ಕಂಟೈನ್ಮೆಟ್ ಜೋನ್‍ಗಳಲ್ಲಿ ಮನೆ ಮನೆಗೆ ಆಹಾರ, ಪಡಿತರ ತಲುಪಿಸಲು ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜು.7- ಕಂಟೈನ್ಮೆಟ್ ಜೋನ್‍ಗಳ ಮನೆ ಮನೆಗೆ ಆಹಾರ, ಪಡಿತರ ತಲುಪಿಸಲು ಬಿಬಿಎಂಪಿ ಆಯುಕ್ತ ಅನಿಲ್‍ಕುಮಾರ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಕಂಟೈನ್ಮೆಂಟ್ ಜೋನ್ ಕಷ್ಟ ಪರಿಹರಿಸಲು ಹೆಲ್ಪ್‍ಲೈನ್ ನಂಬರ್ ಜತೆ ಈ ಆದೇಶ ಹೊರಡಿಸಿದ್ದು, ಮನೆಗಳಿಗೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲು ಸೂಚನೆ ನೀಡಿದ್ದಾರೆ.

ಕೊರೊನಾ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಇದನ್ನು ನಿಯಂತ್ರಿಸಲು ಕಂಟೈನ್ಮೆಂಟ್ ಜೋನ್‍ಗಳನ್ನು ಗುರುತಿಸಲಾಗಿದ್ದು, ಅಲ್ಲಿರುವವರು ಹೊರಬರದಂತೆ ಸೂಚಿಸಲಾಗಿರುವ ಹಿನ್ನೆಲೆಯಲ್ಲಿ ಅಗತ್ಯ ಇದ್ದವರ ಮನೆಗೆ ಊಟ, ಉಪಹಾರ ಕೊಡಲು ಅಧಿಕಾರಿಗಳಿಗೆ ಆಯುಕ್ತ ಅನಿಲ್ ಕುಮಾರ್ ಆದೇಶ ನೀಡಿದ್ದಾರೆ.

ಪಡಿತರ ದಾರರಿಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳು ಮನೆ ಬಾಗಿಲಿಗೆ ರೇಷನ್ ಒದಗಿಸಬೇಕು. ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ, ಔಷಧವನ್ನು ಬಿಬಿಎಂಪಿ ಆರೋಗ್ಯ ವಿಭಾಗ ಮಾಡಲಿದೆ.

ಏನೇ ತೊಂದರೆ ಆದರೂ ಈ ಹೆಲ್ಪ್‍ಲೈನ್‍ಗೆ ಕರೆ ಮಾಡಲು ಸೂಚನೆ ನೀಡಿದ್ದಾರೆ. ಕಂಟೈನ್ಮೆಂಟ್ ಕಷ್ಟಗಳಿಗೆ 080-22660000 ಅಥವಾ 9480685888ಕರೆ ಮಾಡಲು ಮನವಿ ಮಾಡಲಾಗಿದೆ.

Facebook Comments