ಕೊರೊನಾ ಲಸಿಕೆ ವಿತರಣೆಗೆ ಬಿಬಿಎಂಪಿ ಸಕಲ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.15-ಕೊರೊನಾ ವಾಕ್ಸಿನ್ ಶೇಖರಣೆ ಮತ್ತು ವಿತರಣೆಗೆ ಬಿಬಿಎಂಪಿ ಸರ್ವಸನ್ನದ್ಧವಾಗಿದೆ. ಮೊದಲ ಹಂತದ ವಾಕ್ಸಿನ್ ಪಡೆಯುವವರ ಪಟ್ಟಿ ಸಿದ್ಧ ಮಾಡಲಾಗಿದೆ.  ಬಿಬಿಎಂಪಿ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ ಕೋವಿಡ್ ಲಸಿಕೆಯನ್ನು ಯಾವ ಟಾರ್ಗೆಟ್ ಮೂಲಕ ನೀಡಬೇಕು ಎಂಬ ಬಗ್ಗೆ ಸಕಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.

ವೈದ್ಯರು, ನರ್ಸ್‍ಗಳು, ಪ್ಯಾರಾ ಮೆಡಿಕಲ್ ನರ್ಸ್‍ಗಳು 1.49 ಲಕ್ಷ ಜನರ ಲಸಿಕೆಗೆ ಪಟ್ಟಿಯನ್ನು ಈಗಾಗಲೇ ಸಿದ್ಧ ಮಾಡಿಕೊಳ್ಳಲಾಗಿದೆ. ಹಂತ ಹಂತವಾಗಿ ಪಟ್ಟಿಗೆ ಆರೋಗ್ಯ ಕಾರ್ಯಕರ್ತರ ಮತ್ತಷ್ಟು ಹೆಸರನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ.

22 ಲಕ್ಷ ವಾಕ್ಸಿನ್ ಶೇಖರಣೆಗೆ ಅವಕಾಶ ಮಾಡಿಕೊಳ್ಳಲಾಗಿದೆ. ಕೊರೊನಾ ವಾಕ್ಸಿನ್ ಸಂಗ್ರಹಕ್ಕೆ 44 ರೆಫ್ರಿಜಿರೇಟರ್, 180 ಐಸ್‍ಲೆಂಡ್, 170 ಡೀಪ್ ಫ್ರೀಜರ್ ಸಿದ್ಧ ವಿದೆ.  8 ರೆಫೆರಲ್ ಆಸ್ಪತ್ರೆಗಳು ಕೂಡ ಸಿದ್ಧ ವಿದೆ. ಐಸ್‍ಲೆಂಡ್ ಮತ್ತಷ್ಟು ಹೆಚ್ಚು ಖರೀದಿಗೆ ಪ್ರಸ್ತಾಪ ಸಲ್ಲಿಸಲಾಗಿದೆ. ಎಲ್ಲ ಜನರಿಗೆ ವಾಕ್ಸಿನ್ ಕೊಡುವಾಗ ಲ್ಯಾಂಡ್ ಗುರುತಿಸುವ ಅಗತ್ಯವಿದೆ.

ಸಿಬ್ಬಂದಿಗಳನ್ನು ಗುರುತಿಸುವ ಕೆಲಸ ನಡೆಯುತ್ತಿದೆ. ಪಾಲಿಕೆಯಲ್ಲಿ 500 ಜನ ವಾಕ್ಸಿನ್ ನೀಡುವ ಸಿಬ್ಬಂದಿ ಇದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳನ್ನು ವಾಕ್ಸಿನ್ ಹಾಕಲು ಬಳಸಿಕೊಳ್ಳಲಾಗುತ್ತದೆ. ಆರೋಗ್ಯ ವಿಭಾಗದಲ್ಲಿ 15,072 ಸಿಬ್ಬಂದಿಗಳಿದ್ದಾರೆ.

2884 ಮೇಲ್ವಿಚಾರಕರು , ಸಹಾಯಕರಿದ್ದು, ಖಾಸಗಿ ಹೆಲ್ತ್ ವಿಭಾಗದಲ್ಲಿ 12,400 ಮಂದಿ, ಖಾಸಗಿ ಪ್ಯಾರಾ ಮತ್ತು ನರ್ಸಿಂಗ್ ವಿಭಾಗಗಳ 64,665 ಮಂದಿ ಸೇರಿದಂತೆ 1.49 ಲಕ್ಷ ಸಿಬ್ಬಂದಿ ಸಿದ್ಧವಿದ್ದಾರೆ. ನಗರದ ಹಲವೆಡೆ ಆರೋಗ್ಯ ಸಿಬ್ಬಂದಿಗೆ ವಾಕ್ಸಿನ್ ಬಗ್ಗೆ ತರಬೇತಿ ನೀಡಲಾಗುತ್ತಿದೆ.

Facebook Comments