ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಬೆಂಗಳೂರಿನ 12 ಆಸ್ಪತ್ರೆಗಳನ್ನು ಮೀಸಲಿಟ್ಟ ಸರ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.25-ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸಾವಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ನಗರದ 12 ವೈದ್ಯಕೀಯ ಆಸ್ಪತ್ರೆಗಳನ್ನು ಕೊರೊನಾ ಸೋಂಕಿತರಿಗೆ ಮೀಸಲಿಟ್ಟಿದೆ.

ಸೋಂಕು ಪೀಡಿತರು ಆಸ್ಪತ್ರೆಗಳಲ್ಲಿ ಬೆಡ್, ವೆಂಟಿಲೇಟರ್, ಕುಡಿಯುವ ನೀರು, ಆಹಾರ, ಶೌಚಾಲಯ ಸೇರಿದಂತೆ ಹಲವು ರೀತಿಯ ಸೌವಲತ್ತುಗಳಿಲ್ಲದೆ ಪರದಾಡುತ್ತಿದ್ದಾರೆ.

ಇದರಿಂದ ತೀವ್ರ ಮುಖಭಂಗಕ್ಕೆ ಒಳಗಾಗಿದ್ದ ಸರ್ಕಾರ ಇದೀಗ ಬಿಬಿಎಂಪಿ ವ್ಯಾಪ್ತಿಯಲ್ಲಿ 12 ವೈದ್ಯಕೀಯ ಕಾಲೇಜುಗಳನ್ನು ಗುರುತಿಸಿದೆ. ಈ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರಿಗೆ ದಿನದ 24 ಗಂಟೆಯೂ ವೈದ್ಯಕೀಯ ಸೌಲಭ್ಯ ನೀಡಬೇಕೆಂದು ಸೂಚನೆ ನೀಡಲಾಗಿದೆ. ಸರ್ಕಾರ ಹೊರಡಿಸಿರುವ ಆದೇಶದಂತೆ 12 ವೈದ್ಯಕೀಯ ಕಾಲೇಜುಗಳಲ್ಲಿ ಒಟ್ಟು 10,689 ಹಾಸಿಗೆಗಳಿವೆ.

ಇದರಲ್ಲಿ ಕೋವಿಡ್ ಸೋಂಕಿತರಿಗೆ 2200 ಹಾಸಿಗೆಗಳನ್ನು  ಸಲಿಡಲಾಗಿದೆ. 561 ಐಸಿಯು ಜೊತೆಗೆ 281 ಹಾಸಿಗೆ, ಐಸಿಯು ಜೊತೆಗೆ 239 ವೆಂಟಿಲೇಟರ್, ಐಸಿಯು ಬೆಡ್ ಜೊತೆ 120 ವೆಂಟಿಲೇಟರ್‍ಗಳನ್ನು ಮೀಸಲಿಡಲಾಗಿದೆ. ಈ ವೈದ್ಯಕೀಯ ಕಾಲೇಜುಗಳಲ್ಲಿ ಕೊರೊನಾ ಸೋಂಕಿತರು ದಾಖಲಾದರೆ ಅವರಿಗೆ ಸರ್ಕಾರದ ಮಾರ್ಗಸೂಚಿ ಪ್ರಕಾರವೇ ಸೌಲಭ್ಯಗಳನ್ನು ನೀಡಬೇಕೆಂದು ವೈದ್ಯಕೀಯ ನಿರ್ದೇಶನಾಲಯ ಸೂಚಿಸಿದೆ.

# ಯಾವ ಯಾವ ಕಾಲೇಜುಗಳು:
ದೇವನಹಳ್ಳಿಯ ಆಕಾಶ್ ಮೆಡಿಕಲ್ ಕಾಲೇಜಿನಲ್ಲಿ ಒಟ್ಟು ಹಾಸಿಗೆ -855, ಕೋವಿಡ್ ಮೀಸಲು 200, ಐಸಿಯು 30, ಐಸಿಯು ಬೆಡ್ 15, ವೆಂಟಿಲೇಟರ್ 25, ಕೋವಿಡ್ ವೆಂಟಿಲೇಟರ್ 13.  ಬಿಜಿಎಸ್ ವೈದ್ಯಕೀಯ ವಿಜ್ಞಾನ ಕಾಲೇಜು ಬೆಂಗಳೂರು- ಒಟ್ಟು ಹಾಸಿಗೆ -710, ಕೋವಿಡ್ ಮೀಸಲು 200, ಐಸಿಯು 40, ಐಸಿಯು ಬೆಡ್ 20, ವೆಂಟಿಲೇಟರ್ 24, ಕೋವಿಡ್ ವೆಂಟಿಲೇಟರ್ 12.

