ಬೆಂಗಳೂರಿನ 73 ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆಗೆ ಸರ್ಕಾರ ಆದೇಶ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.4-ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಶರವೇಗದಲ್ಲಿ ಹರಡುತ್ತಿರುವುದರಿಂದ ರಾಜ್ಯ ಸರ್ಕಾರ ಸೋಂಕಿತರಿಗೆ ಚಿಕಿತ್ಸೆ ನೀಡಲು 73 ಆಸ್ಪತ್ರೆಗಳನ್ನು ಗುರುತಿಸಿದೆ.

ಸಿಲಿಕಾನ್ ಸಿಟಿಯಲ್ಲಿ ರೋಗಿಗಳಿಗೆ ಕೊರೋನಾ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಉದರುಣದ ಕೆಲವರು ಜೀವವನ್ನೇ ಕಳೆದುಕೊಂಡಿರುವ ಘಟನೆಗಳು ನಡೆದಿವೆ.

ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಬೆಂಗಳೂರಿನ 73 ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾಗೆ ಚಿಕಿತ್ಸೆ ನೀಡುವಂತೆ ಆದೇಶ ನೀಡಿದೆ. ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನಗರದ 73 ಆಸ್ಪತ್ರೆಗಳಲ್ಲಿ ಶೇ. 50ರಷ್ಟು ಹಾಸಿಗೆಗಳನ್ನು ಕೊರೋನಾ ರೋಗಿಗಳಿಗೆ ಕಾಯ್ದಿರಿಸಲು ಆದೇಶ ನೀಡಿದೆ.

ಕೊರೋನಾ ಲಕ್ಷಣಗಳಿರುವ ರೋಗಿಗಳಿಗೆ ಹಲವು ಖಾಸಗಿ ಆಸ್ಪತ್ರೆಗಳು ನಿರಾಕರಿಸುತ್ತಿದ್ದವು. ಆದರೆ, ಇನ್ನುಮುಂದೆ ಆ ರೀತಿ ಆಗುವುದಿಲ್ಲ. ಬೆಂಗಳೂರಿನ ಪ್ರಮಖ ಆಸ್ಪತ್ರೆಗಳೂ ಸೇರಿದಂತೆ ಒಟ್ಟು 73 ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ಸಿಗಲಿದೆ. ಕೇಂದ್ರೀಕೃತ ಹಂಚಿಕೆ ಮೂಲಕ ರೋಗಿಗಳನ್ನು ಈ ಆಸ್ಪತ್ರೆಗಳಿಗೂ ಕಳಿಸಲಾಗುತ್ತದೆ.

ರೋಗಿಗಳು ಬೇಕಿದ್ದರೆ ಸರ್ಕಾರ ನಿಗದಿ ಪಡಿಸಿರುವ ದರ ನೀಡಿ, ಬ್ಲಡ್ ರಿಪೋರ್ಟ್ ಸಮೇತ ಹೋಗಿ ಈ ಆಸ್ಪತ್ರೆಗಳಲ್ಲಿ ನೇರವಾಗಿ ಚಿಕಿತ್ಸೆ ಪಡೆಯಬಹುದು.

ಲ್ಯಾಬ್ ರಿಪೋರ್ಟ್ ಇಲ್ಲದಿದ್ದರೂ ತೀವ್ರ ಅನಾರೋಗ್ಯಕ್ಕೀಡಾದ ರೋಗಿಗೆ ಈ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸುವಂತಿಲ್ಲ. ಕೊರೋನಾ ಸೋಂಕಿತರಿಗೆ ಯಾವುದೇ ಅನಾನುಕೂಲ ಉಂಟಾದರೆ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.

ಬೆಂಗಳೂರಿನ ವೈದೇಹಿ, ಎಂಎಸ್ ರಾಮಯ್ಯ, ಬಿಜಿಎಸ್, ಅಪೊಲೊ, ಭಗವಾನ್ ಮಹಾವೀರ್ ಜೈನ್, ಕೊಲಂಬಿಯಾ ಏಷ್ಯಾ, ಕಿಮ್ಸ್, ಮಲ್ಲಿಗೆ ಆಸ್ಪತ್ರೆ, ಮಣಿಪಾಲ್, ಪೀಪಲ್ ಟ್ರೀ, ಸೇಂಟ್ ಜÁನ್ಸ್, ಸ್ಪರ್ಶ್, ವಾಸವಿ ಮುಂತಾದ 73 ಖಾಸಗಿ ಆಸ್ಪತ್ರೆಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

Facebook Comments