ಬಡ್ತಿಗಾಗಿ SSLC ಪರೀಕ್ಷೆ ಬರೆದ ಕಾನ್‍ಸ್ಟೇಬಲ್..!

ಈ ಸುದ್ದಿಯನ್ನು ಶೇರ್ ಮಾಡಿ

ಕೋಲಾರ,ಜು.19- ಕೆಎಸ್‌ಆರ್‌ಪಿ  ಪೊಲೀಸ್ ಕಾನ್‍ಸ್ಟೇಬಲ್ ಮಂಜುನಾಥ್(55) ಅವರು ಬಡ್ತಿ ಪಡೆಯುವ ಸಲುವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಖಾಕಿ ಸಮವಸ್ತ್ರ ಧರಿಸಿದವರೆಲ್ಲರಿಗೂ ಹೆಗಲ ಮೇಲೆ ಸ್ಟಾರ್ ಹಾಕಿಕೊಳ್ಳುವ ಹಂಬಲ ಇದ್ದೇ ಇರುತ್ತದೆ. ಅದಕ್ಕಾಗಿ ಮಂಜುನಾಥ್ ಪರೀಕ್ಷೆ ಬರೆಯಲು ಉತ್ಸುಕರಾಗಿದ್ದಾರೆ.

ಸುಮಾರು 30 ವರ್ಷಗಳ ಹಿಂದೆ 7ನೇ ತರಗತಿ ಪಾಸಾದವರಿಗೂ ಸರ್ಕಾರಿ ಉದ್ಯೋಗ ದೊರಕುತ್ತಿತ್ತು. ಇದೀಗ ಇವರು ಮುಖ್ಯ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ಬಡ್ತಿ ಎಎಸ್‍ಐ ಆಗುವ ಸಲುವಾಗಿ ಇಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಇವರು ಮೂಲತಃ ಕೋಲಾರ ನಗರದ ಕಟಾರಿ ಪಾಳ್ಯದ ನಿವಾಸಿಯಾಗಿದ್ದು, ಇದೀಗ ಬೆಂಗಳೂರಿನ ಕೋರಮಂಗಲದ ಕೆಎಸ್‍ಆರ್‍ಪಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

Facebook Comments