ಡಾ.ಬಿ.ಆರ್.ಅಂಬೇಡ್ಕರ್ ವೈದ್ಯಕೀಯ ವಿಜ್ಞಾನ ಕಾಲೇಜು, ಬೆಂಗಳೂರು- ಒಟ್ಟು ಹಾಸಿಗೆ -500, ಕೋವಿಡ್ ಮೀಸಲು 200, ಐಸಿಯು 10, ಐಸಿಯು ಬೆಡ್ 05, ವೆಂಟಿಲೇಟರ್ 4, ಕೋವಿಡ್ ವೆಂಟಿಲೇಟರ್ 02.  ಈಸ್ಟ್ ಪಾಯಿಂಟ್ ಮೆಡಿಕಲ್ ಕಾಲೇಜು, ಬೆಂಗಳೂರು-ಒಟ್ಟು ಹಾಸಿಗೆ -410, ಕೋವಿಡ್ ಮೀಸಲು 200, ಐಸಿಯು 20, ಐಸಿಯು ಬೆಡ್ 10, ವೆಂಟಿಲೇಟರ್ 05, ಕೋವಿಡ್ ವೆಂಟಿಲೇಟರ್ 03.

ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಕಾಲೇಜು, ಒಟ್ಟು ಹಾಸಿಗೆ -1049, ಕೋವಿಡ್ ಮೀಸಲು 200, ಐಸಿಯು 107, ಐಸಿಯು ಬೆಡ್ 54, ವೆಂಟಿಲೇಟರ್ 39, ಕೋವಿಡ್ ವೆಂಟಿಲೇಟರ್ 20.ಎಂ.ಎಸ್.ರಾಮಯ್ಯ ವೈದ್ಯಕೀಯ ಕಾಲೇಜು, ಬೆಂಗಳೂರು- ಒಟ್ಟು ಹಾಸಿಗೆ -1365, ಕೋವಿಡ್ ಮೀಸಲು 200, ಐಸಿಯು 80, ಐಸಿಯು ಬೆಡ್ 40, ವೆಂಟಿಲೇಟರ್ 18, ಕೋವಿಡ್ ವೆಂಟಿಲೇಟರ್ 09.

ಎಂವಿಜೆ ವೈದ್ಯಕೀಯ ಕಾಲೇಜು-ಹೊಸಕೋಟೆ, ಒಟ್ಟು ಹಾಸಿಗೆ -850, ಕೋವಿಡ್ ಮೀಸಲು 200, ಐಸಿಯು 75, ಐಸಿಯು ಬೆಡ್ 38, ವೆಂಟಿಲೇಟರ್ 08, ಕೋವಿಡ್ ವೆಂಟಿಲೇಟರ್ 04. ಸಪ್ತಗಿರಿ ವೈದ್ಯಕೀಯ ವಿಜ್ಞಾನ ಕಾಲೇಜು, ಬೆಂಗಳೂರು- ಒಟ್ಟು ಹಾಸಿಗೆ -750, ಕೋವಿಡ್ ಮೀಸಲು 200, ಐಸಿಯು 10, ಐಸಿಯು ಬೆಡ್ 05, ವೆಂಟಿಲೇಟರ್ 10, ಕೋವಿಡ್ ವೆಂಟಿಲೇಟರ್ 05. ಸೆಂಟ್‍ಜಾನ್ ವೈದ್ಯಕೀ ಕಾಲೇಜು, ಬೆಂಗಳೂರು-ಒಟ್ಟು ಹಾಸಿಗೆ -1350, ಕೋವಿಡ್ ಮೀಸಲು 200, ಐಸಿಯು 103, ಐಸಿಯು ಬೆಡ್ 52, ವೆಂಟಿಲೇಟರ್ 75, ಕೋವಿಡ್ ವೆಂಟಿಲೇಟರ್ 38.

ಆಕ್ಸ್‍ಫರ್ಡ್ ವೈದ್ಯಕೀಯ ಕಾಲೇಜು, ಬೆಂಗಳೂರು- ಒಟ್ಟು ಹಾಸಿಗೆ -750, ಕೋವಿಡ್ ಮೀಸಲು 200, ಐಸಿಯು 250, ಐಸಿಯು ಬೆಡ್ 25, ವೆಂಟಿಲೇಟರ್ 11, ಕೋವಿಡ್ ವೆಂಟಿಲೇಟರ್ 06. ವೈದೇಹಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು- ಒಟ್ಟು ಹಾಸಿಗೆ -1600, ಕೋವಿಡ್ ಮೀಸಲು 200, ಐಸಿಯು 36, ಐಸಿಯು ಬೆಡ್ 18, ವೆಂಟಿಲೇಟರ್ 20, ಕೋವಿಡ್ ವೆಂಟಿಲೇಟರ್ 10.

ಎಸ್‍ಡಿಎಸ್ ರಾಜೀವ್‍ಗಾಂಧಿ ಹೃದ್ರೋಗ ಸಂಸ್ಥೆ, ಬೆಂಗಳೂರು- ಒಟ್ಟು ಹಾಸಿಗೆ -375, ಕೋವಿಡ್ ಮೀಸಲು 104, ಐಸಿಯು 32, ಐಸಿಯು ಬೆಡ್ 12, ವೆಂಟಿಲೇಟರ್ 12, ಕೋವಿಡ್ ವೆಂಟಿಲೇಟರ್ 12.

Facebook Comments