BIG NEWS: ಭಾರತದಲ್ಲಿ 1.50 ಕೋಟಿ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಏ.19- ಶರವೇಗದಲ್ಲಿ ಹಬ್ಬುತ್ತಿರುವ ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಕಳೆದ 24 ಗಂಟೆಗಳಲ್ಲಿ 2.73 ಲಕ್ಷ ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಇದರಿಂದ ದೇಶದ ಒಟ್ಟು ಸೋಂಕಿತರ ಸಂಖ್ಯೆ 1.50 ಕೋಟಿ ಗಡಿ ದಾಟಿದೆ. ಅದೇ ರೀತಿ ನಿನ್ನೆಯಿಂದ 1619 ಮಂದಿ ಮಹಾಮಾರಿಗೆ ಬಲಿಯಾಗಿರುವುದರಿಂದ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1,78,769 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಉಲ್ಲೇಖಿಸಿವೆ.

ನಿನ್ನೆಯಿಂದ 2,73,810 ಲಕ್ಷ ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಮಾತ್ರವಲ್ಲ 1,50,61,919 ಕೋಟಿ ಮಂದಿಯನ್ನು ಕೊರೊನಾ ಇದುವರೆಗೂ ಕಾಡಿದೆ. ಕಳೆದ 40 ದಿನಗಳಿಂದ ಸೋಂಕು ಯಾರ ಊಹೆಗೂ ನಿಲುಕದಂತೆ ಹಬ್ಬುತ್ತಿರುವ ಹಿನ್ನಲೆಯಲ್ಲಿ ಸಕ್ರಿಯ ಸೋಂಕು ಪ್ರಕರಣಗಳು 19 ಲಕ್ಷಕ್ಕೆ ಏರಿಕೆಯಾಗಿದೆ.

ಲಸಿಕಾಂದೋಲನದ ನಡುವೆಯೂ ಸೋಂಕು ಹೆಚ್ಚುತ್ತಲೆ ಇರುವುದರಿಂದ ಚೇತರಿಕೆ ಪ್ರಮಾಣ ಶೇ.86ಕ್ಕೆ ಕುಸಿದಿದೆ. ಒಂದೂವರೆ ಕೋಟಿ ಸೋಂಕಿತರ ಪೈಕಿ ಈಗಾಗಲೇ 1.29 ಕೋಟಿ ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

Facebook Comments