ಕಾನ್‍ಸ್ಟೆಬಲ್ ಹುದ್ದೆಗೆ 20ರಂದು ಲಿಖಿತ ಪರೀಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.12- ನಗರ ಘಟಕದಲ್ಲಿ ಖಾಲಿ ಇರುವ ಸಿವಿಎಲ್ ಪೊಲೀಸ್ ಕಾನ್‍ಟೇಬಲ್(ಪುರುಷ ಮತ್ತು ಮಹಿಳಾ) ಹಾಗೂ ಸಿವಿಲ್ ಪೊಲೀಸ್ ಕಾನ್‍ಸ್ಟೆಬಲ್(ಪುರುಷ ಮತ್ತು ಮಹಿಳಾ)( ಕಲ್ಯಾಣ ಕರ್ನಾಟಕ) ಹುದ್ದೆಗಳ ಭರ್ತಿಯ ಸಂಬಂಧ ಸುಮಾರು 37,640 ಅಭ್ಯರ್ಥಿಗಳಿಗೆ ಸೆ.20ರಂದು ನಗರದಲ್ಲಿನ 69 ಪರೀಕ್ಷಾ ಕೇಂದ್ರದಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 12.30ರವರೆಗೆ ಲಿಖಿತ ಪರೀಕ್ಷೆ ನಡೆಯಲಿದೆ.

ಈಗಾಗಲೇ ಅಭ್ಯರ್ಥಿಗಳಿಗೆ ಮಾಹಿತಿಯನ್ನು ಇಲಾಖಾ ವೆಬ್‍ಸೈಟ್ www.ksp.gov.in ನಲ್ಲಿ ಬಿಡುಗಡೆ ಮಾಡಲಾಗಿದ್ದು, ಅರ್ಹ ಅಭ್ಯರ್ಥಿಗಳು ಕರೆಪತ್ರವನ್ನು ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿಕೊಂಡು ಸರಿಯಾದ ಸಮಯಕ್ಕೆ ಸೂಚಿಸಿದ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಲು ಈ ಮೂಲಕ ತಿಳಿಯಪಡಿಸಲಾಗಿದೆ.

ಹೆಚ್ಚಿನ ಮಾಹಿತಿಯನ್ನು ಸದರಿ ವೆಬ್‍ಸೈಟ್‍ನಲ್ಲಿ ವೀಕ್ಷಿಸಬಹುದಗಿದೆ ಎಂದು ಪೊಲೀಸ್ ಆಯುಕ್ತರ ಕಚೇರಿ ಪರಕಟಣೆ ತಿಳಿಸಿದೆ.

Facebook Comments