ಬ್ರೆಜಿಲ್‍ನಲ್ಲಿ 1 ಲಕ್ಷ ದಾಟಿದ ಸಾವಿನ ಸಂಖ್ಯೆ, 30 ಲಕ್ಷ ಮಂದಿಗೆ ಕೊರೋನಾ..!

ಈ ಸುದ್ದಿಯನ್ನು ಶೇರ್ ಮಾಡಿ

ರಿಯೋ-ಡಿ-ಜನೈರೋ, ಆ.9- ಕಿಲ್ಲರ್ ಕೊರೊನಾ ವೈರಸ್ ದಾಳಿಯಿಂದ ವಿಶ್ವದಲ್ಲಿ ತೀವ್ರ ಬಾಧೆಗೆ ಒಳಗಾಗಿರುವ ಬ್ರೆಜಿಲ್‍ನಲ್ಲಿ ಹೆಮ್ಮಾರಿ ಆತಂಕಕಾರಿ ಮಟ್ಟದಲ್ಲಿ ಸೋಟಗೊಂಡಿದೆ.ಸಾಂಬಾ ನಾಡಿಯಲ್ಲಿ ಮೃತರ ಸಂಖ್ಯೆ 1 ಲಕ್ಷ ದಾಟಿದ್ದು, 30 ಲಕ್ಷಕ್ಕೂ ಅದಿಕ ಮಂದಿ ಸಾಂಕ್ರಾಮಿಕ ರೋಗ ಪೀಡಿತರಾಗಿದ್ದಾರೆ.

ಅಕೃತ ಮಾಹಿತಿ ಪ್ರಕಾರ ಬ್ರೆಜಿಲ್‍ನಲ್ಲಿ ಈವರೆಗೆ 1,00,543 ಮಂದಿಯನ್ನು ಹೆಮ್ಮಾರಿ ಬಲಿ ತೆಗೆದುಕೊಂಡಿದೆ. ಅಲ್ಲಿ ಈಗಲೂ 30,13,360 ಮಂದಿ ಮಾರಕ ಸೋಂಕಿನಿಂದ ನರಳುತ್ತಿದ್ದಾರೆ.ಬ್ರೆಜಿಲ್‍ನಲ್ಲಿ ಈವರೆಗೆ 20.94 ಲಕ್ಷ ಮಂದಿ ಚೇತರಿಸಿಕೊಂಡಿದ್ದು, ಈ 8.18 ಲಕ್ಷ ಸಕ್ರಿಯ ಪ್ರಕರಣಗಳಿವೆ.

# ನ್ಯೂಯಾರ್ಕ್ ವರದಿ : ವೈರಸ್ ದಾಳಿ ಅಮೆರಿಕದಲ್ಲಿ ಮುಂದುವರಿದಿದ್ದು, ಮೃತರ ಸಂಖ್ಯೆ 1.65 ಲಕ್ಷ ದಾಟಿದೆ ಹಾಗೂ ರೋಗ ಪೀಡಿತರ ಸಂಖ್ಯೆ 51 ಲಕ್ಷ ಮೀರಿದೆ.. ಅಲ್ಲದೇ ವಿಶ್ವದ ಸೂಪರ್ ಪವರ್  ರಾಷ್ಟ್ರದಲ್ಲಿ ಈಗಲೂ 23.43 ಲಕ್ಷ ಸಕ್ರಿಯ ಪ್ರಕರಣಗಳು ದಾಖಲಾಗಿರುವುದು ಆತಂಕದ ಸಂಗತಿ.

ನಿನ್ನೆ ಮಧ್ಯರಾತ್ರಿವರೆಗೆ ಲಭಿಸಿದ ಮಾಹಿತಿ ಪ್ರಕಾರ ಅಮೆರಿಕದಲ್ಲಿ ಈವರೆಗೆ 1,65,674 ಮಂದಿ ಮೃತಪಟ್ಟಿದ್ದು, 51,50,060 ಜನರು ಸಾಂಕ್ರಾಮಿಕ ರೋಗ ಪೀಡಿತರಾಗಿದ್ದಾರೆ.

ಇವರಲ್ಲಿ ಸುಮಾರು 18,650ಕ್ಕೂ ಹೆಚ್ಚು ರೋಗಿಗಳ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವೂ ಮುಂದುವರಿದಿದೆ. ಅಮೆರಿಕದಲ್ಲಿ ಈವರೆಗೆ ಸುಮಾರು 26,38,673 ಕೊರೊನಾ ಸೋಂಕು ರೋಗಿಗಳು ಚೇತರಿಸಿಕೊಂಡಿದ್ದಾರೆ/ ಗುಣಮುಖರಾಗಿದ್ದಾರೆ.

ಅಮೆರಿಕದಲ್ಲಿ ಈಗಲೂ 23,43,313 ಸಕ್ರಿಯ ಪ್ರಕರಣಗಳು ದಾಖಲಾಗಿರುವುದು ಆತಂಕಕಾರಿಯಾಗಿದೆ. ಅಮೆರಿಕ ಕೊರೊನಾ ಸೋಂಕು ಮತ್ತು ಸಾವಿನಲ್ಲಿ ಮೊದಲ ಸ್ಥಾನದಲ್ಲಿದ್ದು, ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ.

ಆ ರಾಷ್ಟ್ರದಲ್ಲಿ ಸೋಂಕು ಮತ್ತು ಸಾವುಗಳು ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಸಾಂಬಾ ನಾಡಿನಲ್ಲಿ 30.14 ಲಕ್ಷ ಮಂದಿಗೆ ಸೋಂಕು ತಗುಲಿದ್ದು, ಮೃತರ ಸಂಖ್ಯೆ ಒಂದು ಲಕ್ಷಕ್ಕ್ಕೇರಿದೆ. ನಂತರದ ಸ್ಥಾನಗಳಲ್ಲಿ ಭಾರತ, ರಷ್ಯಾ, ಮತ್ತು ದಕ್ಷಿಣ ಆಫ್ರಿಕಾ ದೇಶಗಳಿವೆ.

Facebook Comments

Sri Raghav

Admin