ಧಾರವಾಡ ಜಿಲ್ಲೆಯಲ್ಲಿ 437 ಜನರ ಮೇಲೆ ಕರೋನಾ ನಿಗಾ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ.:,ಮಾ,26- ಕರೋನಾ ವೈರಸ್ ಪತ್ತೆಗಾಗಿ ಧಾರವಾಡ ಜಿಲ್ಲೆಯಲ್ಲಿ ಈವರೆಗೆ 437 ಜನರ ಮೇಲೆ ನಿಗಾ ವಹಿಸಲಾಗಿದೆ. 266 ಜನರನ್ನು ಅವರ ಮನೆಗಳಲ್ಲಿಯೇ ಪ್ರತ್ಯೇಕವಾಗಿ ಇರಿಸಲಾಗಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅವರಿಗೆ ಐಸೋಲೇಶನ್ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. 14 ದಿನಗಳ ಪ್ರತ್ಯೇಕತಾ ಅವಧಿಯನ್ನು 155 ಜನ ಪೂರ್ಣಗೊಳಿಸಿದ್ದಾರೆ. 28 ದಿನಗಳ ಪ್ರತ್ಯೇಕತೆ ಅವಧಿಯನ್ನು 14 ಜನ ಪೂರ್ಣಗೊಳಿಸಿದ್ದಾರೆ.ಇದುವರೆಗೆ 38 ಶಂಕಿತರ ಗಂಟಲು ದ್ರವದ ಪ್ರಯೋಗಾಲಯ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಈ ಪೈಕಿ ಆ 32 ಜನರ ವರದಿಗಳು ನೆಗೆಟಿವ್ ಎಂದು ಬಂದಿವೆ. ಇನ್ನೂ ಐದು ಜನರ ವರದಿಗಾಗಿ ಜಿಲ್ಲಾಡಳಿತ ಎದುರು ನೋಡುತ್ತಿದೆ.

# ರಸ್ತೆಗಿಳಿದವರಿಗೆ ಬಿಳುತ್ತಿವೆ ಲಾಠಿ ಏಟು :
ಕೊರೊನಾ ಭೀತಿ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾದ್ಯಂತ 144 ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಲಾಕ್‌ಡೌನ್ ನಿಯಮ ಉಲ್ಲಂಘಿಸಿ ರಸ್ತೆಗಿಳಿದವರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ. ಜನಕ್ಕೆ ಇಷ್ಟೆಲ್ಲಾ ಕಠಿಣವಾಗಿ ನಿಯಮ ಮಾಡಿದರು ಸಹ ಕುಂಟು ನೆಪ ಮಾಡಿಕೊಂಡು ಹೊರಗೆ ಬರುತ್ತಿದ್ದಾರೆ. ನಗರದ ಚನ್ನಮ್ಮ ವೃತ್ತ, ರಾಯಣ್ಣ ಸರ್ಕಲ್, ಸಾಯಿಬಾಬಾ ಮಂದಿರದಲ್ಲಿ ಓಡಾಡುತ್ತಿದ್ದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.

ಇನ್ನೂ ಪೋಲಿಸರು ಮನೆಯಿಂದ ಹೊರ ಬರಬೇಡಿ ಎಂದು ಎಷ್ಟೇ ತಿಳಿ ಹೇಳುತ್ತಿದ್ದರು ಸಹಿತ ಸಾರ್ವಜನಿಕರು ಮಾತ್ರ ರಸ್ತೆಯಲ್ಲಿ ಬೇಕಾಬಿಟ್ಟಿ ಓಡಾಡುತ್ತಿದ್ದರು ಈ ವೇಳೆ ಅಂತವರಿಗೆ ಪೋಲಿಸರು ಲಾಠಿ ರುಚಿ ತೋರಿಸಿ ಮನೆಗೆ ಅಟ್ಟಿದ್ದಾರೆ. ಸರ್ಕಾರ ಜನರ ಜೀವ ರಕ್ಷಣೆಗಾಗಿ ಎಷ್ಟೇಲ್ಲಾ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತಿದ್ದರೇ ಇದನ್ನು ಅರಿಯದ ಜನರು ಮಾತ್ರ ಇದಕ್ಕೆ ಸ್ಪಂದಿಸದೇ ಹೋಗುತ್ತಿರುವುದು ದುರಾದೃಷ್ಟಕರವಾಗಿದೆ.

Facebook Comments

Sri Raghav

Admin