“ನೀರು ಊಟ ಕೊಡಿ, ಇಲ್ಲದಿದ್ರೆ ಸಾಮೂಹಿಕವಾಗಿ ನೇಣು ಹಾಕಿಕೊಂಡು ಸಾಯ್ತಿವಿ” : ಕೊರೋನಾ ಸೋಂಕಿತ ಪೊಲೀಸರ ಗೋಳಾಟ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಕೊರೋನಾ ಮಹಾಮಾರಿ ವಿರುದ್ಧ ಹೋರಾಡುತ್ತ ಅದೇ ಸೋಂಕಿತರಾಗಿ ಆಸ್ಪತ್ರೆ ಸೇರಿರುವ ಪೊಲೀಸರ ಗೋಳಾಟ ಹೇಳತೀರದಂತಿದೆ.  ಹೌದು, “ನಮಗೆ ಊಟ, ನೀರು ಇಲ್ಲ, ಹೇಳೋರು ಕೇಳೋರು ಇಲ್ಲವೇ ಇಲ್ಲ , ಉಪವಾಸದಿಂದಲೇ ಸಾಯುತ್ತಿದ್ದೇವೆ, ಒಂದೆಡೆ ಕೊರೋನಾ ಮತ್ತೊಂದೆಡೆ ಹಸಿವು, ಅವ್ಯವಸ್ಥೆ, ನಮಗೆ ಊಟ ನೀರು ಕೊಡದಿದ್ದರೆ ನಾವು ಸಾಮೂಹಿಕವಾಗಿ ನೇಣಿಗೆ ಶರಣಾಗುತ್ತೇವೆ” ಎಂದು ಕೊರೋನಾ ಸೋಂಕಿತರಾಗಿ ಕೋವಿಡ್ ಆಸ್ಪತ್ರೆಯಲ್ಲಿರುವ ಪೊಲೀಸರು ವಿಡಿಯೋ ಮೂಲಕ ತಮ್ಮ ಕಷ್ಟವನ್ನು ತೋಡಿಕೊಂಡಿದ್ದಾರೆ. ಸರಿಯಾದ ವ್ಯವಸ್ಥೆಗಳಿಲ್ಲದೆ ಪರಿತಪಿಸುತ್ತಿದ್ದಾರೆ.

ಕರ್ತವ್ಯದಲ್ಲಿದ್ದಾಗ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿರುವ ಪೊಲೀಸರಿಗೆ ಊಟ, ನೀರು ಸಿಗದೇ ನರಳಾಡುತ್ತಿದ್ದಾರೆ, ಇವರ ಕಷ್ಟವನ್ನು ವಿಡಿಯೋ ಮೂಲಕ ತೋಡಿಕೊಂಡಿದ್ದು, ಯಾವ ಅಧಿಕಾರಿಯೂ ಅವರ ಬಳಿ ಸುಳಿದಿಲ್ಲ, ಅವರ ಕಷ್ಟಗಳನ್ನು ಕೇಳಿಲ್ಲ, ಸರಿಯಾದ ಊಟದ ವ್ಯವಸ್ಥೆಯಿಲ್ಲ, ಕುಡಿಯಲು ನೀರೂ ಕೂಡ ಸಿಗುತ್ತಿಲ್ಲ ಸರ್ಕಾರ ದಯಾವಿಟ್ಟು ಈ ಕಡೆ ಗಮನಹರಿಸಿ ಈ ಕೊರೋನಾ ವಾರಿಯರ್ಸ್ ಬಗ್ಗೆ ಕಾಳಜಿ ವಹಿಸುವ ಅವಶ್ಯಕತೆ ಇದೆ.

Facebook Comments

Sri Raghav

Admin