ಕಂಟೈನ್ಮೆಂಟ್ ವಲಯಗಳ ಜನರಿಂದಲೇ ಶೇ.30ರಷ್ಟು ಕೊರೋನಾ ಸೋಂಕು ಸ್ಫೋಟ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.9-ದೇಶದಲ್ಲಿ ಅತ್ಯಧಿಕ ಸೋಂಕು ಪ್ರಕರಣಗಳು ಪತ್ತೆಯಾಗಿರುವ ಹಾಟ್‍ಸ್ಪಾಟ್ ನಗರಗಳ ಕಂಟೈನ್ಮೆಂಟ್ ವಲಯಗಳಲ್ಲಿರುವ ಜನರಿಂದ ಶೇ.15 ರಿಂದ 30ರಷ್ಟು ಸಾಂಕ್ರಾಮಿಕ ರೋಗ ಉಲ್ಬಣಗೊಂಡಿದೆ ಎಂಬ ಆತಂಕಕಾರಿ ಸಂಗತಿಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ತಿಳಿಸಿದೆ.

ದೇಶದಲ್ಲಿ ಕೋವಿಡ್-19 ವೈರಸ್ ಸೋಂಕು ಮತ್ತು ಸಾವು ಪ್ರಕರಣಗಳು ದಿನೇ ದಿಣೇ ವ್ಯಾಪಕವಾಗಿ ಹೆಚ್ಛಾಗುತ್ತಿರುವ ಹಿನ್ನೆಲೆಯಲ್ಲಿ ಐಸಿಎಂಆರ್ ಇದೇ ಮೊದಲ ಬಾರಿಗೆ ದೇಶದಲ್ಲಿ ಜನಸಂಖ್ಯಾ ಆಧಾರದ ಮೇಲೆ ನಡೆಸಲಾದ ಸಮೀಕ್ಷೆಯಿಂದ ಈ ಸಂಗತಿ ಬೆಳಕಿಗೆ ಬಂದಿದೆ.

ದೇಶದಲ್ಲಿರುವ ಹಲವು ಹಾಟ್‍ಸ್ಪಾಟ್ ನಗರಗಳ ಕಂಟೈನ್ಮೆಂಟ್ ಝೋನ್‍ಗಳ ಮಂದಿಯಿಂದ ಶೇ.30ರವರೆಗೂ ಕೊರೊನಾ ಸೋಂಕು ಸ್ಪೋಟಗೊಂಡಿದೆ ಎಂದು ಸಮೀಕ್ಷೆಯಲ್ಲಿ ವಿವರಿಸಲಾಗಿದೆ.

ಭಾರತದಲ್ಲಿ ಅತ್ಯಧಿಕ ಸೋಂಕುಗಳು ವರದಿಯಾಗಿರುವ ಹಾಟ್‍ಸ್ಪಾಟ್ ನಗರಗಳಲ್ಲಿನ ಕಂಟೈನ್ಮೆಂಟ್ ಝೋನ್‍ಗಳಲ್ಲಿನ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಮಂದಿಯಲ್ಲಿ ಸೋಂಕು ಕಂಡುಬಂದಿದೆ. ಇನ್ನು ಕೆಲವು ಪ್ರಕರಣಗಳಲ್ಲಿ ಕೇಸ್‍ಗಳು ಬಹಿರಂಗಗೊಳ್ಳದೆಯೇ ಚೇತರಿಸಿಕೊಂಡಿರಬಹುದು ಎಂದು ಸಮೀಕ್ಷೆ ತಿಳಿಸಿದೆ.

ದೇಶದಲ್ಲಿರುವ ಹತ್ತು ಹಾಟ್‍ಸ್ಪಾಟ್ ನಗರಗಳಾದ ಮುಂಂಬೈ, ಅಹಮದಾಬಾದ್, ಪುಣೆ, ದೆಹಲಿ, ಕೊಲ್ಕತಾ, ಇಂದೋರ್, ಥಾಣೆ, ಜೈಪುರ, ಚೆನ್ನೈ ಹಾಗೂ ಸೂರತ್‍ನಲ್ಲಿ ಶೇ.70ರಷ್ಟು ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಪ್ರತಿ ಪ್ರದೇಶಗಳಿಂದಲೂ 500 ಸ್ಯಾಂಪಲ್‍ಗಳನ್ನು ಸಂಗ್ರಹಿಸಲಾಗಿದೆ

. ಅಲ್ಲದೇ ಹೆಚ್ಚುವರಿಯಾಗಿ 21 ರಾಜ್ಯಗಳ 60 ಜಿಲ್ಲೆಗಳಿಂದಲೂ 400 ಮಾದರಿಗಳನ್ನು ಪಡೆಯಲಾಗಿದ್ದು, ಹೆಚ್ಚು ಮತ್ತು ಸಾಮಾನ್ಯ ಸೋಂಕಿತರು ಎಂದು ವಿಂಗಡಿಲಾಗಿದೆ ಎಂದು ಸಮೀಕ್ಷೆ ವಿವರಿಸಿದೆ.

ಸೂರತ್, ಕೊಲ್ಕತಾ ಮತ್ತು ಇತರ ಆರು ನಗರಗಳನ್ನು ಹೊರತುಪಡಿಸಿ ಉಳಿದ ಎಲ್ಲ ಕಂಟೈನ್ಮೆಂಟ್ ಝೊನ್‍ಗಳಲ್ಲಿ ಜನರಿಂದ ಸೋಂಕು ಸ್ಪೋಟಗೊಂಡಿದೆ. ಮುಂಬೈ, ಪುಣೆ, ದೆಹಲಿ, ಅಹಮದಾಬಾದ್ ಮತ್ತು ಇಂದೋರ್ ನಗರಗಳಲ್ಲಿನ ಕಂಟೈನ್ಮೆಂಟ್ ಜೋನ್‍ಗಳಿಂದ ಸೋಂಕು ಹೆಚ್ಚಾಗಿ ಹರಡದಿದೆ ಎಂಬ ಸಂಗತಿಯು ಸರ್ವೆಯಿಂದ ತಿಳಿದುಬಂದಿದೆ. .

Facebook Comments