ಕನ್ಯಾಕುಮಾರಿ ಉಳಿಸಿಕೊಂಡ ಕಾಂಗ್ರೆಸ್

ಈ ಸುದ್ದಿಯನ್ನು ಶೇರ್ ಮಾಡಿ

ಚನ್ನೈ,ಮೇ 3- ತಮಿಳುನಾಡಿನ ಕನ್ಯಾಕುಮಾರಿ ಲೋಕಸಭಾ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.ಕನ್ಯಾಕುಮಾರಿ ಸಂಸದರಾಗಿದ್ದ ಹೆಚ್.ವಸಂತಕುಮಾರ್ ಅವರು ಕಳೆದ ವರ್ಷ ಕೊರೊನಾ ಸೋಂಕಿಗೆ ಬಲಿಯಾಗಿದ್ದರು.

ಹೀಗಾಗಿ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿಜಯವಸಂತ್ ಅವರು ತಮ್ಮ ಪ್ರತಿಸ್ಪರ್ಧಿ ಮಾಜಿ ಕೇಂದ್ರ ಸಚಿವ ಪೆÇನ್ನು ರಾಧಾಕೃಷ್ಣ ಅವರ ವಿರುದ್ಧ ಒಂದು ಲಕ್ಷಕ್ಕೂ ಅಧಿಕ ಮತ ಪಡೆದು ಗೆಲುವು ಸಾಧಿಸಿದ್ದಾರೆ.

ತಮ್ಮ ತಂದೆಯ ಸ್ಥಾನ ತುಂಬಲು ಅವಕಾಶ ಕೊಟ್ಟಿರುವ ಕನ್ಯಾಕುಮಾರಿ ಮತದಾರರನ್ನು ಅಭಿನಂದಿಸಿರುವ ವಿಜೇತ ಅಭ್ಯರ್ಥಿ ವಿಜಯವಸಂತ್ ಅವರು, ಕೊರೊನಾ ಸೋಂಕಿನಿಂದ ಪಾರಾಗಬೇಕಾದರೆ ಪ್ರತಿಯೊಬ್ಬರೂ ಮನೆಯಲ್ಲೇ ಇರಿ ಎಂದು ಮನವಿ ಮಾಡಿಕೊಂಡಿದ್ದಾರೆ.

Facebook Comments

Sri Raghav

Admin