗುವಂತೆ ಬಿಜೆಪಿ ಸರ್ಕಾರ ಕಾನೂನು ತಂದಿದೆ. ಕೃಷಿಕರ ಬದುಕನ್ನು ಬೀದಿಪಾಲು ಮಾಡಲು ನಡೆಸಲಾಗಿದೆ.

ಬಂಡವಾಳಶಾಹಿಗಳು ರೈತರಿಂದ ನೂರಾರು ಎಕರೆ ಭೂಮಿ ಖರೀದಿಸಿ ಸ್ವಿಮ್ಮಿಂಗ್‍ಪೂಲ್ ಕಟ್ಟಿಸಿಕೊಳ್ಳುತ್ತಾರೆ. ಅಲ್ಲಿ ಕೃಷಿ ಮಾಡಲ್ಲ. ಕೃಷಿ ಉತ್ಪನ್ನಗಳು ಕುಸಿಯುತ್ತವೆ ಎಂದು ಹೇಳಿದರು.

ಮಾಜಿ ಸಚಿವ ರಮಾನಾಥ್ ರೈ ಮಾತನಾಡಿ, ಬಿಜೆಪಿ ಮೊದಲು ಜನಸಂಘವಾಗಿತ್ತು. ಅದು ಕೆಲ ವ್ಯಾಪಾರಿಗಳ ಪಕ್ಷವಾಗಿತ್ತು. ನಮ್ಮಲ್ಲಿ ಭೂಮಿ ಕಳೆದುಕೊಂಡ ಜಮೀನ್ದಾರ್‍ಗಳಿದ್ದಾರೆ. ಅವರೆಲ್ಲಾ ಬಿಜೆಪಿಯಲ್ಲಿದ್ದಾರೆ.

ಕರಾವಳಿ ಭಾಗದಲ್ಲಿ ಭೂಮಿ ಕಳೆದುಕೊಂಡ ಜಮೀನುಗಳ ಮಾಲೀಕರು ಭೂ ಸುಧಾರಣಾ ಕಾಯ್ದೆ ವಿರೋಸಿ ಭೂ ಸೇನೆ ಎಂದು ರಚಿಸಿಕೊಂಡಿದ್ದರು. ಅದರಲ್ಲಿ ಭೂ ಮಾಲೀಕರಿದ್ದರು. ಜನಸಂಘ ಮತ್ತು ಆರ್‍ಎಸ್‍ಎಸ್‍ನವರೇ ಅಲ್ಲಿದ್ದು ಕೆಲಸ ಮಾಡಿದ್ದರು.

ಅವರಿಗೆಲ್ಲಾ ಭೂ ಸುಧಾರಣಾ ಕಾಯ್ದೆ ಮೇಲೆ, ಇಂದಿರಾಗಾಂ, ದೇವರಾಜ ಅರಸು ಮೇಲೆ ಬಹಳ ಸಿಟ್ಟಿದೆ. ಈಗ ಅಕಾರ ಅವರ ಕೈಗೆ ಸಿಕ್ಕಿರುವುದರಿಂದ ಕಾನೂನು ಬದಲಾವಣೆ ಮಾಡಿ ಕಾಂಗ್ರೆಸ್ ನೀಡಿದ್ದ ಭೂಮಿಯನ್ನು ವಾಪಸ್ ಕಿತ್ತುಕೊಂಡು ಮತ್ತೆ ಬಂಡವಾಳಶಾಹಿಗಳಿಗೆ ಕೊಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಮಾಜಿ ಕೃಷಿ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ನಾವು ಹೋರಾಟ ಮಾಡುತ್ತಲೇ ಇದ್ದೇವೆ. ಬಿಜೆಪಿಯವರು ರಾಜಕೀಯ ಲಾಭ ಮಾಡಿಕೊಂಡು ಅಕಾರಕ್ಕೇರುತ್ತಿದ್ದಾರೆ. ನಾವು ತಂತ್ರಗಾರಿಕೆಯನ್ನು ಬದಲಾವಣೆ ಮಾಡಿಕೊಳ್ಳಬೇಕಿದೆ. ಬಿಜೆಪಿ ಆಡಳಿತ ಇರುವ ಸರ್ಕಾರಗಳನ್ನು ಕಿತ್ತು ಹಾಕಬೇಕಿದೆ ಎಂದರು.

