ಅಧಿಕಾರಿಗಳಿಗೆ ಕೊರೊನಾ ವ್ಯಾಕ್ಸಿನ್

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು ;  ಕೊರೊನಾ ವಾರಿಯರ್ಸ್‍ಗಳಾಗಿ ಫ್ರಂಟ್‍ಲೈನ್‍ನಲ್ಲಿರುವ ವಿವಿಧ ಇಲಾಖೆಗಳ ಅಧಿಕಾರಿಗಳು ಕೊರೊನಾ ವ್ಯಾಕ್ಸಿನ್ ಪಡೆದರು. ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ರಾಕೇಶ್‍ಕುಮಾರ್, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ, ಉಪವಿಭಾಗಾಧಿಕಾರಿ ಅಜಯ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ನಾಗೇಂದ್ರ, ಡಾ.ವೀರಭದ್ರಯ್ಯ ಅವರು ವ್ಯಾಕ್ಸಿನ್ ಪಡೆಯುವ ಮೂಲಕ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಸಿಕೆ ಪಡೆದ ಸಂದರ್ಭದಲ್ಲಿ ಸ್ವಲ್ಪ ನೋವಾಯಿತು. ಕೆಲವು ಗಂಟೆಗಳಲ್ಲಿ ಜ್ವರ ಬರುತ್ತದೆ ಎಂದು ವೈದ್ಯರು ಹೇಳಿದ್ದರು. ಆದರೆ, ಆ ತರಹದ ಯಾವುದೇ ಲಕ್ಷಣಗಳು ನಮಗಾಗಲಿಲ್ಲ. ಆರಾಮವಾಗಿದ್ದೇವೆ. ಹಾಗಾಗಿ ವಾರಿಯರ್ಸ್‍ಗಳು ಯಾವುದೇ ತಪ್ಪು ಮಾಹಿತಿಗೆ ಕಿವಿಗೊಡದೆ ಕಡ್ಡಾಯವಾಗಿ ವ್ಯಾಕ್ಸಿನ್ ಪಡೆಯುವುದು ಸೂಕ್ತ ಎಂದರು.

ಎಸ್‍ಪಿ ಕೋನವಂಶಿಕೃಷ್ಣ ಮಾತನಾಡಿ, ಲಸಿಕೆ ಪಡೆಯುವುದರಿಂದ ಯಾವುದೇ ಪರಿಣಾಮವಾಗುವುದಿಲ್ಲ. ಮುಂಜಾಗ್ರತಾ ಕ್ರಮದಿಂದ ವಾರಿಯರ್ಸ್‍ಗಳು ವ್ಯಾಕ್ಸಿನ್ ಪಡೆಯುವುದು ಸೂಕ್ತ ಎಂದರು. ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಾರಿಯರ್ಸ್ ಗಳು ಸ್ವತಃ ತಾವೇ ಬಂದು ವ್ಯಾಕ್ಸಿನ್ ಪಡೆದುಕೊಂಡರು.

Facebook Comments