‘ಮೌನೇಂದ್ರ ಮೋದಿ’ : ಕಾಂಗ್ರೆಸ್ ಟೀಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.18- ಬೆಲೆ ಏರಿಕೆ, ರೈತರ ಆತ್ಮಹತ್ಯೆ, ನಿರುದ್ಯೋಗ ಸಮಸ್ಯೆ ಬಗ್ಗೆ ಪ್ರತಿಕ್ರಿಯಿಸದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಮೌನೇಂದ್ರ ಮೋದಿ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಲಿ ಎಂದು ಹೇಳಿದೆ.

ವಾಸ್ತವದ ಬಗ್ಗೆ ಪ್ರಧಾನಿ ಮೌನ ವಹಿಸಿದ್ದು, ಅದಾನಿ ಪೋರ್ಟ್‍ನಲ್ಲಿ ಸಿಕ್ಕ ಡ್ರಗ್ಸ್, ಕಾಶ್ಮೀರದ ದಳ್ಳುರಿ ಬಗ್ಗೆ ಯಾವುದೇ ಪತ್ರಿಕಾ ಗೋಷ್ಠಿಯನ್ನಾಗಲಿ, ಹೇಳಿಕೆಗಳನ್ನಾಗಲಿ ಮಾತನಾಡದೆ ಮೌನ ವಹಿಸಿದ್ದಾರೆ.

 

ಟೆಲಿಪ್ರಾಂಪ್ಟರ್ ಇಲ್ಲದೆ ಮಾತೇ ಹೊರಡುವುದಿಲ್ಲ! ವಿದೇಶಾಂಗ ವ್ಯವಹಾರಗಳಲ್ಲಿ ಭಾಷಾಂತರಕಾರರಿಲ್ಲದೆ ಆಟವೇ ನಡೆಯುವುದಿಲ್ಲ! ವಿದ್ಯಾಭ್ಯಾಸ ಬಿಟ್ಟು ಭಿಕ್ಷೆ ಬೇಡಿದವನಿಗೆ ಆರ್ಥಿಕತೆಯ ಗಂಧಗಾಳಿಯೇ ತಿಳಿದಿಲ್ಲ! ಬಟ್ಟೆ ಶೋಕಿ, ಬಿಟ್ಟಿ ಪ್ರಚಾರ, ಸುಳ್ಳಿನ ಭಾಷಣಗಳೇ ಅವರ ಬಂಡವಾಳ! #ಹೆಬ್ಬೆಟ್‌ಗಿರಾಕಿಮೋದಿ

ವಾಸ್ತವಗಳ ಬಗ್ಗೆ ಮಾತನಾಡದ ಪ್ರಧಾನಿ ತಮ್ಮ ಹೆಸರನ್ನು ‘ಮೌನೇಂದ್ರ ಮೋದಿ’ ಎಂದು ಬದಲಿಸಿಕೊಳ್ಳಲಿ. ◆ಬೆಲೆ ಏರಿಕೆಯ ಬಗ್ಗೆ -ಮೌನ ◆ಕಾಶ್ಮೀರದ ದಳ್ಳುರಿಗೆ -ಮೌನ ◆ಚೀನಾ ಅತಿಕ್ರಮಣಕ್ಕೆ -ಮೌನ ◆ರೈತರ ಹತ್ಯೆಗೆ -ಮೌನ ◆ಅದಾನಿ ಡ್ರಗ್ಸ್ ದಂಧೆಯ ಬಗ್ಗೆ -ಮೌನ ◆ನಿರುದ್ಯೋಗದ ಬಗ್ಗೆ -ಮೌನ ◆ಪತ್ರಿಕಾಗೋಷ್ಠಿಗೆ -ಮೌನ #ಹೆಬ್ಬೆ‌ಟ್‌ಗಿರಾಕಿಮೋದಿ

ಕಾಂಗ್ರೆಸ್ ಶಾಲೆಗಳನ್ನು ಕಟ್ಟಿಸಿತ್ತು, ಆದರೂ

ಓದಲಿಲ್ಲ, ವಯಸ್ಕರ ಶಿಕ್ಷಣ ಯೋಜನೆಯನ್ನೂ ಮಾಡಿತ್ತು ಆದರೂ ಓದಲಿಲ್ಲ, ಭಿಕ್ಷಾಟನೆ ನಿಷೇಧವಿದ್ದರೂ ಭಿಕ್ಷೆ ಬೇಡುವ ಸೋಂಬೇರಿ ಜೀವನದ ಗೀಳಿಗೆ ಬಿದ್ದವರು ಇಂದು ದೇಶವಾಸಿಗಳನ್ನು ಬಿಕ್ಷುಕರನ್ನಾಗಿಸಿದ್ದಾರೆ. #ಹೆಬ್ಬೆಟ್ಟುಗಿರಾಕಿಮೋದಿ ಯಿಂದ ದೇಶ ನರಳುತ್ತಿದೆ.

Facebook Comments