ಗರ್ಭಿಣಿಯರಿಗೂ ಕೋವಿಡ್ ಲಸಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.13- ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೀಲಿಯಾದಲ್ಲಿ ಗರ್ಭಿಣಿ ಮಹಿಳೆಯರಿಗೂ ವಾಡಿಕೆಯಂತೆ ಕೋವಿಡ್ ಲಸಿಕೆ ಪಡೆಯಲು ಕರೆ ನೀಡಲಾಗಿದೆ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಗರ್ಭಿಣಿ ಮಹಿಳೆಯಲ್ಲಿ ಇತರರಿಗಿಂತಲೂ ಸೋಂಕು ಹರಡುವ ಪ್ರಮಾಣ ಹೆಚ್ಚಾಗಿದೆ.

ಈ ಹಿನ್ನೆಲೆಯಲ್ಲಿ ಗರ್ಭಿಣಿ ಮಹಿಳೆಯರು ಲಸಿಕೆ ಪಡೆಯಬೇಕು ಎಂದು ಎರಡು ದೇಶಗಳು ಸಲಹೆ ನೀಡಿವೆ. ಸಂಶೋಧನೆಯ ಪ್ರಕಾರ ಗರ್ಭಿಣಿಯರು ಲಸಿಕೆ ಪಡೆದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ. ರಕ್ತ ಹಾಗೂ ಎದೆ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಸೇರ್ಪಡೆಯಾಗಿ ಮಗುವಿನಲ್ಲೂ ಕೋವಿಡ್ ನಿಯಂತ್ರಿಸುವ ಶಕ್ತಿ ಬರಲಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಲಸಿಕೆ ಪಡೆವುದುದ ತಾತ್ಕಾಲಿಕ ಮತ್ತು ಹೆರಿಗೆ ನಂತರದ ಸುರಕ್ಷತೆಗೆ ಅಗತ್ಯವಾಗಿದೆ. ಹಾಲುಣಿಸುವ ಮಹಿಳೆಯರು ಲಸಿಕೆ ಪಡೆದರೆ ಯಾವುದೇ ರೀತಿಯ ಅಪಾಯಗಳಿಲ್ಲ ಮತ್ತು ಲಸಿಕೆ ಪಡೆದ ಮಹಿಳೆಯರು ಗರ್ಭಧಾರಣೆಯನ್ನು ಮುಂದೂಡಬೇಕಿಲ್ಲ ಎಂದು ಹೇಳಲಾಗಿದೆ.

ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡುವುದನ್ನು ನ್ಯೂಜಿಲೆಂಡ್ ಸರ್ಕಾರ ಆಧ್ಯತೆಯನ್ನಾಗಿ ಪರಿಗಣಿಸಿದೆ. ಲಸಿಕೆ ಪಡೆದ ಮಹಿಳೆಯರು ಕೋವಿಡ್ ನಿಂದ ಅಪಾಯಕ್ಕೆ ಸಿಲುಕುವುದು, ತುರ್ತು ಪರಿಸ್ಥಿಗೆ ತಲುಪುವ ಸಾಧ್ಯತೆಗಳು ಕ್ಷೀಣವಾಗಿವೆ ಎಂದು ವರದಿಗಳು ಹೇಳಿವೆ.

Facebook Comments

Sri Raghav

Admin