ಕಾಂಗ್ರೆಸ್ ತಪ್ಪು ನೀತಿಗಳಿಂದ ದೇಶ ನಾಶದತ್ತ ಸಾಗಿತ್ತು : ಮೋದಿ ವಾಗ್ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

ಎಲೇನಾಬಾದ್ (ಹರಿಯಾಣ), : – ಕಾಂಗ್ರೆಸ್‍ನ ದುರಾಡಳಿತ ಮತ್ತು ತಪ್ಪುಗಳಿಂದಾಗಿ ದೇಶ ನಾಶದತ್ತ ಸಾಗಿತ್ತು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಹರಿಯಾಣದ 90 ವಿಧಾನಸಭಾ ಕ್ಷೇತ್ರಗಳಿಗೆ ಸೋಮವಾರ ನಡೆಯಲಿರುವ ಚುನಾವಣೆಯ ಕೊನೆಯ ದಿನದ ಪ್ರಚಾರವಾದ ಇಂದು ಸಿರ್ಸಾ ಜಿಲ್ಲೆಯ ಎಲೇನಾಬಾದ್‍ನಲ್ಲಿ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮೋದಿ ಮಾತನಾಡಿದರು.

ತಮ್ಮ ಭಾಷಣದ ಬಹು ಪಾಲನ್ನು ಕಾಂಗ್ರೆಸ್ ವಿರುದ್ಧ ವಾಗ್ದಾಳಿಗೆ ಮೀಸಲಿಟ್ಟರು. ಕಾಂಗ್ರೆಸ್ 20 ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ನ್ಯಾಯ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.

ಕಾಂಗ್ರೆಸ್‍ನ ತಪ್ಪು ನಿರ್ಧಾರಗಳಿಂದ 4 ಲಕ್ಷಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರು ಕಣಿವೆಯನ್ನು ತೊರೆಯಬೇಕಾಯಿತು ಎಂದರು.ಆದರೆ ನಮ್ಮ ಸರ್ಕಾರ ಆರ್ಟಿಕಲ್ 370 ರದ್ದು ಗೊಳಿಸಿ ಕಾಶ್ಮೀರ ಪ್ರಾಂತ್ಯದಲ್ಲಿ ಸುವ್ಯವಸ್ಥೆ ಜಾರಿಗೊಳಿಸಿದ್ದೇವೆ ಎಂದು ಕಟುವಾಗಿ ಟೀಕಿಸಿದರು.

Facebook Comments