ದೇಶದಲ್ಲಿ ಬಡತನ, ನಿರುದ್ಯೋಗ ಹೆಚ್ಚಾಗುತ್ತಿದೆ. ಕಳೆದ ಆರು ವರ್ಷದಿಂದ ಪ್ರಧಾನಿ ಅವರ ಜೊತೆ ಇರುವ ಅಂಬಾನಿ, ಅದಾನಿ ಅವರ ಆಸ್ತಿ ಹೆಚ್ಚಾಗುತ್ತಿದೆ. ವಿಶ್ವದಲ್ಲಿ 25ನೇ ಶ್ರೀಮಂತನಾಗಿದ್ದ ಅಂಬಾನಿ, ಮೋದಿ ಆಡಳಿತದಲ್ಲಿ 5ನೇ ಸ್ಥಾನಕ್ಕೇರಿದ್ದಾರೆ ಎಂದು ಹೇಳಿದರು.

ಶಾಸಕ ಪ್ರಿಯಾಂಕ ಖರ್ಗೆ ಮಾತನಾಡಿ, ಕೃಷಿ ಕ್ಷೇತ್ರ ಖಾಸಗಿಕರಣವಾದರೆ ಉದ್ಯಮಿಗಳಿಗೆ 25 ಲಕ್ಷ ಕೋಟಿ ಲಾಭವಿದೆ, ಅದು ಬಿಜೆಪಿಗೆ ಅನುಕೂಲವಾಗಲಿದೆ. ಒಪ್ಪಂದ ಆಧಾರಿತ ಕೃಷಿಯಿಂದ ರೈತರಿಗೆ ಅಪಾಯವಾಗಲಿದೆ ಎಂದು ಹೇಳಿದರು.

ಯಡಿಯೂರಪ್ಪ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು, ಅದೇಲ್ಲಾ ನಾಟಕನಾ ? ಕಾಯ್ದೆಗಳಿಂದ ಲಾಭವಾಗುವುದಿದ್ದರೆ ದೇಶಾದ್ಯಂತ ರೈತರು ಯಾಕೆ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ ಎಂದು ಪ್ರಶ್ನಿಸಿದರು.

ದೇಶದಲ್ಲಿ ಕೊರೊನಾ ಸೋಂಕಿದ್ದರೆ, ರಾಜ್ಯ ಸರ್ಕಾರದಲ್ಲಿ ಭ್ರಷ್ಟಚಾರ ಎಂಬ ಸೋಂಕಿದೆ. ಅದನ್ನು ತೊಗಿಸಲು ಕಾಂಗ್ರೆಸ್ ಸರ್ಕಾರ ಮತ್ತೆ ಅಕಾರಕ್ಕೆ ಬರಬೇಕು ಎಂದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಎಸ್.ಆರ್.ಪಾಟೀಲ್, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಯು.ಟಿ.ಖಾದರ್, ಉಮಾಶ್ರೀ, ಕೆಪಿಸಿಸಿ ಕಾಯಾಧ್ಯಕ್ಷ ಈಶ್ವರ್ ಖಂಡ್ರೆ, ಸಲೀಂ ಅಹಮದ್, ಸತೀಶ ಜಾರಕಿಹೊಳಿ, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ದೃವನಾರಾಯಣ್, ಬಿ.ಕೆ.ಹರಿಪ್ರಸಾದ್, ವಿ.ಎಸ್.ಉಗ್ರಪ್ಪ, ಚಂದ್ರಪ್ಪ, ಶಾಸಕ ಅಜಯ್‍ಸಿಂಗ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆಯ ಮೂಲಕ ರಾಜಭವನಕ್ಕೆ ತೆರಳಿ ಕಾಯ್ದೆ ವಿರೋಸಿ ರಾಜ್ಯಪಾಲರಿಗೆ ದೂರು ನೀಡಿದರು.

Facebook Comments

Sri Raghav

Admin