ಕರೋನಾ ಕಂಟಕ : ಜೂನ್-ಸೆಪ್ಟೆಂಬರ್‌ನಲ್ಲಿ ಐಪಿಎಲ್ ನೆಡೆಸಲು ಚಿಂತನೆ..?

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಮಾ.18- ಕರೋನಾ ಮಹಾಮಾರಿ ಐಪಿಎಲ್‍ಗೆ ಕಂಟಕಪ್ರಾಯವಾಗಿರುವುದರಿಂದ ಏ. 16 ರ ನಂತರ ನಡೆಸಲು ಚಿಂತಿಸಲಾಗಿತ್ತಾದರೂ ಆಗಲೂ ನಡೆಯುವುದು ಅನುಮಾನವಾಗಿರುವುದರಿಂದ ಐಪಿಎಲ್ 13ರ ಆವೃತ್ತಿಯನ್ನು ಜೂನ್ ಅಥವಾ ಸೆಪ್ಟೆಂಬರ್‍ನಲ್ಲಿ ನಡೆಸಲು ಚಿಂತಿಸಲಾಗಿದೆ ಎಂಬ ವರದಿಗಳು ಕೇಳಿಬಂದಿವೆ.

ದೇಶದಲ್ಲಿ ಕರೋನಾ ಮಾರಿಯು ದಿನದಿಂದ ದಿನಕ್ಕೆ ವ್ಯಾಪಕವಾಗುತ್ತಿರುವುದರಿಂದ ಏ.15 ರಿಂದಲೂ ಐಪಿಎಲ್ ಆವೃತಿ ನಡೆಸಲು ಸಾಧ್ಯವಾಗುವುದು ತೀರಾ ಕಡಿಮೆಯಾಗಿರುವುದರಿಂದ ಈ ಬಾರಿಯ ಐಪಿಎಲ್ ಟೂರ್ನಿಯನ್ನು ಜೂನ್- ಸೆಪ್ಟೆಂಬರ್ ನಡುವೆ ನಡೆಸಲು ಐಪಿಎಲ್ ಮಂಡಳಿ ಚಿಂತಿಸಿದೆ ಎಂಬ ಅಂಶಗಳು ಕೇಳಿಬರುತ್ತಿವೆ.

ಈ ಹಿಂದೆ ಹಾಕಿದ ಲೆಕ್ಕಾಚಾರದಂತೆ ಐಪಿಎಲ್ ಅನ್ನು ನಡೆಸುತ್ತೇವೆ ಎಂದು ಬಿಸಿಸಿಐ ಮಂಡಳಿ ಪಣ ತೊಟ್ಟಿತ್ತಾದರೂ ಅದು ಸಾಧ್ಯವಾಗುವುದಿಲ್ಲ ಎಂದು ಅರಿತ ನಂತರ ಮಿನಿ ಐಪಿಎಲ್ ನಡೆಸಲು ಮುಂದಾಗಿತ್ತು ಅದಕ್ಕೆ ಫ್ರಾಂಚೈಸಿಗಳು ಒಪ್ಪದ ಕಾರಣ ಏ.15 ರಿಂದ ನಡೆಸಲು ಪ್ಲ್ಯಾನ್ ಮಾಡಿತ್ತು ಆದರೆ ಈಗ ಅದು ಕೂಡ ಮುಂದೂಡುವ ಸೂಚನೆಗಳಿವೆ.

ಸೆಪ್ಟೆಂಬರ್‍ನಲ್ಲಿ ಯುಎಇ ಮತ್ತು ಐರ್ಲೆಂಡ್ ನಡುವೆ ಟ್ವೆಂಟಿ-20 ಕಪ್‍ಗಾಗಿ ಸ್ಪರ್ಧೆ ನಡೆದರೆ, ಜುಲೈ ಮತ್ತು ಸೆಪ್ಟೆಂಬರ್ ತಿಂಗಳುಗಳ ನಡುವೆ 2020ರ ಎಫ್ಟಿಪಿಗಳು ಐಪಿಎಲ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಆಗ ಐಪಿಎಲ್ 13ರ ಆವೃತ್ತಿಯನ್ನು ನಡೆಸಬಹುದು ಎಂದು ಬಿಸಿಸಿಐ ಹಾಗೂ ಐಪಿಎಲ್ ಮಂಡಳಿ ಚಿಂತನೆ ನಡೆಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದು ವೇಳೆ ಆಗಲೂ ದೇಶದಲ್ಲಿ ಐಪಿಎಲ್ ನಡೆಸಲು ಸಾಧ್ಯವಾಗದಿದ್ದರೆ ವಿದೇಶದಲ್ಲಿ ನಡೆಸಲು ಕೂಡ ಬಿಸಿಸಿಐ ಮುಂದಾಗಿದೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ.

ಸೆಪ್ಟೆಂಬರ್‍ನಲ್ಲಿ ಏಷ್ಯಾ ಕಪ್ ನಡೆಯಬೇಕಿದ್ದು ಅದನ್ನು ಮುಂದೂಡಿ ಆ ವೇಳೆಯಲ್ಲಿ ಐಪಿಎಲ್ ಅನ್ನು ಆಯೋಜಿಸಬಹುದು ಎಂಬ ಲೆಕ್ಕಾಚಾರವನ್ನು ಬಿಸಿಸಿಐ ಹಾಕಿಕೊಂಡಿದೆ.  ಆಗ ಇಂಗ್ಲೆಂಡ್ ಮತ್ತು ಪಾಕಿಸ್ತಾನದ ಮಧ್ಯೆ ಕ್ರಿಕೆಟ್ ಸರಣಿ ಬಿಟ್ಟರೆ ಬೇರೆ ಯಾವ ದೇಶಗಳ ನಡುವೆಯೂ ಪಂದ್ಯಗಳು ನಡೆಯುವುದಿಲ್ಲವಾದ್ದರಿಂದ ಮುಂಬರುವ ಪುರುಷರ ಚುಟುಕು ವಿಶ್ವಕಪ್‍ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಹಿಂದೆ 2009 ಹಾಗೂ 2014ರಲ್ಲೂ ವಿದೇಶಗಳಲ್ಲಿ ಐಪಿಎಲ್ ಅನ್ನು ಆಯೋಜಿಸಲಾಗಿತ್ತು.

Facebook Comments